ಬಿಜೆಪಿಯಿಂದ 10 ಕೋಟಿ ಸದಸ್ಯತ್ವ ನೋಂದಣಿ ಗುರಿ

CTD BJP....
Published on

ಚಿತ್ರದುರ್ಗ: ಅಕ್ಟೋಬರ್‌ನಲ್ಲಿ ಎದುರಾಗಲಿರುವ ಜಿಪಂ, ತಾಪಂ ಚುನಾವಣೆಗಳಿಗೆ ಪೂರಕವಾಗಿ ಬಿಜೆಪಿ ಸದಸ್ಯತ್ವ ಅಭಿಯಾನ ಆರಂಭಿಸಲಾಗಿದೆ ಎಂದು ಸಂಸದ ಗೋವಿಂದ ಎಂ.ಕಾರಜೋಳ ಹೇಳಿದರು.
ನಗರದ ಜಗಳೂರು ಮಹಾಲಿಂಗಪ್ಪ ಕಫಂರ್ಟ್ಸ್‌ನಲ್ಲಿ ಮಂಗಳವಾರ ಏರ್ಪಡಿಸಿದ್ದ ಪಕ್ಷದ ಸದಸ್ಯತ್ವ ಅಭಿಯಾನ ಕಾರ‌್ಯಾಗಾರದಲ್ಲಿ ಮಾತ ನಾಡಿದ ಅವರು, ಈ ವರ್ಷ ಇಡೀ ದೇಶದಲ್ಲಿ 10 ಕೋಟಿ ಸದಸ್ಯರ ಗುರಿ ಇದೆ. ಪ್ರತಿ ಬೂತ್‌ನಲ್ಲಿ ಕನಿಷ್ಠ 300 ಜನರು ಸದಸ್ಯರಾಗ ಬೇಕು, ಇವರಲ್ಲಿ 100 ಮಹಿಳೆಯರು ಇರಬೇಕೆಂದ ಅವರು, ಅಭಿಯಾನದ ಸಂದರ್ಭದಲ್ಲಿ ಕೇಂದ್ರದ ಯೋಜನೆ, ಸಾಧನೆಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡುವಂತೆ ಕಾರ‌್ಯಕರ್ತರಿಗೆ ಸೂಚಿಸಿದರು.
ಬಿಜೆಪಿ ಕಾರ್ಯಕರ್ತರ ಪಕ್ಷವಾಗಿದ್ದು, ಸಾಮಾನ್ಯ ಕಾರ್ಯಕರ್ತ ಕೂಡ ಉನ್ನತ ಹುದ್ದೆಗೆ ಏರಬಹುದೆಂದು ಪ್ರಧಾನಮಂತ್ರಿ ನರೇಂ ದ್ರಮೋದಿ ಅವರು ತೋರಿಸಿದ್ದಾರೆ. ಪಕ್ಷ ತಾಯಿ ಇದ್ದಂತೆ. ಅದಕ್ಕೆ ದ್ರೋಹ ಮಾಡದೇ ಆತ್ಮವಿಶ್ವಾಸದಿಂದ ಕೆಲಸ ಮಾಡಿದರೆ ಉನ್ನತ ಸ್ಥಾನ ಲಭ್ಯವಾಗಲಿದೆ. ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಯಾವುದೇ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ. ರೌಡಿಗಳ ಅಟ್ಟಹಾಸ, ಕೊಲೆ, ಸುಲಿಗೆ, ಅತ್ಯಾಚಾರಂಥ ಪ್ರಕರಣಗಳು ಹೆಚ್ಚಾಗಿದೆ ಎಂದರು.
ಶಾಸಕ ಡಾ.ಎಂ.ಚಂದ್ರಪ್ಪ ಅವರು ಮಾತನಾಡಿ, 2018ರ ಸದಸ್ಯತ್ವ ಅಭಿಯಾನದಲ್ಲಿ 8 ಕೋಟಿ ಸದಸ್ಯರ ನೋಂದಣಿಯಾಗಿತ್ತು. ಈಗ 10 ಕೋಟಿ ಸದಸ್ಯರ ಗುರಿ ಇದೆ. ಹೊಳಲ್ಕೆರೆಯಲ್ಲಿ 80 ಸಾವಿರ ಸದಸ್ಯರನ್ನಾಗಿ ಮಾಡಲಾಗಿತ್ತು. ಇದರಿಂದಾಗಿ ಹೆಚ್ಚಿನ ಮತಗಳನ್ನು ಪಡೆಯಲು ಸಾಧ್ಯವಾಗಿತ್ತು ಎಂದರು.
ಅಧ್ಯಕ್ಷತೆ ವಹಿಸಿದ್ದ ಪಕ್ಷದ ಜಿಲ್ಲಾಧ್ಯಕ್ಷ ಎ.ಮುರಳಿ ಮಾತನಾಡಿ, ಸೆಪ್ಟೆಂಬರ್ 2 ರಿಂದ ದೂರವಾಣಿ ಮೂಲಕ ಸದಸ್ಯತ್ವ ಪಡೆಯಲು ಅವಕಾಶವಿದೆ. 100 ರೂ.ಪಾವತಿಸಿ ಸದಸ್ಯತ್ವ ಪಡೆಯಬಹುದಾಗಿದೆ ಎಂದರು.
ಜಿ.ಪಂ.ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಬಾಳೆಕಾಯಿ ರಾಮದಾಸ್, ಸುರೇಶ್ ಸಿದ್ದಾಪುರ, ಸಂಪತ್‌ಕುಮಾರ್, ಮಲ್ಲಿಕಾರ್ಜುನ್, ರೂಪಾ ಸುರೇಶ್, ಮಂಜುನಾಥ್, ಕೆ.ಎಸ್. ಕಲ್ಮಠ್, ರಾಜು, ನಾಗರಾಜ್ ಬೇದ್ರೆ ಮತ್ತಿತರರು ಇದ್ದರು.

ಕೋಟ್
ಜಿಪಂ, ತಾಪಂ, ಎಪಿಎಂಸಿ ಚುನಾವಣೆಗಳು ಕಾರ್ರ‌್ಯಕರ್ತರ ಚುನಾವಣೆಗಳಾಗಿದ್ದು, ಪಕ್ಷಕ್ಕಾಗಿ ದುಡಿವ ಕಾರ್ಯಕರ್ತರನ್ನು ಈ ಚುನಾ ವಣೆಗಳಲ್ಲಿ ಹುರಿದುಂಬಿಸಬೇಕಿದೆ. ಸೆಪ್ಟೆಂಬರ್ 1 ರಿಂದ 30 ರವರೆಗೆ ಈ ಅಭಿಯಾನ ನಡೆಯಲಿದೆ.
ಡಾ.ಎಂ.ಚಂದ್ರಪ್ಪ,ಶಾಸಕ ಹೊಳಲ್ಕೆರೆ

(ಸಿಟಿಡಿ 27 ಬಿಜೆಪಿ)
ಚಿತ್ರದುರ್ಗದಲ್ಲಿ ಮಂಗಳವಾರ ಏರ್ಪಡಿಸಿದ್ದ ಬಿಜೆಪಿ ಸದಸ್ಯತ್ವ ಅಭಿಯಾನ ಕಾರ‌್ಯಾಗಾರದಲ್ಲಿ ಸಂಸದ ಗೋವಿಂದ ಎಂ.ಕಾರಜೋಳ, ಶಾಸಕ ಡಾ.ಎಂ.ಚಂದ್ರಪ್ಪ, ಸೌಭಾಗ್ಯ ಬಸವರಾಜನ್, ಎ.ಮುರಳಿ, ಸುರೇಶ್ ಸಿದ್ದಾಪುರ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net