ಬಾಬುಜೀ ಆಡಳಿತ ಈಗಿನವರಿಗೆ ಮಾದರಿ

ಕೆ.ಆರ್.ನಗರದಲ್ಲಿ ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನ ರಾಂ ಅವರ 38ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಬಾಬುಜೀ ಪುತ್ಥಳಿಗೆ ಶಾಸಕ ಡಿ.ರವಿಶಂಕರ್ ಮಾಲಾರ್ಪಣೆ ಮಾಡಿದರು. ನಟರಾಜ್, ಮಿಕ್ಸರ್‌ಶಂಕರ್, ಶಂಕರ್‌ಸ್ವಾಮಿ, ಡಿ.ಕಾಂತರಾಜ್, ಮಧುವನಹಳ್ಳಿ ರವಿಕುಮಾರ್, ಎಂ.ಎಸ್.ಮಹದೇವ್, ರವಿಪೂಜಾರಿ ಮತ್ತಿತರರಿದ್ದರು.
ಕೆ.ಆರ್.ನಗರದಲ್ಲಿ ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನ ರಾಂ ಅವರ 38ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಬಾಬುಜೀ ಪುತ್ಥಳಿಗೆ ಶಾಸಕ ಡಿ.ರವಿಶಂಕರ್ ಮಾಲಾರ್ಪಣೆ ಮಾಡಿದರು. ನಟರಾಜ್, ಮಿಕ್ಸರ್‌ಶಂಕರ್, ಶಂಕರ್‌ಸ್ವಾಮಿ, ಡಿ.ಕಾಂತರಾಜ್, ಮಧುವನಹಳ್ಳಿ ರವಿಕುಮಾರ್, ಎಂ.ಎಸ್.ಮಹದೇವ್, ರವಿಪೂಜಾರಿ ಮತ್ತಿತರರಿದ್ದರು.
Published on

ಕೆ.ಆರ್.ನಗರ: ಮಹನೀಯರನ್ನು ಅವರ ಸಮುದಾಯದ ಬದಲು ಅವರು ಸಮಾಜಕ್ಕೆ ನೀಡಿರುವ ಕೊಡುಗೆಗಳಿಂದ ಮಾತ್ರ ಅವರನ್ನು ಅಳೆಯಬಹುದಾಗಿದೆ. ಅವರಲ್ಲಿ ಡಾ.ಬಾಬು ಜಗಜೀವನ ರಾಂ ಸಹ ಅಗ್ರಗಣ್ಯರು ಎಂದು ಶಾಸಕ ಡಿ.ರವಿಶಂಕರ್ ಅಭಿಪ್ರಾಯಪಟ್ಟರು.

ಪಟ್ಟಣದ ಡಾ.ಬಾಬು ಜಗಜೀವನರಾಮ್ ಪುತ್ಥಳಿ ಬಳಿ ಗುರುವಾರ ತಾಲೂಕು ಆಡಳಿತದ ವತಿಯಿಂದ ಶನಿವಾರ ಆಯೋಜಿಸಿದ್ದ ಹಸಿರು ಕ್ರಾಂತಿ ಹರಿಕಾರ, ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನ ರಾಂ ಅವರ 38ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ದಲಿತ ಸಮುದಾಯದ ಸ್ವಾತಂತ್ರ ಸೇನಾನಿಗಳಲ್ಲಿ ಪ್ರಥಮ ಸ್ಥಾನ ಹೊಂದಿದ್ದು ಬಾಬುಜೀ. ಅವರ ಹೋರಾಟ, ಆಡಳಿತ ಅನುಭವ ಇಂದಿನ ನಮ್ಮಂತಹ ಜನಪ್ರತಿನಿಧಿಗಳಿಗೆ ಮಾದರಿ ಎಂದರು.

ದೇಶ ಬರಗಾಲದಿಂದ ತತ್ತರಿಸಿ ಆಹಾರದ ಕೊರತೆ ಹೆದರಿಸುತ್ತಿದ್ದ ಸಂದರ್ಭದಲ್ಲಿ ಕೃಷಿ ಮಂತ್ರಿಯಾಗಿದ್ದ ಬಾಬುಜೀ ದಕ್ಷತೆಯಿಂದ ಕೆಲಸ ಮಾಡಿ ಕೃಷಿಗೆ ಅಗತ್ಯ ಯೋಜನೆಗಳನ್ನು ರೂಪಿಸಿ ದೇಶದಲ್ಲಿ ಹಸಿರು ಕ್ರಾಂತಿಗೆ ಮುನ್ನುಡಿ ಬರೆದರು. ಇದರಿಂದಾಗಿ ನಮ್ಮ ದೇಶ ಇಂದಿಗೂ ಆಹಾರ ಉತ್ಪಾದನೆಯನ್ನ ಸ್ವಾವಲಂಬನೆ ಸಾಧಿಸುವಂತಾಗಿದೆ ಎಂದರು.

ಅಂದಿನ ಸರ್ಕಾರಗಳಲ್ಲಿ ಸಂಪುಟದಲ್ಲಿ ವಿವಿಧ ಖಾತೆಗಳ ಮಂತ್ರಿಗಳಾಗಿ ಕೆಲಸ ನಿರ್ವಹಿಸಿ ನಿರಂತರವಾಗಿ ಅಧಿಕಾರದಲ್ಲಿದ್ದು, ತಮಗೆ ನೀಡಿದ ಎಲ್ಲಾ ಖಾತೆಗಳಿಗೂ ನ್ಯಾಯ ಒದಗಿಸಿ ಬಡವರು, ರೈತರು, ಕಾರ್ಮಿಕರು, ಮಹಿಳೆಯರು ಹಾಗೂ ಶೋಷಿತರ ಪರವಾಗಿ ಅನೇಕ ಜನಪ್ರಿಯ ಯೋಜನೆಗಳನ್ನು ತರುವ ಮೂಲಕ ಬಾಬುಜೀ ಸಾಮಾಜಿಕ ಕಾಳಜಿ ಮೆರೆದಿದ್ದಾರೆ ಎಂದರು.

ಪಟ್ಟಣದಲ್ಲಿ ಕಳೆದ ಹಲವು ವರ್ಷಗಳಿಂದ ನಿರ್ಮಾಣ ಹಂತದಲ್ಲಿರುವ ಬಾಬು ಜಗಜೀವನ ರಾಂ ಸುಮುದಾಯ ಭವನಕ್ಕೆ ಕಳೆದ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ 90 ಲಕ್ಷ ರೂ. ಅನುದಾನ ತಂದಿದ್ದೇನೆ. ಅದೇ ರೀತಿ ತಾಲೂಕಿಗೆ 13 ಕಡೆ ಬಾಬುಜೀ ಭವನಗಳು ಸೇರಿದಂತೆ ಡಾ.ಅಂಬೇಡ್ಕರ್ ಭವನಗಳಿಗೆ ಅನುದಾನ ಒದಗಿಸಲಾಗಿದೆ. ಜತೆಗೆ ಎಲ್ಲ ಹಿಂದುಳಿದ ಸಮುಧಾಯಗಳ ಭವನಕ್ಕೂ ಅನುದಾನ ಕೊಡಿಸಿದ್ದೇ. ಇಂದು ಅವುಗಳನ್ನು ಪೂರ್ಣಗೊಳಿಸಿ ಉದ್ಘಾಟಿಸಿ ನಿಮ್ಮ ಋಣ ತೀರಿಸತ್ತೇನೆ ಎಂದು ಭರವಸೆ ನೀಡಿದರು.

ಸಮುದಾಯದ ಬೇಡಿಕೆಯಂತೆ ಪಟ್ಟಣದಲ್ಲಿರುವ ಬಾಬುಜೀ ಅವರ ಕಂಚಿನ ಪ್ರತಿಮೆ ಮಾಡಿಸುತ್ತೇನೆ. ಜತೆಗೆ ಕ್ಷೇತ್ರದ ಸಮಗ್ರ ಅಭಿವೃದ್ಧಿ ನನ್ನ ಗುರಿಯಾಗಿದೆ ಎಂದರು.

ಆದಿ ಜಾಂಬವ ಸಂಘದ ಅಧ್ಯಕ್ಷ ಲೋಕೇಶ್ ಮಾತನಾಡಿದರು. ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ. ತಾಪಂ ಇಒ ಜಿ.ಕೆ.ಹರೀಶ್, ಪುರಸಭಾ ಇಒ ಡಾ.ಜಯಣ್ಣ, ಟಿಎಸ್‌ಡಬ್ಯ್ಲು ಎಸ್.ಎಂ.ಅಶೋಕ್‌ಕುಮಾರ್, ಪುರಸಭೆ ಸದಸ್ಯರಾದ ಕೋಳಿಪ್ರಕಾಶ್, ನಟರಾಜ್, ಮಿಕ್ಸರ್ ಶಂಕರ್, ಶಂಕರ್ ಸ್ವಾಮಿ, ಮಾಜಿ ಅಧ್ಯಕ್ಷ ಡಿ.ಕಾಂತರಾಜ್, ತಾಪಂ ಮಾಜಿ ಅಧ್ಯಕ್ಷ ಎಂ.ಎಚ್.ಸ್ವಾಮಿ, ತಾಲೂಕು ಮಾದಿಗ ಸಂಘರ್ಷ ಸಮಿತಿ ಅಧ್ಯಕ್ಷ ಮಧುವನಹಳ್ಳಿ ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಬಿ.ಎಚ್.ಕುಮಾರ್, ಕಾರ್ಯದರ್ಶಿ ಕಂಚುಗಾರಕೊಪ್ಪಲು ಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್.ಮಹದೇವ್, ಉದಯಶಂಕರ್, ವಕ್ತಾರ ಸೈಯದ್ ಜಾಬೀರ್, ಸಾಲಿಗ್ರಾಮ ಎಸ್‌ಸಿ ಘಟಕದ ಅಧ್ಯಕ್ಷ ಕಂಠಿಕುಮಾರ್, ಮುಖಂಡರಾದ ರವಿಪೂಜಾರಿ, ಎಂ.ಎ.ನಾಗೇಂದ್ರ, ಕಾಲಯ್ಯ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net