ಬೆಕ್ಕಳಲೆ ಗ್ರಾ.ಪಂ. ಅಧ್ಯಕ್ಷೆ ಗೌರಮ್ಮ

Published on

ಮದ್ದೂರು: ತಾಲೂಕಿನ ಬೆಕ್ಕಳಲೆ ಗ್ರಾ.ಪಂ.ನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಗೌರಮ್ಮ ಅವಿರೋಧವಾಗಿ ಆಯ್ಕೆಯಾದರು.

ಶುಕ್ರವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಗೌರಮ್ಮ ಅವರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರವನ್ನು ಸಲ್ಲಿಸದ ಕಾರಣ ಚುನಾವಣಾಧಿಕಾರಿಗಳಾಗಿದ್ದ ತಾ.ಪಂ. ಇಒ ರಾಮಲಿಂಗಯ್ಯ ಅವರು ಗೌರಮ್ಮ ಅವರ ಅವಿರೋಧ ಆಯ್ಕೆಯನ್ನು ಘೋಷಿಸಿದರು.

ಉಪಾಧ್ಯಕ್ಷ ಹೊನ್ನೇಗೌಡ (ವಾಣಿ), ಮಾಜಿ ಅಧ್ಯಕ್ಷ ದೇವರಾಜು, ಸದಸ್ಯರಾದ ಶಿವರಾಮಯ್ಯ, ಸಂತೋಷ, ಮೋಹನ್ ಕುಮಾರ್, ವೆಂಕಟೇಶ್, ಜಯಲಕ್ಷ್ಮೀ, ಭಾಗ್ಯಮ್ಮ, ಸುನೀತಾ, ರಾಜಣ್ಣ, ಮುಖಂಡರಾದ ಚಂದ್ರು ಸೇರಿದಂತೆ ಇತರರಿದ್ದರು.

14ಎಂಡಿಆರ್3

ಮದ್ದೂರು ತಾಲೂಕಿನ ಬೆಕ್ಕಳಲೆ ಗ್ರಾ.ಪಂ.ನ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಗೌರಮ್ಮ ಅವಿರೋಧವಾಗಿ ಆಯ್ಕೆಯಾದರು. ಹೊನ್ನೇಗೌಡ, ದೇವರಾಜು, ಶಿವರಾಮಯ್ಯ, ಸಂತೋಷ, ಮೋಹನ್ ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net