ಬಿಜೆಪಿ ಸಂಘಟನಾ ಪ್ರವಾಸ ಇಂದಿನಿಂದ; ರಾಜ್ಯ ನಾಯಕರ ಮೂರು ತಂಡಗಳು ಸಜ್ಜು

CM
ಉಡುಪಿ ಅಜ್ಜರಕಾಡು ಪುರಭವನದ ಬಳಿ ನಿರ್ಮಾಣಗೊಂಡಿರುವ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ವಿದ್ಯಾವಾಚಸ್ಪತಿ ಡಾ.ಬನ್ನಂಜೆ ಗೋವಿಂದಾಚಾರ್ಯ ಪುತ್ಥಳಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ಅನಾವರಣಗೊಳಿಸಿದರು. ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಶಾಸಕ ರಘುಪತಿ ಭಟ್ ಮೊದಲಾದವರಿದ್ದರು.
Published on

ಬೆಂಗಳೂರು: ಸಂಘಟನೆ ಬಲಿಷ್ಠವಾಗಿದೆ ಎಂದು ಆಡಳಿತರೂಢ ಬಿಜೆಪಿ ವಿರಮಿಸದೆ, ಪರಿಶ್ರಮ ಹಾಗೂ ಕ್ರಿಯಾಶೀಲತೆ ಕಾಯ್ದಿಟ್ಟುಕೊಳ್ಳಲೆಂದು ಸಂಘಟನೆ ಬಲರ್ವಧನೆ ಪ್ರವಾಸವನ್ನು ಮಂಗಳವಾರ ಆರಂಭಿಸಲಿದೆ.

ಸಿಎಂ ಬಸವರಾಜ ಬೊಮ್ಮಾಯಿ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಅರುಣ್ ಸಿಂಗ್, ಸಿ.ಟಿ.ರವಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಪಕ್ಷದ ರಾಜ್ಯಾಧ್ಯಕ್ಷರ ನೇತೃತ್ವದ ಮೂರು ಪ್ರತ್ಯೇಕ ತಂಡಗಳು ಸಜ್ಜಾಗಿವೆ. ಮೂರೂ ತಂಡಗಳು ವಿಭಾಗವಾರು ಸಭೆಗಳಿಗೆ ತಲಾ ಎರಡು ದಿನ ಮೀಸಲಿಟ್ಟಿವೆ. ಏ.24ರವರೆಗೆ ರಾಜ್ಯ ನಾಯಕರು ಸಂಚಾರ ಕೈಗೊಳ್ಳಲಿದ್ದು, ತಳಸ್ತರದ ಕಾರ್ಯಕರ್ತರೊಂದಿಗೆ ಸಮಾಲೋಚಿಸಿ ನಿಕಟತೆ ಗಟ್ಟಿಗೊಳಿಸಲು ಮುಂದಾಗಿದ್ದಾರೆ. ಕೇಂದ್ರ, ರಾಜ್ಯ ಸರ್ಕಾರದ ಯೋಜನೆಗಳು, ಕಾರ್ಯಕ್ರಮಗಳ ಪ್ರಚಾರಕ್ಕೆ ಹೊಳಪು ಮತ್ತು ಎಲ್ಲ ಹಂತದ ಕಾರ್ಯಕರ್ತರಲ್ಲಿ ಹುರುಪು ತುಂಬಲೆಂದು ರಾಜ್ಯ ನಾಯಕರು ಹೊರಟಿದ್ದಾರೆ. ಜಿಲ್ಲಾ, ಮಂಡಲಮಟ್ಟದ ಪದಾಧಿಕಾರಿಗಳ ಜತೆಗೆ ಪೂರ್ವಭಾವಿ ಸಭೆ, ಚರ್ಚೆ ನಡೆಸಿದ್ದು, ಬೇಸಿಗೆಯ ಪ್ರಖರ ಬಿಸಿಲು ನಡುವೆ ವಿಭಾಗವಾರು ಸಂಘಟನಾ ಸಭೆಗಳಿಗೆ ಭೂಮಿಕೆ ಸಿದ್ಧವಾಗಿದೆ. ಹೊಸಪೇಟೆಯಲ್ಲಿ ಏ.16, 17ರಂದು ನಡೆಯಲಿರುವ ಪಕ್ಷದ ರಾಜ್ಯ ಕಾರ್ಯಕಾರಿಣಿಯಲ್ಲಿ 2ನೇ ಹಂತದ ಪ್ರವಾಸ ನೀಲಿನಕ್ಷೆ ಅಂತಿಮಗೊಳ್ಳುವ ಸಾಧ್ಯತೆಗಳಿವೆ ಎಂದು ಮೂಲಗಳು ಮಾಹಿತಿ ನೀಡಿವೆ.

ರಾಜ್ಯ ಸರ್ಕಾರ ಆರ್ಥಿಕ ಪುನಶ್ಚೇತನಕ್ಕೆ ಆದ್ಯತೆ ನೀಡುತ್ತಿದೆ. ವಿದ್ಯುತ್ ಮತ್ತು ಸಾರಿಗೆ ಕ್ಷೇತ್ರ ಸ್ವಂತ ಬಲದಲ್ಲಿ ಮುನ್ನಡೆಯುವಂತೆ ಯೋಜನೆ ರೂಪಿಸಲಾಗುತ್ತಿದೆ. ಸಾರಿಗೆ ಕ್ಷೇತ್ರ ಉನ್ನತೀಕರಣ ನಿಟ್ಟಿನಲ್ಲಿ ನಿವೃತ್ತ ಅಧಿಕಾರಿ ಶ್ರೀನಿವಾಸಮೂರ್ತಿ ನೇತೃತ್ವದಲ್ಲಿ ಉನ್ನತ ಸಮಿತಿ ರಚಿಸಲಾಗಿದ್ದು, ಸಮಿತಿ ನೀಡುವ ವರದಿ ಮುಂದಿನ ಕ್ರಮಕೈಗೊಳಲಾಗುವುದು. | ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಕೆಎಸ್​ಆರ್​ಟಿಸಿ ಬಸ್ ಚಾಲಕರು ಹಾಗೂ ನೌಕರರಿಗೆ 4 ತಿಂಗಳ ಸಂಬಳ ಮೊತ್ತ 3 ಸಾವಿರ ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಪ್ರತಿ ತಿಂಗಳು ಸಕಾಲಿಕವಾಗಿ ಸಂಬಳ ಪಾವತಿಸಲಾಗುತ್ತದೆ. | ಬಿ. ಶ್ರೀರಾಮುಲು ಸಾರಿಗೆ ಸಚಿವ

ಯಾರ ಪ್ರವಾಸ ಎಲ್ಲಿ?

  • ರಾಜ್ಯಾಧ್ಯಕ್ಷರ ನೇತೃತ್ವದ ತಂಡ-1: ಮೈಸೂರು, ಬಳ್ಳಾರಿ, ಧಾರವಾಡ ಮತ್ತು ಬೆಂಗಳೂರು ನಗರ
  • ಅರುಣ್ ಸಿಂಗ್ ನೇತೃತ್ವದ ತಂಡ-2: ಬೆಳಗಾವಿ, ದಾವಣಗೆರೆ ಹಾಗೂ ಬೆಂಗಳೂರು ಗ್ರಾಮಾಂತರ
  • ಸಿಎಂ ಬೊಮ್ಮಾಯಿ ನೇತೃತ್ವದ ತಂಡ-3: ಮಂಗಳೂರು, ಶಿವಮೊಗ್ಗ ಮತ್ತು ಕಲಬುರಗಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net