ಬಿಜೆಪಿ ಅಭ್ಯರ್ಥಿ ಕೆ.ಎಂ.ಕೃಷ್ಣನಾಯಕ ಮತಯಾಚನೆ

30 SARAG 01
ಸರಗೂರು ಪಟ್ಟಣದ ವಾರ್ಡ್‌ಗಳಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಎಂ.ಕೃಷ್ಣನಾಯಕ ಮತ್ತು ಕಾರ್ಯಕರ್ತರು ಬಿರುಸಿನ ಪ್ರಚಾರ ನಡೆಸಿದರು.
Published on

ಸರಗೂರು : ಎಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಎಂ.ಕೃಷ್ಣನಾಯಕ ಶನಿವಾರ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಕ್ಷೇತ್ರದ ಸರಗೂರು ಟೌನ್ ಮತ್ತು ವಿವಿಧ ಗ್ರಾಮಗಳಿಗೆ ತೆರಳಿ ಬಿರುಸಿನ ಪ್ರಚಾರ ನಡೆಸಿದರು.
ಸರಗೂರು ಪಟ್ಟಣ ವ್ಯಾಪ್ತಿಯ 12 ವಾರ್ಡ್‌ಗಳು ಸೇರಿದಂತೆ ಅನೇಕ ಗ್ರಾಮಗಳಲ್ಲಿ ಮತಯಾಚಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರಿಂದ ಸಮಸ್ಯೆ ಆಲಿಸಿದರು. ಮಹಿಳೆಯರು ಹಾಗೂ ಯುವಕರನ್ನು ಭೇಟಿ ಮಾಡಿ ಬಿಜೆಪಿಗೆ ಮತ ಹಾಕುವಂತೆ ಮನವಿ ಮಾಡಿದರು. ನಿಮ್ಮ ಕೆ.ಎಂ.ಕೃಷ್ಣನಾಯಕ ಹುಲಿದುರ್ಗದಿಂದ ಇಲ್ಲಿಗೆ ಬಂದಿದ್ದಾನೆ. 15 ವರ್ಷ ಜೆಡಿಎಸ್ ಮತ್ತು ಕಾಂಗ್ರೆಸ್‌ಗೆ ಮತ ಕೊಟ್ಟಿದ್ದೀರಿ. ಏನೂ ಕೆಲಸ ಆಗಿಲ್ಲ ಎಂದು ನೀವೇ ದೂರುತ್ತಿದ್ದೀರಿ. ಮುಂದಿನ ಐದು ವರ್ಷ ನಿಮ್ಮ ಕೆ.ಎಂ.ಕೃಷ್ಣನಾಯಕನಿಗೆ ಮತ ಕೊಟ್ಟು ನೋಡಿ. ಕ್ಷೇತ್ರವನ್ನು ಮಾದರಿ ಮಾಡುತ್ತೇನೆ. ಎಲ್ಲರ ಮನೆ ಬಾಗಿಲಿಗೆ ಬರಲು ಸಾಧ್ಯವಾಗುತ್ತಿಲ್ಲ. ಸಮಯದ ಕೊರತೆ ಇದೆ. ಗೆದ್ದ ಬಳಿಕ ಹಳ್ಳಿ ಹಳ್ಳಿ, ಮನೆ ಮನೆ ಬಾಗಿಲಿಗೆ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ, ನಿಮ್ಮ ಕುಂದು ಕೊರತೆಗಳನ್ನು ಬಗಹರಿಸುತ್ತೇನೆ ಎಂದು ಭರವಸೆ ನೀಡಿದರು.
ಬಿಜೆಪಿಗೆ ಸೇರ್ಪಡೆ: ವಿವಿಧ ಗ್ರಾಮಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಬಿಜೆಪಿ ಸೇರ್ಪಡೆಗೊಂಡರು. ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಆರಂಭಕ್ಕೆ ಶುಭ ಸೂಚನೆಯಂತೆ ಅನೇಕರು ನಮ್ಮ ಪಕ್ಷಕ್ಕೆ ಬರುತ್ತಿದ್ದಾರೆ. ನಿಮ್ಮಲ್ಲರ ಶಕ್ತಿಯಾಗಿ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ಕೆ.ಎಂ.ಕೃಷ್ಣನಾಯಕ ಹೇಳಿದರು.

ತಾಲೂಕು ಬಿಜೆಪಿ ಅಧ್ಯಕ್ಷ ಗುರುಸ್ವಾಮಿ, ಟೌನ್ ಅಧ್ಯಕ್ಷ ನಾಗರಾಮ್, ಪ್ರಧಾನ ಕಾರ್ಯದರ್ಶಿ ಚನ್ನಪ್ಪ, ವಿವೇಕ, ಪಪಂ ಅಧ್ಯಕ್ಷೆ ರಾಧಿಕಾ ಶ್ರೀನಾಥ್, ಉಪಾಧ್ಯಕ್ಷ ವಿನಾಯಕ ಪ್ರಸಾದ್, ಸ್ಥಾಯಿ ಸಮಿತಿ ಅಧ್ಯಕ್ಷೆ ಉಮಾರಾಮು, ಸದಸ್ಯರಾದ ಶಿವಕುಮಾರ್, ನೂರಳಾಸ್ವಾಮಿ, ದಿವ್ಯಾ ನವೀನ್ ಕುಮಾರ್, ಪೇಂಟ್ ನಾಗರಾಜ್, ಅನಿಲ್ ಕುಮಾರ್, ಸುನಂದರಾಜು, ಮಂಜುಳಾ ದೇವಣ್ಣ, ರವಿಕುಮಾರ್, ಸಿ.ಕೆ.ಗಿರೀಶ್, ರಾಜೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net