ಬೆಣ್ಣೆ ಮಸಾಲೆ ದೋಸೆ ಸವಿದ ಸಿಎಂ

3
Published on

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಗರದ ಮೈಲಾರಿ ಹೋಟೆಲ್ ಅಂದರೆ ಅಚ್ಚುಮೆಚ್ಚು. ಸೋಮವಾರ ಸಿದ್ದರಾಮಯ್ಯ ಅಗ್ರಹಾರದ ಮೈಲಾರಿ ಹೋಟೆಲ್‌ನಲ್ಲಿ ಬೆಳಗ್ಗೆ ತಮ್ಮ ಇಷ್ಟದ ಬೆಣ್ಣೆ ಮಸಾಲೆ ದೋಸೆ ಹಾಗೂ ಇಡ್ಲಿ ಸವಿದರು.

ಸಿದ್ದರಾಮಯ್ಯ ಅವರಿಗೆ ಸಚಿವ ಕೆ.ವೆಂಕಟೇಶ್, ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಇತರರು ಸಾಥ್ ನೀಡಿ ತಾವೂ ದೋಸೆ ಸವಿದರು.

ಬಳಿಕ ವರುಣ ವಿಧಾನಸಭಾ ಕ್ಷೇತ್ರದ ಸಿದ್ದರಾಮನಹುಂಡಿ ಗ್ರಾಮದಲ್ಲಿ ನಡೆದ ಕರ್ನಾಟಕ ಪಬ್ಲಿಕ್ ಶಾಲೆಯ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಿಎಂ ಭಾಗಿಯಾದರು.

ಅಹವಾಲು ಸ್ಪೀಕಾರ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net