ಬಿಇಒ ಕಚೇರಿಗಿಲ್ಲ ವಾಹನ ಸೌಲಭ್ಯ

1 mdg 1 story
ಮೂಡಿಗೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ.
Published on

ಮೂಡಿಗೆರೆ: ಕಳಸ ಮತ್ತು ಮೂಡಿಗೆರೆ ತಾಲೂಕಿನ ಪಟ್ಟಣ ಪ್ರದೇಶ ಮತ್ತು ಗ್ರಾಮೀಣ ಭಾಗದಲ್ಲಿ ಒಟ್ಟು 150 ಪ್ರಾಥಮಿಕ, 38 ಪ್ರೌಢ ಶಾಲೆಗಳಿದ್ದು ಪ್ರತಿದಿನ ಶಾಲೆಗಳಿಗೆ ಭೇಟಿ ನೀಡಬೇಕಾಗಿದ್ದರೂ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ವಾಹನ ಸೌಲಭ್ಯವಿಲ್ಲದೆ ಕೆಎಸ್‌ಆರ್‌ಟಿಸಿ ಬಸ್ ಅಥವಾ ಖಾಸಗಿ ವಾಹನಗಳ ಮೂಲಕ ಶಾಲೆ ಭೇಟಿಗೆ ತೆರಳಬೇಕಾಗಿದೆ. ಇದರಿಂದ ಸರ್ಕಾರಿ ಶಾಲೆಗಳ ಆಡಳಿತ ವ್ಯವಸ್ಥೆ ಹಳಿ ತಪ್ಪುವ ಆತಂಕ ಎದುರಾಗಿದೆ.

ಹಿಂದೆ ಕ್ಷೇತ್ರ ಶಿಕ್ಷಣಾಧಿಕಾರಿಗೆ ಸರ್ಕಾರಿ ವಾಹನ ಒದಗಿಸಿ ಚಾಲಕರೊಬ್ಬರನ್ನು ಸರ್ಕಾರ ನೇಮಿಸಿತ್ತು. 4 ವರ್ಷದ ಹಿಂದೆ ಸರ್ಕಾರಿ ವಾಹನದ ಚಾಲನಾ ಅವಧಿ ಮುಗಿದ ಬಳಿಕ ಹಳೆಯ ವಾಹನವನ್ನು ಗುಜರಿಗೆ ಹಾಕಲಾಗಿತ್ತು. ಚಾಲಕನನ್ನು ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದರೆ ತಾಲೂಕಿಗೆ ವರ್ಗಾಯಿಸಲಾಗಿದೆ. ನಂತರ ಬಿಇಒಗೆ ವಾಹನ ಮತ್ತು ಚಾಲಕರನ್ನು ನೀಡಲಿಲ್ಲ.

ನಿರ್ವಹಣೆ ಗೊಂದಲ: ಕಳೆದ 3 ವರ್ಷದ ಹಿಂದೆ ಗುತ್ತಿಗೆ ಆಧಾರದಲ್ಲಿ ವಾಹನವೊಂದನ್ನು ಕಲ್ಪಿಸಲಾಗಿತ್ತು. ನಂತರ ಗುತ್ತಿಗೆ ವಾಹನದ ನಿರ್ವಹಣೆ ವಿಚಾರದಲ್ಲಿ ಉಂಟಾದ ಗೊಂದಲದಿಂದ ಗುತ್ತಿಗೆ ವಾಹನದ ಸೌಲಭ್ಯವನ್ನೂ ಕಸಿದುಕೊಳ್ಳಲಾಗಿದೆ. ಈಗ 2 ವರ್ಷದಿಂದ ಬಿಇಒ ಮತ್ತು ಇತರ ಅಧಿಕಾರಿಗಳಿಗೆ ಇಲಾಖೆ ವಾಹನವಿಲ್ಲದೆ ಶಾಲೆಗಳ ಭೇಟಿ ಸಮಸ್ಯೆಯಾಗಿದೆ. ಬಿಇಒ ಕಚೇರಿಯ ಇತರ ಅಧಿಕಾರಿಗಳ ಖಾಸಗಿ ವಾಹನಗಳನ್ನು ಪಡೆದು ಅದಕ್ಕೆ ಬಿಇಒ ತಮ್ಮ ಕೈಯಿಂದ ಇಂಧನ ಹಾಕಿಸಿಕೊಂಡು ತೆರಳುವ ದುರ್ಗತಿ ಶಿಕ್ಷಣ ಇಲಾಖೆಗೆ ಬಂದೊದಗಿದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net