ಬಿಸಿಯೂಟ, ಮೊಟ್ಟೆ ಖರೀದಿ ಸಂಕಷ್ಟದಿAದ ಶಿಕ್ಷಕರನ್ನು ಬಿಡುಗಡೆಗೊಳಿಸಿ / ಶಾಲಾ ಶಿಕ್ಷಕರ ಸಂಘದಿAದ ಸಹಾಯಕ ನಿರ್ದೇಶಕ ಸುಬ್ರಮಣಿರಿಗೆ ಮನವಿ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಬಿಸಿಯೂಟ ಸಿದ್ದತೆ, ಮೊಟ್ಟೆ ಖರೀದಿ, ಸಾಗಾಣೆ ಮತ್ತಿತರ ಸಮಸ್ಯೆಗಳಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ಹಿನ್ನಡೆಯಾಗುತ್ತಿದ್ದು, ಈ ಸಂಕಷ್ಟದಿAದ ಶಿಕ್ಷಕರಿಗೆ ಮುಕ್ತಿ ನೀಡಿ ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು ಪ್ರಧಾನಮಂತ್ರಿ ಪೋಷನ್ ಸಮ್ಮಾನ್ ಯೋಜನೆ ಸಹಾಯಕ ನಿರ್ದೇಶಕ ಸುಬ್ರಮಣಿ ರವರಿಗೆ ಸೋಮವಾರ ಮನವಿ ಮಾಡಿದರು.

ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ನಾರಾಯಣಸ್ವಾಮಿ ಮಾತನಾಡಿ, ಶೈಕ್ಷಣಿಕ ಚಟುವಟಿಕೆಗಳು ಮತ್ತು ದಾಖಲೆಗಳ ನಿರ್ವಹಣೆ ಇಂದು ಮಕ್ಕಳ ಕಲಿಕಾ ಅಭಿವೃದ್ದಿ ದೃಷ್ಟಿಯಿಂದ ಅತಿ ಮುಖ್ಯವಾಗಿದ್ದು, ನಿತ್ಯವೂ ತರಕಾರಿ, ಮೊಟ್ಟೆ ಖರೀದಿಗಾಗಿ ಸಮಯ ವ್ಯರ್ಥ, ಸಾಗಾಣೆಕೆಯ ಸಂಕಷ್ಟ ಅನುಭವಿಸುತ್ತಿದ್ದು, ಇದು ಶೈಕ್ಷಣಿಕ ಹಿನ್ನಡೆಗೆ ಕಾರಣವಾಗಿದೆ ಎಂದರು.

ಮೊಟ್ಟೆ ಖರೀದಿ ಬಹುದೊಡ್ಡ ಸಮಸ್ಯೆಯಾಗಿದೆ. ಅನೇಕ ಸಂದರ್ಭದಲ್ಲಿ ಇಲಾಖೆ ನೀಡುವ ಅನುದಾನ ಮೊಟ್ಟೆ ಖರೀದಿಗೆ ಸಾಕಾಗುವುದಿಲ್ಲ, ಶಿಕ್ಷಕರು ತಮ್ಮ ಜೇಬಿನಿಂದ ಖರ್ಚು ಮಾಡಬೇಕಾದ ಪರಿಸ್ಥಿತಿ ಇದೆ ಎಂದು ಮನವರಿಕೆ ಮಾಡಿಕೊಟ್ಟರು.

ಕಡಿಮೆ ಸಂಖ್ಯೆ ಮಕ್ಕಳಿರುವ ಶಾಲೆಗಳಲ್ಲಿ ಬಿಸಿಯೂಟ ನಿರ್ವಹಣೆ ಬಹುದೊಡ್ಡ ಸವಾಲಾಗಿದೆ. ಇಂದಿನ ಬೆಲೆ ಏರಿಕೆ ಸಂದರ್ಭದಲ್ಲಿ ಕಡಿಮೆ ಸಿಜಿ ಅನುದಾನದಲ್ಲಿ ತರಕಾರಿ, ಸಾಂಬಾರು ಪುಡಿ ಮತ್ತಿತರ ವಸ್ತುಗಳ ಖರೀದಿ ದುಸ್ತರವಾಗಿದೆ ಎಂದು ತಿಳಿಸಿದರು.

ಶಿಕ್ಷಕರು, ಚುನಾವಣೆ, ಗಣತಿ, ಮತಪಟ್ಟಿ ತಯಾರಿಕೆ ಮತ್ತಿತರ ಜವಾಬ್ದಾರಿಗಳನ್ನು ನಿರ್ವಹಿಸಬೇಕಾದ ಅನಿವಾರ್ಯತೆ ಇದ್ದು, ಇದರೊಂದಿಗೆ ಮಕ್ಕಳಿಗೆ ಬಿಸಿಯೂಟ, ಮೊಟ್ಟೆ ನಿರ್ವಹಣೆಯೂ ಕಷ್ಟವಾಗಿದೆ. ಮಕ್ಕಳಿಗೆ ಅಕ್ಷರ ಕಲಿಸಬೇಕಾದ ಸಮಯದಲ್ಲಿ ಶಿಕ್ಷಕರು ಇತರೆ ಕೆಲಸಗಳ ಒತ್ತಡ ಅನುಭವಿಸುತ್ತಿದ್ದು, ಇದರಿಂದ ಮುಕ್ತಿ ನೀಡಲು ಕೋರಿದರು.

ಬಿಸಿಯೂಟ ನಿರ್ವಹಣೆಗೆ ಪ್ರತ್ಯೇಕ ಕ್ರಮ ಕೈಗೊಳ್ಳುವ ಮೂಲಕ ಜಿಲ್ಲೆಯ ಶೈಕ್ಷಣಿಕ ಪ್ರಗತಿಯ ಸದುದ್ದೇಶ ಹೊಂದಿರುವ ನಮ್ಮ ಮನವಿಯನ್ನು ಪರಿಗಣಿಸಲು ಕೋರಿದರು.

ಜಿಲ್ಲಾ ನೌಕರ ಸಂಘದ ನಿರ್ದೇಶಕ ಎಸ್.ಬಿ.ವೆಂಕಟಚಲಪತಿಗೌಡ, ಪ್ರಧಾನ ಕಾರ್ಯದರ್ಶಿ ವಿ.ಸೋಮಶೇಖರ್, ಗೌರವಾಧ್ಯಕ್ಷ ಎನ್.ನಾಗರಾಜ್, ಖಜಾಂಚಿ ಪಿ.ಎನ್.ಅಶ್ವತಪ್ಪ, ಉಪಾಧ್ಯಕ್ಷ ಸಿ ನಾರಾಯಣಸ್ವಾಮಿ, ಮಹಿಳಾ ಉಪಾಧ್ಯಕ್ಷೆ ವಿ.ಮಂಜುಳಾ ಸಹಕಾರ್ಯದರ್ಶಿಗಳಾದ ಬಿ.ಎನ್.ಭಾಗ್ಯಮ್ಮ, ಎನ್.ಕೃಷ್ಣಪ್ಪ, ಸಂಘಟನಾ ಕಾರ್ಯದರ್ಶಿಗಳಾದ ಬಿ.ಮುನಿರಾಜು, ಭಾಗ್ಯಲಕ್ಷ÷್ಮಮ್ಮ, ಲೆಕ್ಕಪರಿಶೋಧಕಿ ರುದ್ರಮ್ಮ, ಸಂಘದ ಹಿತೈಷಿಗಳಾದ ಇಬ್ರಾಹಿಂ ಖಾನ್ ಶಾಂತಮ್ಮ ಮತ್ತಿತರರಿದ್ದರು.

ಚಿತ್ರ ೦೭ ಕೆ.ಎಲ್.ಆರ್. ೦೪ : ಶಾಲೆಗಳಲ್ಲಿ ಬಿಸಿಯೂಟ ಸಿದ್ದತೆ, ಮೊಟ್ಟೆ ಖರೀದಿ, ಸಾಗಾಣೆ ಮತ್ತಿತರ ಸಮಸ್ಯೆಗಳಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ಹಿನ್ನಡೆಯಾಗುತ್ತಿದ್ದು, ಈ ಸಂಕಷ್ಟದಿAದ ಶಿಕ್ಷಕರಿಗೆ ಮುಕ್ತಿ ನೀಡಿ ಎಂದು ಆಗ್ರಹಿಸಿ ಪ್ರಾಥಮಿಕಶಾಲಾ ಶಿಕ್ಷಕರ ಸಂಘದ ಪ್ರತಿನಿಧಿಗಳು ಪ್ರಧಾನಮಂತ್ರಿ ಪೋಷನ್ ಸಮ್ಮಾನ್ ಯೋಜನೆ ಸಹಾಯಕ ನಿರ್ದೇಶಕರಿಗೆ ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net