ಬಿಜೆಪಿ ಸರ್ಕಾರದಿಂದ ಧರ್ಮ ಸಂಘರ್ಷ

24- k.m.vadi (2)
.ಹುಣಸೂರು ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದ ಹೊರವಲಯದಲ್ಲಿ ಆಯೋಜಿಸಿದ್ದ ಫೆಡರೇಷನ್ ಆಫ್ ಇಂಡಿಯಾ ಟ್ರೇಡ್ ಯೂನಿಯನ್ಸ್ (ಎಫ್‌ಐಟಿಯು) ಕರ್ನಾಟಕ ವತಿಯಿಂದ ಹಮ್ಮಿಕೊಂಡಿದ್ದ ಸದಸ್ಯರ ಸಶಕ್ತೀಕರಣ ಶಿಬಿರವನ್ನು ತೆಂಗಿನ ಸಿಸಿ ನೆಡುವ ಮೂಲಕ ಉದ್ಘಾಟಿಸಿದರು.
Published on

ಎಫ್‌ಐಟಿಯು ರಾಜ್ಯಾಧ್ಯಕ್ಷ ಸುಲೆಮಾನ್ ಕಲರ್ ಫೇ ಪುತ್ತೂರು ಅಭಿಮತ

ಟ್ಟೆಮಳಲವಾಡಿ: ಕಾರ್ಮಿಕರು ಈ ದೇಶದ ಯೋಧರಂತೆ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಫೆಡರೇಷನ್ ಆಫ್ ಇಂಡಿಯಾ ಟ್ರೇಡ್ ಯೂನಿಯನ್ ರಾಜ್ಯಾಧ್ಯಕ್ಷ ಸುಲೆಮಾನ್ ಕಲರ್ ಫೇ ಪುತ್ತೂರು ತಿಳಿಸಿದರು.


ಹುಣಸೂರು ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದ ಹೊರವಲಯದಲ್ಲಿ ಶನಿವಾರ ಆಯೋಜಿಸಿದ್ದ ಫೆಡರೇಷನ್ ಆಫ್ ಇಂಡಿಯಾ ಟ್ರೇಡ್ ಯೂನಿಯನ್(ಎಫ್‌ಐಟಿಯು) ಕರ್ನಾಟಕ ಇವರು ಹಮ್ಮಿಕೊಂಡಿದ್ದ ಸದಸ್ಯರ ಸಶಕ್ತೀಕರಣ ಶಿಬಿರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.


ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ 7 ವರ್ಷದಲ್ಲಿ ಸುಮಾರು 53,800 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಧಿಕಾರ ಹಿಡಿಯಲು 285 ಶಾಸಕರನ್ನು ಖರೀದಿಸಲು 68 ಸಾವಿರ ಕೋಟಿ ರೂ. ಖರ್ಚು ಮಾಡಿ ತಮ್ಮ ಪಕ್ಷ ಹಾಗೂ ಅವರ ಸಿದ್ಧಾಂತವನ್ನು ಚಾಲನೆಗೆ ತರುವ ಮೂಲಕ ಧರ್ಮ ಧರ್ಮದ ನಡುವೆ ಸಂಘರ್ಷಕ್ಕೆ ಎಡೆಮಾಡಿ ಸಂವಿಧಾನದ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಇದರಿಂದ ಬಡವರು, ಕಾರ್ಮಿಕರು, ಮಕ್ಕಳ ಹಣವನ್ನು ದುರ್ಬಳಕೆ ಮಾಡಿಕೊಂಡು ಆಡಳಿತ ನಡೆಸುತ್ತಿರುವ ಈ ಸರ್ಕಾರ ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದರು.


ಎಫ್.ಐ.ಟಿ.ಯು. ರಾಷ್ಟ್ರೀಯ ಅಧ್ಯಕ್ಷ ಕೇರಳದ ರಜಕ್ ಪಾಲೇರಿ ಮಾತನಾಡಿದರು. ಸಂಚಾಲಕ ವಿರಾಜಪೇಟೆಯ ಸಿರಾಜ್, ಮಂಗಳೂರಿನ ಅಬುಲ್ ಖಾದರ್, ಉಪಾಧ್ಯಕ್ಷ ದಿವಾಕರ್ ರಾವ್, ಕಾರ್ಯದರ್ಶಿ ರಾಜನಾಯಕ್ ಹಾಜರಿದ್ದರು. ಮಡಿಕೇರಿ, ರಾಯಚೂರು, ಮಂಗಳೂರು, ಕೊಯಮುತ್ತೂರು ಭಾಗದ ಕಾರ್ಯಕರ್ತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net