ಬಿಜೆಪಿ ತಂತ್ರಗಾರಿಕೆಯಿAದ ದೂರವಾದ ಅಹಿಂದ ವರ್ಗಗಳನ್ನು ಮತ್ತೆಕಾಂಗ್ರೆಸ್‌ಗೆ ಸೆಳೆಯಲು `ನಾಯಕತ್ವ ಅಭಿವೃದ್ದಿ ಮಿಷನ್'/ಜಕ್ಕಪ್ಪನವರ್

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಬಿಜೆಪಿಯ ಧರ್ಮಾಧಾರಿತ ತಂತ್ರಗಾರಿಕೆಯಿAದ ಪಕ್ಷದಿಂದ ದೂರವಾಗಿರುವ ಅಹಿಂದ ವರ್ಗಗಳನ್ನು ಮತ್ತೆ ಕಾಂಗ್ರೆಸ್ ಬ್ಯಾನರ್‌ನಡಿ ಬರುವಂತೆ ಮಾಡಲು `ನಾಯಕತ್ವ ಅಭಿವೃದ್ದಿ ಮಿಷನ್'ಅನ್ನು ರಾಜ್ಯದ ಐದು ಮೀಸಲು ಕ್ಷೇತ್ರದಲ್ಲಿ ರೂಪಿಸಲಾಗಿದೆ ಎಂದು ಎಐಸಿಸಿ ಎಸ್ಸಿಎಸ್ಟಿ ವಿಭಾಗದ ರಾಷ್ಟಿçÃಯ ಸಂಚಾಲಕ ಎಫ್.ಹೆಚ್.ಜಕ್ಕಪ್ಪನವರ್ ತಿಳಿಸಿದರು.

ಮಂಗಳವಾರ ನಗರ ಹೊರವಲಯದ ರತ್ನಕನ್ವೆನ್ಷನ್ ಹಾಲ್‌ನಲ್ಲಿ ನಡೆದ ಕೋಲಾರ ಮೀಸಲು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಪಕ್ಷದ ಎಸ್ಸಿ,ಎಸ್ಟಿ,ಓಬಿಸಿ, ಅಲ್ಪಸಂಖ್ಯಾತ ವಿಭಾಗಗಳ ಮುಖಂಡರ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಪರಿಶಿಷ್ಟಜಾತಿ, ವರ್ಗ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳನ್ನು ಬಿಜೆಪಿ ಧರ್ಮಾಧರಿತವಾಗಿ ತನ್ನತ್ತ ಸೆಳೆದಿದ್ದರಿಂದಾಗಿ ಪಕ್ಷ ಸೋಲಲು ಕಾರಣವಾಗಿದೆ, ಈ ಹಿನ್ನಲೆಯಲ್ಲಿ ಮತ್ತೆ ಈ ವರ್ಗಗಳನ್ನು ಪಕ್ಷದತ್ತ ಸೆಳೆಯಲು ಎಐಸಿಸಿ ಈ ಮಿಷನ್ ನಡೆಸುತ್ತಿದೆ ಎಂದ ತಿಳಿಸಿದರು.

ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಆರ್ ಧರ್ಮಸೇನಾ ಮಾತನಾಡಿ, ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಸ್ವಾತಂತ್ರö್ಯ ಬಂದಾಗಿನಿAದಲೂ ಕಾಂಗ್ರೆಸ್ ಪ್ರಬಲವಾಗಿತ್ತು ಆದರೆ ಕಳೆದ ಚುನಾವಣೆಯಲ್ಲಿ ಹಿನ್ನಡೆಗೆ ಕಾರಣವೇನು ಎಂಬುದನ್ನು ಅವಲೋಕಿಸಿದಾಗ ಅಹಿಂದ ವರ್ಗಗಳು ದೂರವಾಗಿದ್ದೇ ಸೋಲಿಗೆ ಕಾರಣ ಎಂಬ ಅಂಶ ಗೊತ್ತಾದ ಹಿನ್ನಲೆಯಲ್ಲಿ ಮತ್ತೆ ಈ ವರ್ಗಗಳನ್ನು ಸೆಳೆಯುವ ಕೆಲಸ ಮಾಡಲಾಗುತ್ತಿದೆ ಎಂದರು.

ಕಾAಗ್ರೆಸ್ ಮಾತ್ರ ಅಹಿಂದ ವರ್ಗಗಳ ಹಿತ ಕಾಯುವ ಪಕ್ಷವಾಗಿದೆ ಎಂಬುದನ್ನು ಈ ಸಮುದಾಯಗಳಿಗೆ ಮನದಟ್ಟು ಮಾಡಿಕೊಟ್ಟು, ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳುವ ಮೂಲಕ ಅವರಲ್ಲಿಯೇ ನಾಯಕತ್ವ ಬೆಳೆಸುವ ಕೆಲಸವನ್ನು ಮಾಡುವಂತೆ ಪಕ್ಷದ ವಿವಿಧ ವಿಭಾಗಗಳ ಮುಖಂಡರಿಗೆ ಕಿವಿಮಾತು ಹೇಳಿದರು.

ಅಹಿಂದ ವರ್ಗಗಳ ಅಭಿವೃದ್ದಿಗೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಕೈಗೊಂಡ ಕ್ರಮಗಳು, ಈಗಿನ ಸಿದ್ದರಾಮಯ್ಯ ಸರ್ಕಾರದ ಅಭಿವೃದ್ದಿಪರ ಕಾರ್ಯಗಳ ಕುರಿತು ಜನತೆಗೆ ಮನವರಿಕೆ ಮಾಡಿಕೊಟ್ಟಾಗ ಲೋಕಸಭಾ ಚುನಾವಣೆಯಲ್ಲಿ ಕೋಲಾರದಲ್ಲಿ ಗೆಲುವು ನಿಶ್ಚಿತ ಎಂದರು.

ಸ್ಥಳೀಯ ಮುಖಂಡರು ಮಾತನಾಡಿ, ಸತತ ೭ ಬಾರಿ ಕೋಲಾರದಿಂದ ಸಂಸದರಾಗಿ ಆಯ್ಕೆಯಾಗಿರುವ ಕೆ.ಎಚ್.ಮುನಿಯಪ್ಪ ಕಳೆದ ಬಾರಿ ಸೋಲಲು ಹಲವಾರು ಕಾರಣಗಳಿವೆ, ಈಗ ಮತ್ತೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಗಾಳಿ ಇರುವುದರಿಂದ ಮತ್ತೆ ಅವರನ್ನೇ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯನ್ನಾಗಿ ಮಾಡಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್ ವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್‌ಬಾಬು, ಉದಯಶಂಕರ್, ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಕೆ.ಜಯದೇವ್, ಹಿಂದುಳಿದ ವರ್ಗಗಳ ಅಧ್ಯಕ್ಷ ಅಶೋಕ್‌ಕುಮಾರ್, ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಅನಿಫ್, ಎಸ್ಟಿ ಘಟಕದ ಅಧ್ಯಕ್ಷ ನಾಗರಾಜ್ ಸೇರಿದಂತೆ ಎಲ್ಲಾ ಪದಾಧಿಕಾರಿಗಳು, ಮುಖಂಡರು ಹಾಜರಿದ್ದರು.

ಚಿತ್ರ ೦೫ ಕೆ.ಎಲ್.ಆರ್. ೦೮ : ಕೋಲಾರದ ರತ್ನಕನ್ವೆನ್ಷನ್ ಹಾಲ್‌ನಲ್ಲಿ ನಡೆದ ಕೋಲಾರ ಮೀಸಲು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಪಕ್ಷದ ಎಸ್ಸಿ,ಎಸ್ಟಿ,ಓಬಿಸಿ, ಅಲ್ಪಸಂಖ್ಯಾತ ವಿಭಾಗಗಳ ಮುಖಂಡರ ಕಾರ್ಯಕರ್ತರ ಸಭೆ ಅಧ್ಯಕ್ಷತೆಯನ್ನು ವಹಿಸಿ ಎಐಸಿಸಿ ಎಸ್ಸಿಎಸ್ಟಿ ವಿಭಾಗದ ರಾಷ್ಟಿçÃಯ ಸಂಚಾಲಕ ಎಫ್.ಹೆಚ್.ಜಕ್ಕಪ್ಪನವರ್ ಮಾತನಾಡುತ್ತಿರುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net