ಬಿಜೆಪಿ ಗೆಲುವಿಗೆ ಪಣ ತೊಡಿ

10ydg01
Published on

ಯಾದಗಿರಿ: ಪ್ರತಿಯೊಬ್ಬ ಪದಾಕಾರಿಗೆ ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವ ಮೂಲಕ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯಥರ್ಿಗಳನ್ನು ಗೆಲ್ಲಿಸುವ ಪಣ ತೊಡೋಣ ಎಂದು ಬಿಜೆಪಿ ರಾಜ್ಯ ಕಾರ್ಯದಶರ್ಿ ಜಗದೀಶ ಹಿರೇಮನಿ ಕರೆ ನೀಡಿದರು.

ಸೋಮವಾರ ಇಲ್ಲಿನ ಬಿಜೆಪಿ ಜಿಲ್ಲಾ ಕಾಯರ್ಾಲಯದಲ್ಲಿ ಕರೆದಿದ್ದ ಪಕ್ಷದ ಚುನಾವಣಾ ನಿರ್ವಹಣಾ ಸಮಿತಿ ಕಾಯರ್ಾಗಾರಕ್ಕೆ ಚಾಲನೆ ನೀಡಿ ಮಾತನಾಡಿ, ಚುನಾವಣೆ ಹಿನ್ನೆಲೆಯಲ್ಲಿ ಒಟ್ಟು 26 ವಿಭಾಗಗಳನ್ನು ರಚಿಸಲಾಗಿದೆ. ಇದರಲ್ಲಿ ಈಗಾಗಲೇ ಮೂರ್ನಾಲ್ಕು ಚುನಾವಣೆಗಳಲ್ಲಿ ಕೆಲಸ ಮಾಡಿದ ಅನುಭವಿ ಕಾರ್ಯಕರ್ತರಿಗೆ ಜವಾಬ್ದಾರಿ ನೀಡಲಾಗಿದೆ ಎಂದು ವಿವರಿಸಿದರು.

ವಿಪಕ್ಷಗಳು ಬಿಜೆಪಿ ವಿರುದ್ಧ ನಡೆಸುವ ಆಧಾರರಹಿತ ಆರೋಪ, ಅಪಪ್ರಚಾರದ ವಿರುದ್ಧ ಸಮರ್ಥವಾಗಿ ಉತ್ತರ ನೀಡಬೇಕು. ವ್ಯಾರಂಟಿ ಇಲ್ಲದ ಗ್ಯಾರಂಟಿ ಕಾಡರ್್ ನೀಡುವ ಪದ ಅಸಲಿ ಮುಖವನ್ನು ಮತದಾರರಿಗೆ ತೋರಿಸುವ ಕೆಲಸ ಮಾಡಬೇಕು, ಕೇಂದ್ರ ಮತ್ತು ರಾಜ್ಯ ಸಕರ್ಾರಗಳು ಕೈಗೊಂಡ ಅಭಿವೃದ್ಧಿ ಕಾರ್ಯಗಳ ಕುರಿತು ಜನತೆಗೆ ಮನದಟ್ಟು ಮಾಡಿಕೊಡುವ ಮೂಲಕ ರಾಜ್ಯದಲ್ಲಿ ಈ ಬಾರಿ ಸಂಪೂರ್ಣ ಬಹುಮತದ ಸಕರ್ಾರ ಆಡಳಿತಕ್ಕೆ ಬರುವಂತೆ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಪಕ್ಷದ ಕಲಬುರಗಿ ವಿಭಾಗ ಸಂಘಟನಾ ಪ್ರಧಾನ ಕಾರ್ಯದಶರ್ಿ ಅರುಣ್ ಬಿನ್ನಾಡಿ, ಚುನಾವಣೆಯನ್ನು ಅತ್ಯಂತ ವ್ಯವಸ್ಥಿತವಾಗಿ ನಿರ್ವಹಿಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೆಲವರ ಕೆಲಸ ಆರಂಭವಾಗಿದ್ದರೆ ಇನ್ನು ಕೆಲವರು ಅಸೂಚನೆ ನಂತರ ಆರಂಭಿಸಲಿದ್ದಾರೆ ಎಂದರು.

ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕ ಗುರು ಕಾಮಾ, ಶಾಸಕ ವೆಂಕಟರಡ್ಡಿ ಮುದ್ನಾಳ, ಮಾಜಿ ಶಾಸಕ ಡಾ.ವಿರಬಸವಂತರಡ್ಡಿ ಮುದ್ನಾಳ, ಪ್ರಮುಖರಾದ ನೀಲಕಂಠರಾಯ ಯಲ್ಹೇರಿ, ಶಶಿಕಲಾ ಟೆಂಗಳಿ, ಶೋಭಾ ಬಾಣಿಜಿಲ್ಲಾ ಪ್ರಧಾನ ಕಾರ್ಯದಶರ್ಿಗಳಾದ ದೆವಿಂದ್ರನಾಥ ನಾದ ಮತ್ತು ವೆಂಕಟರಡ್ಡಿ ಅಬ್ಬೆತೂಮಕೂರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net