ಬೆಳಕು ನೀಡದ ಬೀದಿ ದೀಪಗಳು!

Street lights that don't give light!
Street lights that don't give light!
Published on

ತೇರದಾಳ: ಪಟ್ಟಣದ ಸೌಂದರ್ಯೀಕರಣಕ್ಕಾಗಿ ಬಸ್ ನಿಲ್ದಾಣದಿಂದ ಪೊಲೀಸ್ ಠಾಣೆಯವರೆಗೆ ಡಿವೈಡರ್ ಅಳವಡಿಸಿ, ಅದರ ಮಧ್ಯೆ ಸಾಲುಸಾಲಾಗಿ ವಿದ್ಯುತ್ ದೀಪ ಬೆಳಗುವಂತೆ ಮಾಡಿದ್ದರಿಂದ ಕತ್ತಲಾದ ತಕ್ಷಣ ರಸ್ತೆ ಜಗಮಗಿಸುತ್ತಿತ್ತು. ಆದರೆ ಇವುಗಳ ಸೂಕ್ತ ನಿರ್ವಹಣೆ ಕೊರತೆಯಿಂದಾಗಿ ಅಲ್ಲೊಂದು ಇಲ್ಲೊಂದು ದೀಪಗಳು ಮಾತ್ರ ಉರಿಯುತ್ತಿದ್ದು, ಬಹುತೇಕ ಕಡೆ ಮತ್ತೆ ಕತ್ತಲು ಆವರಿಸಿದೆ.

ಇದೇ ಮಾರ್ಗದಲ್ಲಿ ಮದ್ಯದಂಗಡಿಗಳು ಇವೆ. ಇದರಿಂದ ಸಂಜೆಯಾದರೆ ಪೊಕರಿಗಳ ಅಲೆದಾಟ ಹೆಚ್ಚಾಗುತ್ತಿದೆ. ಇಲ್ಲಿನ ವಿದ್ಯುತ್ ದೀಪಗಳನ್ನು ಸರಿಯಾಗಿ ನಿರ್ವಹಣೆ ಮಾಡದೆ ಕತ್ತಲೆಯ ಕೂಪದಲ್ಲಿ ತೇರದಾಳ ಜನತೆ ಓಡಾಡುವಂತಾಗಿದೆ. ನಿವರಗಿ ಟೆಕ್ಸ್‌ಟೈಲ್ ಮುಂಭಾಗದ ವಿದ್ಯುತ್ ದೀಪ ಸುಮಾರು ಒಂಬತ್ತು ತಿಂಗಳಿಂದ ಕಾರ್ಯನಿರ್ವಹಿಸುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ವಿದ್ಯುತ್ ದೀಪಗಳ ನಿರ್ವಹಣೆಗೆ ಪುರಸಭೆಗೆ ಅಧಿಕಾರಿಗಳು ಮತ್ತು ಅಧ್ಯಕ್ಷರ ಗಮನಕ್ಕೆ ಸಾರ್ವಜನಿಕರು ತಂದರೂ ಪ್ರಯೋಜನವಾಗಿಲ್ಲ. ಅವಘಡ ಸಂಭವಿಸುವದಕ್ಕಿಂತ ಮುಂಚೆ ದುರಸ್ತಿಗೆ ಮುಂದಾಗಬೇಕು ಎಂಬುದು ಸಾರ್ವಜನಿಕರ ಆಂಬೋಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net