

ಬೆಟ್ಟದಪುರ:
ಬೆಟ್ಟದಪುರ ಸಮೀಪದ ಚಪ್ಪರದಹಳ್ಳಿ ಗ್ರಾಮದಲ್ಲಿ ಸ್ನೇಹ ಒಕ್ಕಲಿಗರ ಯುವಕರ ಸಂಘದ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬಾಯ್ಸ್ ಬೆಟ್ಟದಪುರ ತಂಡ ಪ್ರಥಮ ಸ್ಥಾನ ಗಳಿಸಿತು.
ಟೀಂ ಸಿಪಾಯಿ (ಅಡ್ಡ ಬಾ ಯ್ಸ್ ) ಚಪ್ಪರದಹಳ್ಳಿ ತಂಡ ದ್ವೀತಿಯ ಸ್ಥಾನ, ಬಸವೇಶ್ವರ ಬಾಯ್ಸ ಹಸುವಿನ ಕಾವಲು ತಂಡ ತೃತೀಯ ಸ್ಥಾನ ಮತ್ತು ಟ್ರೋಫಿ ವಿನ್ನರ್ಸ್ ತಂಡ ನಾಲ್ಕನೇ ಸ್ಥಾನ ಪಡೆದವು. ಮೂರು ದಿನಗಳ ಕಾಲ ನಡೆದ ಪಂದ್ಯಾವಳಿ ಸುಮಾರು 15 ಕ್ಕೂ ಹೆಚ್ಚಿನ ತಂಡಗಳು ಭಾಗವಹಿಸಿದ್ದವು. ವಿಜೇತ ತಂಡಗಳಿಗೆ ನಗದು ಮತ್ತು ಟ್ರೋಫಿ ನೀಡಲಾಯಿತು.
ಗ್ರಾಮ ಪಂಚಾಯಿತಿ ಸದಸ್ಯ ಸಿ.ಎಸ್ ಗಣೇಶ್, ಮುಖಂಡರಾದ ಸಿ.ಎಸ್ ಕುಶಾಲ್‌ಗೌಡ, ಸಿ.ಸಿ ಉಮೇಶ್, ರಾಜಣ್ಣ, ರಂಗಸ್ವಾಮಿ, ಗಂಗೇಶ್, ಕ್ಲಸ್ಟರ್ ವಿಜಯ್, ಸಂಘದ ಪದಾಧಿಕಾರಿಗಳಾದ ಮುಕುಂದಚಾರಿ, ಸಿ.ಆರ್ ಶಶಾಂಕ್, ಸಂಜು, ಸೋಮ, ಸಿ.ಆರ್ ಆಕಾಶ್, ಯಶು, ಅಭಿ, ಕೆ.ಕೌಶಿಕ್, ಸಚಿನ್, ಮುತ್ತು, ಶರತ್, ರಂಜನ್ ಇತರರು ಇದ್ದರು.