ಬೆಂ.ನಗರ ವಿವಿ ಕುಲಸಚಿವರಾಗಿ ಶಿವರಾಂ ಮರು ನೇಮಕ

BNU SHIVRAM
Published on

ಈ ಹಿಂದೆ ಕೂಡ ಶಿವರಾಂ ಅವರು ಕುಲಸಚಿವರಾಗಿಯೇ ಕರ್ತವ್ಯನಿರ್ವಹಿಸುತ್ತಿದ್ದರು. ಮೂರು ತಿಂಗಳ ಹಿಂದೆ ರಾಜ್ಯ ಸರ್ಕಾರ ಕುಲಸಚಿವರ ಸ್ಥಾನಕ್ಕೆ ಕೆಎಎಸ್ ಅಧಿಕಾರಿಯನ್ನು ನೇಮಕ ಮಾಡಿತ್ತು. ಇದನ್ನು ಪ್ರಶ್ನಿಸಿ ಶಿವರಾಂ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ತೀರ್ಪು ಶಿವರಾಂ ಪರವಾಗಿ ಬಂದಿತ್ತು. ಆದರೆ, ಸರ್ಕಾರ ಇದನ್ನು ಅನುಸರಿಸಿರಿಲ್ಲ. ಇದು ನ್ಯಾಯಂಗ ನಿಂಧನೆ ಆಗಿದೆ ಎಂದು ಶಿವರಾಂ ಅವರು ಮತ್ತೆ ಕೋರ್ಟ್‌ಗೆ ಹೋಗಿದ್ದರಿಂದ ರಾಜ್ಯ ಸರ್ಕಾರ ಕೋರ್ಟ್‌ನ ಆದೇಶದ ಮೇರೆಗೆ ಇವರನ್ನು ಮರು ನೇಮಕ ಮಾಡಿದೆ. ಈ ಹಿನ್ನೆಲೆಯಲ್ಲಿ ಡಾ.ವಿ.ಶಿವರಾಂ ಅವರು ಶುಕ್ರವಾರ ವಿವಿಗೆ ತೆರಳಿ ಅಧಿಕಾರವಹಿಸಿಕೊಂಡಿದ್ದಾರೆ.

ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಸಚಿವರಾಗಿ ಡಾ.ವಿ.ಶಿವರಾಂ ಅವರನ್ನೇ ಮರು ನೇಮಕ ಮಾಡಿ ಸರ್ಕಾರ ಆದೇಶಿಸಿದೆ.

ಬೆಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net