

ಬೀರೂರು: ಮೈಸೂರು ವಲಯದಲ್ಲೇ ಅತ್ಯಂತ ಸುಂದರ, ಸ್ವಚ್ಛ ರೈಲು ನಿಲ್ದಾಣ ಎಂದು ಹೆಸರು ಪಡೆದಿದ್ದ ಬೀರೂರು ರೈಲು ನಿಲ್ದಾಣ ಈಗ ಸ್ವಚ್ಛತೆಯ ಕೊರತೆಯಿಂದ ಅಪಖ್ಯಾತಿಗೆ ಒಳಗಾಗಿದೆ. ಅಸಮರ್ಪಕ ನಿರ್ವಹಣೆಯಿಂದ ಪ್ರಯಾಣಿಕರು ಹೈರಾಣಾಗಿದ್ದಾರೆ.
ರಾಜ್ಯದ ಪ್ರಮುಖ ರೈಲು ನಿಲ್ದಾಣಗಳಲ್ಲಿ ಬೀರೂರು ಕೂಡ ಒಂದಾಗಿದೆ. ಬ್ರಿಟಿಷರ ಕಾಲದಲ್ಲಿ ನಿರ್ಮಿಸಲಾದ ಅಂದರೆ 160 ವರ್ಷಕ್ಕೂ ಹೆಚ್ಚಿನ ಇತಿಹಾಸವಿರುವ ಹಳೆಯ ಜಂಕ್ಷನ್ ಆಗಿದೆ. ನವದೆಹಲಿ, ಚೆನ್ನೈ, ಜೋಧಪುರ, ಜೈಪುರ, ಮುಂಬೈ, ಅಹಮದಾಬಾದ್ ಸೇರಿದಂತೆ ದೇಶದ ವಿವಿಧ ನಗರಗಳಿಗೆ ಸಂಪರ್ಕ ಕಲ್ಪಿಸುವ ಎಲ್ಲ ರೈಲುಗಳಿಗೆ ಇಲ್ಲಿ ನಿಲುಗಡೆಯೂ ಇದೆ. ಇಂತಹ ನಿಲ್ದಾಣ ಸ್ವಚ್ಛತೆಯಿಂದ ದೂರಾಗಿರುವುದು ವಿಪರ್ಯಾಸ. 22 ವರ್ಷಗಳ ಹಿಂದೆ ಹೊಸ ಕಟ್ಟಡ, ್ಲಾಟ್‌ಾರ್ಮ್‌ಗಳನ್ನು ನಿರ್ಮಿಸಿ ನವೀಕರಣಗೊಳಿಸಲಾಗಿತ್ತು. ಆದರೆ ರೈಲ್ವೆ ನಿಲ್ದಾಣ ನವೀಕರಣದ ಬಳಿಕ ಸ್ವಲ್ಪದಿನ ಉತ್ತಮವಾಗಿ ನಿರ್ವಹಣೆ ಮಾಡಿದ ಸ್ಟೇಷನ್ ಮಾಸ್ಟರ್ ಇತ್ತೀಚಿನ ದಿನಗಳಲ್ಲಿ ಸ್ವಚ್ಛತೆ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ. ಪ್ರತಿದಿನ ಸಾವಿರಾರು ಮಂದಿ ಪ್ರಯಾಣಿಕರು ಈ ಮಾರ್ಗವಾಗಿ ಸಂಚರಿಸುತ್ತಾರೆ. 32-35 ರೈಲುಗಳ ಸಂಚಾರವಿದೆ. ಆದರೆ ದೊಡ್ಡ ನಿಲ್ದಾಣದಲ್ಲಿ ಕೇವಲ 4 ಮಂದಿ ಕಾರ್ಮಿಕರು 2 ಹಂತದಲ್ಲಿ ಸ್ವಚ್ಛತೆಯ ನಿರ್ವಹಣೆ ಮಾಡುತ್ತಿರುವುದು ದುಸ್ತರವಾಗಿದೆ. ಸ್ವಚ್ಛತೆಯ ಕೊರತೆಯಿಂದ ನಿಲ್ದಾಣದಲ್ಲಿ ನಿಲ್ಲಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಎಲ್ಲೆಂದರಲ್ಲಿ ಬಿದ್ದಿರುವ ಕಸ ನಿಲ್ದಾಣದ ಸೌಂದರ್ಯವನ್ನು ಹಾಳುಮಾಡಿದೆ. 1 ಮತ್ತು 2ನೇ ್ಲಾಟ್‌ಾರ್ಮ್‌ನಲ್ಲಿರುವ ಶೌಚಗೃಹ ಕಟ್ಟಡ ಬೀಗ ಹಾಕಿದ್ದು ಅದೂ ಕೂಡ ಗಬ್ಬು ವಾಸನೆಯಿಂದ ಕೂಡಿದೆ. ಕುಡಿಯುವ ನೀರಿನ ಕಟ್ಟೆಗಳು ಅಲ್ಲಲ್ಲಿ ಒಡೆದು ಹೋಗಿವೆ. ಕಸದ ಬುಟ್ಟಿಗಳು ಸಂಪೂರ್ಣ ತುಂಬಿದ್ದು ಗಾಳಿಗೆ ಎಲ್ಲೆಂದರಲ್ಲಿ ಕಸ ಹಾರಿ ಹೋಗುತ್ತಿದೆ. ನಿಲ್ದಾಣದ ಒಳಭಾಗದಲ್ಲಿರುವ ಸ್ಟೋರ್ಸ್ ಮಾಲೀಕರು ಪಕ್ಕದಲ್ಲೇ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸುರಿದುಕೊಂಡು ರಾಶಿ ಮಾಡಿಕೊಂಡಿದ್ದಾರೆ.