ಬೀಚ್ ಗಳಲ್ಲಿ ಆಪರೇಷನ್ ಸುರಕ್ಷಾ

Published on

ಮಂಗಳೂರು: ಮಂಗಳೂರಿನ ನಾಲ್ಕು ಬೀಚ್ ಗಳಲ್ಲಿ ರಾತ್ರಿ ವೇಳೆ ಮದ್ಯ ಸೇವನೆ ಮಾಡುತ್ತಿದ್ದ 70 ಕ್ಕೂ ಅಧಿಕ ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಪಣಂಬೂರು, ತಣ್ಣೀರುಬಾವಿ,ಸುರತ್ಕಲ್, ಸೋಮೇಶ್ವರ ಮೊದಲಾದ ಬೀಚ್ ಗಳಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಕಾಲೇಜು ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಸೆರೆ ಸಿಕ್ಕಿದ್ದಾರೆ.

ಮದ್ಯದ ಬಾಟಲ್ ಗಳು, ಗಾಂಜಾ, ಚೂರಿ, ಕಾರುಗಳು, ಬೈಕ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಎಲ್ಲರಿಗೂ ಪೊಲೀಸ್ ಆಯುಕ್ತ ಶಶಿಕುಮಾರ್ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಕೆಲವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net