ಬಿ.ಎಲ್.ಶಂಕರ್ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ

B.L.SHANKAR.jpg 1
Published on

ತೀರ್ಥಹಳ್ಳಿ: ಕುವೆಂಪು ಪ್ರತಿಷ್ಠಾನದ ನೂತನ ಅಧ್ಯಕ್ಷರನ್ನಾಗಿ ಮಾಜಿ ಸಭಾಪತಿ ಬಿ.ಎಲ್.ಶಂಕರ್ ಅವರನ್ನು ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ.

ಪದನಿಮಿತ್ತ ಉಪಾಧ್ಯಕ್ಷರನ್ನಾಗಿ ಕುವೆಂಪು ವಿವಿ ಕುಲಪತಿ ಪ್ರೊ.ಶರತ್ ಅನಂತಮೂರ್ತಿ, ಪದನಿಮಿತ್ತ ಸಮಕಾರ್ಯದರ್ಶಿಯಾಗಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹಾಗೂ ಸಮಕಾರ್ಯದರ್ಶಿಯಾಗಿ ಕಡಿದಾಳು ಪ್ರಕಾಶ್, ಖಜಾಂಚಿಯಾಗಿ ದೇವಂಗಿ ಮನುದೇವ್‌ರನ್ನು ನೇಮಕ ಮಾಡಲಾಗಿದೆ.

ಸದಸ್ಯರಾಗಿ ಪತ್ರಕರ್ತ ಹಾಗೂ ಜಾನಪದ ತಜ್ಞ ಶಿವಾನಂದ ಕರ್ಕಿ, ಸಿ.ಬಸವಲಿಂಗಯ್ಯ, ಎಸ್.ವಿ.ದಯಾನಂದ್, ಕುವೆಂಪು ವಿವಿ ಮಾಜಿ ಕುಲಪತಿ ಚಿದಾನಂದಗೌಡರು ಆಯ್ಕೆಯಾಗಿದ್ದಾರೆ. ಪದನಿಮಿತ್ತ ಸದಸ್ಯರುಗಳಾಗಿ ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು, ಎಂಎಡಿಬಿ ಅಧ್ಯಕ್ಷರು, ಲೋಕೋಪಯೋಗಿ ಇಲಾಖೆಯ ವೃತ್ತ ಅಧೀಕ್ಷಕ ಇಂಜಿನಿಯರ್, ಪ್ರವಾಸೋದ್ಯಮ ಇಲಾಖೆ ನಿರ್ದೆಶಕರು, ಸರ್ಕಾರದ ಆರ್ಥಿಕ ಇಲಾಖೆ ಕಾರ್ಯದರ್ಶಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಆಯ್ಕೆಯಾಗಿದ್ದಾರೆ.

ಕಾಯಂ ಆಹ್ವಾನಿತರನ್ನಾಗಿ ತೀರ್ಥಹಳ್ಳಿ ಕ್ಷೇತ್ರದ ಶಾಸಕರು ಮತ್ತು ದೇವಂಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ತೀರ್ಥಹಳ್ಳಿ ತಾಲೂಕು ಪಂಚಾಯಿತಿ ಅಧ್ಯಕ್ಷರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net