ಬಿಜೆಪಿಯವರ ನಾಲಿಗೆ ಹಿಡಿತ ಕಳೆದುಕೊಂಡಿದೆ / ನಾಯಿ ಕಚ್ಚಿದವರ ಹಾಗೆ ಮಾತನಾಡುತ್ತಾರೆ / ಹಳ್ಳಿಗಳಲ್ಲಿ ನೀಡುವ ಹುಚ್ಚು ಔಷಧಿ ನೀಡಬೇಕಾಗಿದೆ / ಶಾಸಕ ಕೆ.ವೈ.ನಂಜೇಗೌಡ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಬಿಜೆಪಿಯವರಿಗೆ ಇತ್ತೀಚೆಗೆ ಹುಚ್ಚು ಹಿಡಿದಿದೆ. ಹೀಗಾಗಿ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಕಾಂಗ್ರೇಸ್‌ನ ಎಲ್ಲರ ಮೇಲೂ ಮಾತನಾಡುತ್ತಿದ್ದಾರೆ. ಹೀಗಾಗಿ ಅವರಿಗೆ ಎಲ್ಲಾದರೂ ಹುಚ್ಚು ಔಷಧಿ ಕೊಡಿಸಬೇಕು ಎಂದು ಮಾಲೂರು ಶಾಸಕ ಕೆ.ವೈ.ನಂಜೇಗೌಡ

ಕಿಡಿಕಾರಿದರು.

ನಗರ ಹೊರವಲಯದ ಜಿಲ್ಲಾಡಳಿತ ಭವನದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಹಿಂದೆ ಹುಚ್ಚುನಾಯಿ ಕಚ್ಚಿದ್ದರೆ ಹಳ್ಳಿಗಳಲ್ಲಿ ಔಷಧಿ ನೀಡುತ್ತಿದ್ದರು, ಹಾಗೆಯೇ ಬಿಜೆಪಿ ರವರಿಗೆ ಹಳ್ಳಿಗಳಲ್ಲಿ ನೀಡುತ್ತಿದ್ದ ಹುಚ್ಚು ಔಷಧಿಯನ್ನು ಕೊಡಿಸಬೇಕಿದೆ ಎಂದು ವ್ಯಂಗ್ಯವಾಡಿದರು.

ಕೂತರೆ, ನಿಂತರೆ ಕಾಂಗ್ರೇಸ್ ಪಕ್ಷ ಉದ್ಧಾರವಾಗುತ್ತಿದೆ. ಉಪ ಚುನಾವಣೆಯಲ್ಲಿ ಕಾಂಗ್ರೆಸ್ ೩ ಸ್ಥಾನ ಜಯಗಳಿಸುತ್ತದೆ ಎಂದು ಬಿಜೆಪಿಯವರು ಕನಸಿನಲ್ಲಿಯೂ ಅಂದುಕೊAಡಿರಲಿಲ್ಲ. ಆದರೆ ರಾಜ್ಯದ ಜನತೆ ಕಾಂಗ್ರೆಸ್ ಸರ್ಕಾರದ ಪರ ಇದ್ದಾರೆ. ಹಾಗಾಗಿ ಬಿಜೆಪಿಯವರು ಒಂದಲ್ಲಾ ಒಂದು ವಿಚಾರಗಳ ಬಗ್ಗೆ ಮಾತನಾಡುತ್ತಾರೆ. ಆದರೆ ಯಾವುದರಲ್ಲೂ ಸಫಲರಾಗುವುದಿಲ್ಲ. ಕಾರಣ ಬಿಜೆಪಿಯಲ್ಲಿ ೩ ಗುಂಪುಗಳಿವೆ ಎಂದು ಲೇವಡಿ ಮಾಡಿದರು.

ಬಿಜೆಪಿಯವರದ್ದು ತಿರುಕನ ಕನಸಾಗಿದ್ದು, ನೂರು ವಿಚಾರಗಳನ್ನು ನಮ್ಮ ವಿರುದ್ಧ ಮಾತನಾಡಿದರೂ ಎದೆಗುಂದುವ ಅವಕಾಶವಿಲ್ಲ. ಕೆ.ಎಸ್.ಈಶ್ವರಪ್ಪರ ಮೇಲೆ ನೇರವಾಗಿ ಚಾರ್ಜ್ ಮಾಡಿದ್ದರು. ಹಾಗಾಗಿ ರಾಜೀನಾಮೆ ನೀಡಬೇಕಾಯಿತು. ಆದರೆ ಪ್ರಿಯಾಂಕ್ ಖರ್ಗೆ ಬಹಳ ಆಕ್ಟಿವ್ ಲೀಡರ್, ಕ್ಲೀನ್ ಹ್ಯಾಂಡ್ ಧೈರ್ಯವಾಗಿ ಮಾತನಾಡುತ್ತಾರೆ ಎನ್ನುವ ಕಾರಣಕ್ಕೆ ಅವರ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದು, ಇವರ ಭಯಕ್ಕೆ ಖರ್ಗೆ ಹೆದರುವುದಿಲ್ಲ ಎಂದರು.

ರಾಜ್ಯದಲ್ಲಿ ನಮ್ಮದೇ ಸರ್ಕಾರ, ಒಳ್ಳೆಯ ಜಿಲ್ಲಾ ಮಂತ್ರಿ ಇದ್ದಾರೆ. ಆದರೆ, ಜಿಲ್ಲೆಯಲ್ಲಿ ೪ ಮಂದಿ ಶಾಸಕರಿದ್ದರೂ ಜಿಲ್ಲೆಯವರಿಗೆ ಸಚಿವ ಸ್ಥಾನ ಇಲ್ಲದೇ ಇರುವುದು ಬಹಳ ನೋವಿನ ಸಂಗತಿಯಾಗಿದ್ದು, ಹೈಕಮಾಂಡ್ ಯಾರಿಗೇ ಸಚಿವ ಸ್ಥಾನ ನೀಡಿದರೂ

ಒಪ್ಪಿಕೊಳ್ಳುತ್ತೇವೆ ಎಂದರು.

ಹಾಲಿನ ದರ ಹೆಚ್ಚಳದ ಕುರಿತು ಪ್ರತಿಕ್ರಿಯಿಸಿ, ಹಾಲು ಉತ್ಪಾದಕರಿಗೆ ಹೆಚ್ಚಿನ ದರ ನೀಡಬೇಕೆನ್ನುವುದು ನಮ್ಮ ಬೇಡಿಕೆ ಹಾಗೂ ಮುಖ್ಯಮಂತ್ರಿಗಳ ಉದ್ದೇಶವೂ ಆಗಿದೆ. ಹೊರ ರಾಜ್ಯಗಳಲ್ಲಿ ನಮ್ಮ ರಾಜ್ಯಕ್ಕಿಂತಲೂ ಹೆಚ್ಚಿನ ದರವಿದೆ. ಹಾಲು ಉತ್ಪಾದಕರಿಗೆ ಅನುಕೂಲವಾಗುವಂತೆ ತೀರ್ಮಾನ ಮಾಡಲಿದ್ದಾರೆ. ಕೋಚಿಮುಲ್ ಆಡಳಿತ ಮಂಡಳಿಗೆ ಚುನಾವಣೆ ನಡೆಯುವ ಸಂಬAಧ ನ್ಯಾಯಾಲಯದಲ್ಲಿ ಇತ್ಯರ್ಥವಾದ ಕೂಡಲೇ ಚುನಾವಣೆ ನಡೆಯಲಿದೆ ಎಂದರು.

ಕೋಚಿಮುಲ್ ಸರ್ಕಾರದ ಅಂಗಸAಸ್ಥೆ. ರೈತರ ಹಾಲು ಉತ್ಪಾದಕರ ಅನುಕೂಲಕ್ಕಾಗಿ ದೇಶದಲ್ಲೇ ಪ್ರಥಮಬಾರಿಗೆ ಕೋಲಾರ ತಾಲೂಕಿನಲ್ಲಿ ಸೋಲಾರ್ ಘಟಕ ಸ್ಥಾಪಿಸಲಾಗುತ್ತಿದೆ. ಅದಕ್ಕಾಗಿ ಜಮೀನು ನೀಡಲಾಗಿದೆ ಹೊರತು ಕಾಂಗ್ರೆಸ್ ಶಾಸಕ ನಂಜೇಗೌಡರಿಗೆ ಕೊಟ್ಟಿಲ್ಲ

ಎನ್ನುವುದನ್ನು ಅದರ ಬಗ್ಗೆ ಮಾತನಾಡುವವರು ಅರಿತುಕೊಳ್ಳಬೇಕೆಂದು ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.

ಬಸ್ ಟಿಕೆಟ್ ದರ ಏರಿಕೆ ಕಾಂಗ್ರೆಸ್ ಸರ್ಕಾರದಲ್ಲಿ ಮಾತ್ರ ಆಗಿರುವುದಲ್ಲ. ಈ ಪ್ರಕ್ರಿಯೆ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಶಕ್ತಿ ಯೋಜನೆಯಿಂದ ಮಹಿಳೆಯರು ತೃಪ್ತಿಯಾಗಿದ್ದಾರೆ, ಪುರುಷರು ವಿರೋಧ ಮಾಡುತ್ತಿಲ್ಲ. ಬಸ್ಸಿನಂತೆಯೇ ರೈಲಿನ ಟಿಕೆಟ್ ಧರವೂ ಏರಿಕೆಯಾಗುವುದಿಲ್ಲವೇ ಎಂದು ಪ್ರಶ್ನಿಸಿ ಟಿಕೆಟ್ ದರ ಹೆಚ್ಚಳದಿಂದ ಸಾರ್ವಜನಿಕರಿಗೆ ಹೊರೆಯಾಗದೆ, ಇನ್ನಷ್ಟು ಸೌಲಭ್ಯ ಸಿಕ್ಕಂತಾಗುತ್ತದೆ ಎನ್ನುವುದು ನನ್ನ ಅಭಿಪ್ರಾಯವಾಗಿದೆ ಎಂದರು.

ಸಾರಿಗೆ ನೌಕರರ ಮುಷ್ಕರವು ವಿವಿಧ ಬೇಡಿಕೆಗಳಿಗೆ ಮುಂದಾಗಿದ್ದಾರೆ ಹೊರತು ವೇತನದ ವಿಚಾರವಾಗಿ ಅಲ್ಲವೆಂದು ಸ್ಪಷ್ಟಪಡಿಸಿ, ಬಿಜೆಪಿಯವರಿಗೆ ಬೇರೆ ಏನು ಕೆಲಸವಿಲ್ಲ. ಹೀಗಾಗಿ ಇಂತಹ ವಿಚಾರಗಳ ಬಗ್ಗೆ ಮಾತನಾಡುತ್ತಾರೆ. ಅದನ್ನು ಬಿಟ್ಟು ಕೇಂದ್ರದ ಮೇಲೆ ಒತ್ತಡ ಹಾಕಿ ಪೆಟ್ರೋಲ್ ಡೀಸೆಲ್ ಬೆಲೆ ಕಡಿಮೆ ಮಾಡಿಸಲಿ ಎಂದು ಟಾಂಗ್ ನೀಡಿದರು.

ಈ ಸಂದರ್ಭದಲ್ಲಿ ಮಾಲೂರು ಮಾಜಿ ಶಾಸಕ ನಾಗರಾಜ್, ಪುರಸಭಾ ಅಧ್ಯಕ್ಷ ಕೋಮಲ ನಾರಾಯಣ್, ಮುಖಂಡರಾದ ಅಶ್ವಥ್‌ರೆಡ್ಡಿ, ಹನುಮಂತಯ್ಯ, ವಿಜಯನರಸಿಂಹ, ನಯೀಮ್, ರಾಜಪ್ಪ, ಮುರಳೀಧರ್, ನವೀನ್ ಮುಂತಾದವರಿದ್ದರು.

ಚಿತ್ರ ೦೩ ಕೆ.ಎಲ್.ಆರ್. ೦೨ : ಮಾಲೂರು ಶಾಸಕ ಕೆ.ವೈ.ನಂಜೇಗೌಡ ನಗರದ ಜಿಲ್ಲಾಧಿಕಾರಿಗಳ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net