ಬಿತ್ತನೆಗೆ ಕೈಕೊಟ್ಟ ಮಳೆ / ಮಳೆಗಾಗಿ ಕಾಯುತ್ತಿರುವ ರೈತರು / ಒಂದು ತಿಂಗಳಿAದ ಮಳೆಗಾಗಿ ಪರದಾಡುತ್ತಿರುವ ರೈತರು

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಮುಂಗಾರು ಮಳೆ ಪ್ರಾರಂಭದಲ್ಲಿ ಅಬ್ಬರಿಸಿತು. ಆದರೆ ಅದರಿಂದ ರೈತರಿಗೆ ಯಾವುದೇ ರೀತಿಯ ಪ್ರಯೋಜನ ಆಗಲಿಲ್ಲ. ಬಿತ್ತನೆ ಕಾಲದ ಅವಧಿಗಿಂತ ಮುಂಚಿತವಾಗಿ ಮಳೆ ಬಿದ್ದ ಕಾರಣ ಬಿತ್ತನೆ ಮಾಡಲು ಸಾಧ್ಯವಾಗಲಿಲ್ಲ. ಕೃಷಿ ಬೇಸಾಯವನ್ನು ನಂಬಿರುವವರು ರಾಗಿ, ನೆಲಗಡಲೆ, ತೊಗರಿ ಬಿತ್ತನೆ ಮಾಡಲು ಭೂಮಿಯನ್ನು ಹದ ಮಾಡಿಕೊಂಡು ಕಾಯುತ್ತಿದ್ದಾರೆ. ಆದರೆ ಮಳೆ ಸಕಾಲಕ್ಕೆ ಬಾರದೆ ಕೈಕೊಟ್ಟಿದ್ದರಿಂದ ರೈತರು ಆಕಾಶವನ್ನು ಮಳೆಗಾಗಿ ನೋಡುವಂತಾಗಿದೆ.

ಕೋಲಾರ ಜಿಲ್ಲೆ ಕೃಷಿಗೆ ಪ್ರಧಾನವಾಗಿರುವುದರಿಂದ ಮಳೆಯಾಶ್ರಿತ ಬೆಳೆಗಳನ್ನು ಹೆಚ್ಚಾಗಿ ಬೆಳೆಯುತ್ತಾರೆ. ಜಿಲ್ಲೆಯಲ್ಲಿ ರಾಗಿ ಪ್ರಧಾನ ಬೆಳೆಯಾಗಿದೆ. ರಾಗಿ ಬೆಳೆಯಲ್ಲಿ ಅವರೆ, ತೊಗರಿ, ಹಲಸಂದೆಯನ್ನು ಬಿತ್ತನೆ ಮಾಡುತ್ತಾರೆ. ನೆಲಗಡಲೆಯನ್ನು ಪ್ರತ್ಯೇಕವಾಗಿ ಬಿತ್ತನೆ ಮಾಡುತ್ತಾರೆ.

ಬಿತ್ತನೆಗೆ ಕಾಲ ಇದು ಪಕ್ವವಾಗಿದ್ದರು ಮಳೆ ಪ್ರತಿದಿನ ಮೋಡ ಮುಚ್ಚಿದಂತೆ ಕಾಣುತ್ತಿದ್ದು, ಸಂಜೆಯಾದರೆ ಕಣ್ಣಾಮುಚ್ಚಾಲೆ ಆಟ ಆಡುತ್ತಿದೆ. ಅಲ್ಲಲ್ಲಿ ಅಲ್ಪ ಸ್ವಲ್ಪ ಮಳೆ ಬಿದ್ದು, ಮಾಯವಾಗುತ್ತಿದೆ. ಕಳೆದ ಒಂದು ತಿಂಗಳಿAದ ಜಿಲ್ಲೆಯಲ್ಲಿ ಮಳೆ ಬಿದ್ದಿಲ್ಲ. ಮುಂಗಾರು ಪ್ರಾರಂಭದಲ್ಲಿ ಬಿದ್ದ ಮಳೆಗೆ ರೈತರು ಭೂಮಿಯನ್ನು ಉಳುಮೆ ಮಾಡಿಕೊಂಡು ಕಾಯುತ್ತಿದ್ದಾರೆ.

ನೆಲಗಡಲೆಯನ್ನು ಮುಳಬಾಗಿಲು, ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಹೆಚ್ಚಾಗಿ ಬಿತ್ತನೆ ಮಾಡುತ್ತಾರೆ. ಸಕಾಲಕ್ಕೆ ಮಳೆಯಾಗಿದ್ದರೆ ನೆಲಗಡಲೆ ಬೀಜವನ್ನು ನಾಟಿ ಮಾಡಬೇಕಾಗಿತ್ತು. ಜುಲೈ ತಿಂಗಳ ಅರ್ಧಭಾಗ ಕಳೆದರು ಮಳೆ ಕಾಣಿಸಿಕೊಂಡಿಲ್ಲ. ರೈತರು ಬಿತ್ತನೆ ಬೀಜಗಳನ್ನು ಮತ್ತು ರಸಗೊಬ್ಬರಗಳನ್ನು ದಾಸ್ತಾನು ಮಾಡಿಕೊಂಡು ಮಳೆಗಾಗಿ ಕಾಯುವಂತಾಗಿದೆ.

ಬಿತ್ತನೆ ಗುರಿ :

ರಾಗಿ : ೫೪೧೩೬ ಹೆಕ್ಟೇರ್ ಪ್ರದೇಶ

ತೊಗರಿ : ೧೦೦೦ ಸಾವಿರ ಹೆಕ್ಟೇರ್ ಪ್ರದೇಶ

ಹಲಸಂದೆ : ೧೦೦ ಹೆಕ್ಟೇರ್ ಪ್ರದೇಶ

ಅವರೆ : ೫೦೦೦ ಹೆಕ್ಟೇರ್ ಪ್ರದೇಶ

ನೆಲಗಡಲೆ : ೬೦೦೦ ಹೆಕ್ಟೇರ್ ಪ್ರದೇಶ

ರಸಗೊಬ್ಬರ ದಾಸ್ತಾನು :

ಜಿಲ್ಲೆಯಲ್ಲಿ ರಸಗೊಬ್ಬರಗಳು ದಾಸ್ತಾನು ಇದ್ದು, ಯೂರಿಯಾ ೩೬೧೬ ಟನ್, ಡಿಎಪಿ ೧೬೫೭ ಟನ್, ಎಂ.ಓ.ಪಿ. ೨೬೬ ಟನ್, ಎನ್.ಪಿ.ಕೆ. ೫೭೧೭, ಎಸ್.ಎಸ್.ಪಿ. ೨೧೯, ಒಟ್ಟು ೧೧೪೩೭ ಟನ್‌ರಷ್ಟು ರಸಗೊಬ್ಬರ ಜಿಲ್ಲೆಯಲ್ಲಿ ದಾಸ್ತಾನು ಇದೆ. ಅದರಂತೆ ಎಲ್ಲಾ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳು ಸಾಕಷ್ಟು ದಾಸ್ತಾನು ಇದ್ದು, ಈಗಾಗಲೇ ರೈತರು ಬಿತ್ತನೆ ಬೀಜಗಳನ್ನು ರೈತ ಸಂಪರ್ಕ ಕೇಂದ್ರದಿAದ ಪಡೆದುಕೊಂಡಿದ್ದಾರೆ.

ಚಿತ್ರ ೧೫ : ಕೆ.ಎಲ್.ಆರ್. ೦೧ : ಬಿತ್ತನೆಗಾಗಿ ಉಳುಮೆ ಮಾಡಿಕೊಂಡು ಕಾಯುತ್ತಿರುವ ರೈತರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net