ಬಿಜೆಪಿ ಕೋಲಿ ಮುಖಂಡರ ಅಸಮಾಧಾನ

Koli
Published on

ಕಲಬುರಗಿ: ಕಳೆದ ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ಕೋಲಿ, ಕಬ್ಬಲಿಗ ಸಮುದಾಯದ ಎಲ್ಲ ಪರ್ಯಾಯ ಪದಗಳನ್ನು ಎಸ್ಟಿಗೆ ಸೇರಿಸುವ ಭರವಸೆ ನೀಡಿದ ಭರವಸೆ ಬಗ್ಗೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಜನರ ಬಳಿ ಹೋದಾಗ ಹೋದಾಗ ಅವರು ಕೇಳುವ ಪ್ರಶ್ನೆಗೆ ಉತ್ತರವಿಲ್ಲದೆ ಮುಜುಗರ ಅನುಭವಿಸುವಂತಾಗಿದೆ ಎಂದು ಬಿಜೆಪಿಯಲ್ಲಿರುವ ಕೋಲಿ ಸಮಾಜದ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡರಾದ ಅವ್ವಣ್ಣ ಮ್ಯಾಕೇರಿ, ಶೋಭಾ ಬಾಣಿ ಮತ್ತು ಕಾಡಾ ಅಧ್ಯಕ್ಷ ಶರಣಪ್ಪ ತಳವಾರ, ಸಿಎಂ, ಸಚಿವರು, ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಷಾ ಹೀಗೆ ಎಲ್ಲರೂ ಹೇಳಿ ವರ್ಷವಾದರೂ ಇನ್ನೂ ಈಡೇರಿಸದಿರುವುದರಿಂದ ಜನರ ಬಳಿ ಹೋದಾಗ ಅವರು ಕೇಳುವ ಪ್ರಶ್ನೆಗೆ ಉತ್ತರಿಸಲಾಗದೆ ಅಸಹಾಯಕರಾಗಿದ್ದೇವೆ, ಹೀಗಾಗಿ ಸಕರ್ಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಎಸ್ಟಿಗೆ ಸೇರಿಸುವಂತೆ ಡಿ.2ರಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ವಸತಿ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದ್ದೇವೆ. ಪ್ರಯೋಜನವಾಗಿಲ್ಲ. ಮೂರು ದಶಕಗಳಿಂದ ಹಲವು ಹೋರಾಟ ನಡೆಸಲಾಗುತ್ತಿದೆ. ಕಾಂಗ್ರೆಸ್ದವರು ಹಿಂದೆ ಹೀಗೆ ಮೋಸ ಮಾಡಿದ್ದರಿಂದಲೇ ಲೋಕಸಭಾ ಮತ್ತು ವಿಧಾನಸಭೆಯಲ್ಲಿ ಎಲೆಕ್ಷನ್ದಲ್ಲಿ ಬಿಜೆಪಿಗೆ ಮತ ಹಾಕಿ ಗೆಲ್ಲಿಸಿದ್ದಾರೆ. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಇತರರು ಕೋಲಿ ಸಮಾಜವನ್ನು ಮರೆಯಲ್ಲ ಎಂದಿದ್ದರು. ಈಗಲೂ ನಾವು ಆ ಕೆಲಸ ಮಾಡಿಕೊಡದೆ ಹೋದರೆ ಹೇಗೆ? ಎಂದು ಮ್ಯಾಕೇರಿ ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಲಕ್ಷ್ಮಣ ಅವಟೆ, ಮಲ್ಲಿಕಾಜರ್ುನ ಎಮ್ಮಿಗನೂರ, ತಮ್ಮಣ್ಣ ಡಿಗ್ಗಿ, ಶಂಕರ ಮ್ಯಾಕೇರಿ, ದಯಾನಂದ ಕಟ್ಟಿಮನಿ, ವಿದ್ಯಾಧರ ಮಂಗಳೂರೆ, ನಾಗಪ್ಪ ಕೊಳ್ಳಿ, ಬಸವರಾಜ ಸಪ್ಪನಗೋಳ ಇತರರಿದ್ದರು.
ಚಿಂಚೋಳಿ ಉಪಚುನಾವಣೆ ಪ್ರಚಾರದಲ್ಲೂ ಸಿಎಂ ಯಡಿಯೂರಪ್ಪ, ಉಸ್ತುವಾರಿಯಾಗಿದ್ದ ಸಚಿವ ವಿ.ಸೋಮಣ್ಣ ಅವರು ಎಸ್ಟಿಗೆ ಸೇರಿಸಿಯೇ ತೀರುತ್ತೇವೆ. ಇದನ್ನು ರಕ್ತದಲ್ಲಿ ಬರೆದುಕೊಡುತ್ತೇವೆ ಎಂದು ಪ್ರಮಾಣ ಮಾಡಿದ್ದರು. ಸೂರ್ಯ-ಚಂದ್ರ ಇರುವುದು ಎಷ್ಟು ಸತ್ಯವೋ ಎಸ್ಟಿಗೆ ಸೇರಿವುದು ಅಷ್ಟೇ ಎಂದು ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ ಹೇಳಿದ್ದರು. ಉಮೇಶ ಜಾಧವ್ ಪ್ರತಿ ಸಭೆಯಲ್ಲಿ ಎಸ್ಟಿಗೆ ಸೇರಿಸುತ್ತೇವೆ ಎಂದು ಹೇಳಿ ಸಮುದಾಯದ ಜನರ ಮತ ಪಡೆದು ಸಂಸದರಾಗಿ ಆಯ್ಕೆಯಾಗಿದ್ದಾರೆ. ಮಾಲೀಕಯ್ಯ ಗುತ್ತೇದಾರ, ಬಾಬುರಾವ ಚಿಂಚನಸೂರ ಎಸ್ಟಿಗೆ ಸೇರಿ ತೀರುತ್ತೇವೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net