ಬಿಎಂಟಿಸಿ ಸಿಬ್ಬಂದಿ ಮಾನಸಿಕ ಒತ್ತಡ ನಿವಾರಣೆಗೆ ನಿಮ್ಹಾನ್ಸ್​ ನೆರವು

Published on

ಬಿಎಂಟಿಸಿ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದರೂ, ನಿಗಮದ ಸಿಬ್ಬಂದಿಗಳಿಗೆ ಯಾವ ರೀತಿ ಚಿಕಿತ್ಸೆ ನೀಡಬೇಕು ಎಂಬುದರ ಬಗ್ಗೆ ನಿರ್ಧರಿಸಲು ವೈದ್ಯರ ಸಮಿತಿ ರಚಿಸಲು ನಿರ್ಧರಿಸಲಾಗಿದೆ. ಸಮಿತಿಯಲ್ಲಿ ಮಾರ್ಗಸೂಚಿಯನ್ನು ರೂಪಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಾ.ಬಿ.ಎನ್​.ಗಂಗಾಧರ್​ ತಿಳಿಸಿದ್ದಾರೆ.

ಸಮಿತಿಯಲ್ಲಿ ತೀರ್ಮಾನ:

ನಿತ್ಯ ಲಾಂತರ ಜನರಿಗೆ ಸಾರಿಗೆ ಮೂಲವಾದ ಬಿಎಂಟಿಸಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಲ್ಲಿ ಎದುರಾಗುವ ಮಾನಸಿಕ ತೊಳಲಾಟವನ್ನು ನಿವಾರಿಸಲು ನಿಮ್ಹಾನ್ಸ್​ ನೆರವು ನೀಡುತ್ತಿದೆ. ಅದರಂತೆ ಬಿಎಂಟಿಸಿಯಲ್ಲಿನ 34 ಸಾವಿರ ಸಿಬ್ಬಂದಿಗಳ ಮಾನಸಿಕ ಮತ್ತು ನರ ಸಂಬಂಧಿ ಸಮಸ್ಯೆಗಳಿಗೆ ನಿಮ್ಹಾನ್ಸ್​ ಮೂಲಕ ಉಚಿತ ಚಿಕಿತ್ಸೆ ನೀಡಲಿದೆ. ಅದಕ್ಕೆ ಬದಲಾಗಿ ನಿಮ್ಹಾನ್ಸ್​ನ ವೈದ್ಯರು, ಸಿಬ್ಬಂದಿ ಮತ್ತು ವಿದ್ಯಾಥಿರ್ಗಳು ಬಿಎಂಟಿಸಿ ಬಸ್​ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಈ ಕುರಿತು ಶುಕ್ರವಾರ ಬಿಎಂಟಿಸಿ ಅಧ್ಯಕ್ಷ ನಂದೀಶ್​ ರೆಡ್ಡಿ ಮತ್ತು ನಿಮ್ಹಾನ್ಸ್​ ನಿರ್ದೇಶಕ ಬಿ.ಎನ್​.ಗಂಗಾಂಧರ್​ ಒಪ್ಪಂದಕ್ಕೆ ಸಹಿ ಹಾಕಿದರು. ಎರಡೂ ಸಂಸ್ಥೆಗಳು ನೀಡುವ ಸೌಲಭ್ಯ 3 ವರ್ಷಕ್ಕೆ ನಿಗದಿಯಾಗಿದ್ದು, ಸಂಸ್ಥೆಗಳು ಒಪ್ಪಿದರೆ ಅದನ್ನು ಮುಂದುವರಿಸಬಹುದಾಗಿದೆ.

ಬೆಂಗಳೂರು: ಸಂಚಾರ ದಟ್ಟಣೆ, ಪರಿಸರ ಮಾಲಿನ್ಯದ ನಡುವೆ ಕೆಲಸ ಮಾಡುವ ಬಿಎಂಟಿಸಿ ಸಿಬ್ಬಂದಿಗಳ ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿವಹಿಸಲು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್​) ಜತೆಗೆ ಬಿಎಂಟಿಸಿ ಒಡಂಬಡಿಕೆ ಮಾಡಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net