

ಕೋಲಾರ: ಭೂಮಿ ಕಳೆದುಕೊಂಡ ಭೂ ಮಾಲೀಕರಿಗೆ ಪರಿಹಾರ ನೀಡದೆ ಚೆನ್ನೈ-ಬೆಂಗಳೂರು ಎಕ್ಸ್ಪ್ರಸ್ ಕಾರಿಡಾರ್ ರಸ್ತೆ ಕಾಮಗಾರಿ ಭರದಿಂದ ನಡೆಸಿದ್ದಾರೆ. ಇದಕ್ಕೆ ಖುದ್ದಾಗಿ ಕಂದಾಯಧಿಕಾರಿಗಳು ರೈತರ ಜಮೀನಿನಲ್ಲಿ ನಿಂತು ಪರಿಹಾರ ನೀಡದೆ ಭೂ ಸ್ವಾಧಿನ ಕಾರ್ಯ ನಡೆಸಿದ್ದಾರೆ ಎಂದು ಆರೋಪಿಸಿ ಅಧಿಕಾರಿಗಳ ವಿರುದ್ದ ರೈತರು ಆಕ್ರೋಶವ್ಯಕ್ತಪಡಿಸಿ ಕಣ್ಣೀರು ಹಾಕಿದ ಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಬೆಳ್ಳಾವೆ ಎಡಗಿನಬೆಲೆಯಲ್ಲಿ ಶನಿವಾರ ನಡೆದಿದೆ.
ಸಂಚಾರದ ಕಾಲಮಿತಿಯನ್ನು ಕಡಿತಗೊಳಿಸಿ ವೇಗ ಮಿತಿಯನ್ನು ಹೆಚ್ಚಿಸುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪ್ರಯತ್ನಕ್ಕೆ ಎಲ್ಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದರೂ ಇದಕ್ಕಾಗಿ ಖಾಸಗಿ ಭೂ ಮಾಲೀಕರಿಗೆ ನ್ಯಾಯಯುತವಾದ ಪರಿಹಾರ ನೀಡದೆ ಅವರನ್ನು ಕಚೇರಿಯಿಂದ ಕಚೇರಿಗೆ ಅಲೆದಾಡಿಸುತ್ತಿರುವ ಅಧಿಕಾರಿಗಳ ಕಾರ್ಯವೈಖರಿ ವ್ಯಾಪಕ ಟೀಕೆಗೆ ಒಳಗಾಗಿದೆ.
ಭೂ ಸ್ವಾಧಿನ ನಿಯಮದಂತೆ ನೋಟಿಫಿಕೇಷನ್ ಹೊರಡಿಸಿ ವರ್ಷದೊಳಗೆ ಪರಿಹಾರ ನೀಡಿ ಭೂ ಸ್ವಾಧಿನಪಡಿಸಿಕೊಳ್ಳಬೇಕು. ತಪ್ಪಿದಲ್ಲಿ ಹೊಸದಾಗಿ ಮತ್ತೊಮ್ಮೆ ಭೂ ಸ್ವಾಧಿನ ಪ್ರಕ್ರಿಯೆ ನಡೆಸಬೇಕು ಎಂದು ನಿಯಮವಿದ್ದರೂ ಕಳೆದ ಆರೇಳು ವರ್ಷಗಳಿಂದ ಭೂ ಮಾಲೀಕರಿಗೆ ಬಿಡಿಗಾಸು ನೀಡದೆ ಸ್ವಾಧಿನದಲ್ಲಿರುವ ಭೂ ಮಾಲೀಕರನ್ನು ಒಕ್ಕಲೆಬ್ಬಿಸಿ ಅವರ ಜೀವನವನ್ನು ಕಸಿದುಕೊಳ್ಳುತ್ತಿರುವುದಕ್ಕೆ ರೈತರು ರೋಧಿಸುತ್ತಿದ್ದಾರೆ.
ಚೆನ್ನೈ-ಬೆಂಗಳೂರು ಕಾರಿಡಾರ್ ಹೆದ್ದಾರಿಗಾಗಿ ಎಷ್ಟು ರೈತರು ತಮ್ಮ ಪೂರ್ವಜರ ಭೂಮಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಅದೇ ರೀತಿಯಲ್ಲಿ ಜಿಲ್ಲೆಯ ಮಾಲೂರು ತಾಲೂಕಿನ ಬೆಳ್ಳಾವೆ ಎಡಗಿನಬೆಲೆ, ಲ್ಮಸಾಗರ ಸೇರಿದಂತೆ ಹತ್ತು ಹಲವಾರು ಗ್ರಾಮಗಳ ಜಮೀನುಗಳಿಗೆ ಹೆದ್ದಾರಿ ಯೋಜನೆ ವ್ಯಾಪಿಸಿದೆ.
ಬೆಳ್ಳಾವೆ ಎಡಗಿನಬೆಲೆ ಸರ್ವೇ ನಂ: 44ರಲ್ಲಿ ಭೂಸ್ವಾಧಿನ ಪ್ರಕ್ರಿಯೆ ನಡೆದಿದ್ದು ಭೂ ಸ್ವಾಧಿನಾಧಿಕಾರಿಗಳ ಬಳಿ ಲ್ಮಸಾಗರ ಗ್ರಾಮ ಕೃಷ್ಣಮೂರ್ತಿ ಪರಿಹಾರಕ್ಕಾಗಿ ಬೇಡಿಕೆಯಿಟ್ಟು ಮಾಧ್ಯಮಗಳ ಮುಂದೆ ಕಣ್ಣೀರಿನಿಂದ ತನ್ನ ಗೋಳು ತೋಡಿಕೊಂಡು ಅಧಿಕಾರಿಗಳಿಗೆ ಹಿಡಿ ಶಾಪ ಹಾಕಿ ಸಾಲ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ತನ್ನ ಗೋಳು ತೋಡಿಕೊಂಡಿದ್ದಾರೆ.
ಚೆನ್ನೈ-ಬೆಂಗಳೂರು ಎಕ್ಸ್ಪ್ರೆಸ್ ಕಾರಿಡಾರ್ ಹೈವೇ ಕಾಮಗಾರಿ, ಭೂಸ್ವಾಧಿನ ಹಣ ನೀಡದೆ ಕಾಮಗಾರಿಗೆ ಮುಂದಾದ ಹಿನ್ನಲೆ, ಕಾಮಗಾರಿ ವಿರೋಧಿಸಿ ನೂರಾರು ರೈತರು ಪ್ರತಿಭಟಿಸಿದ್ದರು. ಎಡಗಿನಬೆಲೆ ಬಳಿ ರೈತರ ಪ್ರತಿಭಟಿಸಿ ಭೂಸ್ವಾಧಿನ ಪಡಿಸಿಕೊಂಡ ಭೂಮಿಗೆ ಹಣ ನೀಡಿಲ್ಲ ಎಂದು ಅರೋಪಿಸಿ ಶನಿವಾರ ನಮ್ಮ ಭೂಮಿಗೆ ನ್ಯಾಯಯುತ ಪರಿಹಾರ ನೀಡಿ ನಂತರ ಭೂಮಿಯನ್ನು ವಶಪಡಿಸಿಕೊಳ್ಳಿ ಎಂದು ಒತ್ತಾಯಿಸಿ ಕಾಮಗಾರಿ ನಡೆಯುತಿರುವ ಸ್ಥಳದಲ್ಲಿ ಪ್ರತಿಭಟನೆ ನಡೆಸಿ ಕಾಮಗಾರಿ ತಡೆಯಲು ಮುಂದಾದರು.
ಆಗ ಸ್ಥಳಕ್ಕೆ ಮಾಲೂರು ಪೊಲೀಸರ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದರು. ಮಾಲೂರು ತಹಸೀಲ್ದಾರ್ ವಿನೋದ್ ಪ್ರತಿಭಟನಾ ರೈತರ ಜತೆ ಸಂಧಾನ ನಡೆಸಿದರು. ಯಾವುದೆ ಪ್ರಯೋಜನೆ ಆಗದೆ ಸಂಧಾನ ವಿಫಲವಾಗಿದೆ. ರೈತರ ಪಟ್ಟುಗೆ ಕ್ರಮಕೈಗೊಳ್ಳಲಾಗದ ತಹಸೀಲ್ದಾರ್ ಕಾರು ಹತ್ತಿ ಹೊರಟು ಹೋದ ಪ್ರಸಂಗ ನಡೆದಿದೆ.
ರೈತರಿಗೆ ಸಿಗಬೇಕಾದ ಪರಿಹಾರವನ್ನು ಒದಗಿಸದೇ ರೈತರ ಮೇಲೆ ಪೊಲೀಸ್ ದರ್ಪ ತೊರಿಸುತ್ತಾರೆ. ಹೆದ್ದಾರಿ ಕಾಮಗಾರಿಗೆ ಅಡ್ಡ ಬಂದ ರೈತರ ಮೇಲೆ ಬೆದರಿಕೆ, ದೌರ್ಜನ್ಯ ಮಾಡುತ್ತಿದ್ದಾರೆ. ರೈತರ ಮೇಲಿನ ದೌರ್ಜನ್ಯಗಳು ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಚ್ಚರಿಕೆ. | ನಾರಾಯಣಗೌಡ, ರೈತ ಮುಖಂಡ
ಚಿತ್ರ 25 ಕೆಎಲ್ಆರ್ 06: ಲ್ಮಸಾಗರ ಗ್ರಾಮದ ರೈತ ಕೃಷ್ಣಮೂರ್ತಿ ಮಾದ್ಯಮದವರೊಂದಿಗೆ ಕಣ್ಣೀರು ಹಾಕುತ್ತಿರುವುದು
ಚಿತ್ರ 25 ಕೆಎಲ್ಆರ್ 06ಅ:
ಲ್ಮಸಾಗರ ಗ್ರಾಮದ ಬಳಿ ಪ್ರತಿಭಟನೆಗೆ ಮುಂದಾದ ರೈತರೊಂದಿಗೆ ತಹಸೀಲ್ದಾರ್ ವಿನೋದ್ ಹಾಗು ಪೊಲೀಸರು ಸಂಧಾನಕ್ಕೆ ಮುಂದಾಗಿರುವುದು.