

ಬನ್ನೂರು: ಬಸವಣ್ಣನವರ ಅಹಿಂಸಾತ್ಮಕ ಜೀವನ ಸಮಾಜಕ್ಕೆ ಮಾದರಿ ಎಂದು ಸಮಾಜ ಸೇವಕ ಮಹೇಂದ್ರಸಿಂಗ್ ಕಾಳಪ್ಪ ಹೇಳಿದರು.
ಪಟ್ಟಣದ ರೋಟರಿ ವಿದ್ಯಾಸಂಸ್ಥೆ ಆವರಣದಲ್ಲಿ ಆಯೋಜಿಸಿದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾವ್ಯಗಳ ಮೂಲಕ ಸಮಾಜದಲ್ಲಿನ ಲಿಂಗ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಯ ಆಚರಣೆಯನ್ನು ತಿರಸ್ಕರಿಸುವಂತೆ ಮಾಡಿದರು. ಶಿವಲಿಂಗದೊಂದಿಗೆ ಇಷ್ಟಲಿಂಗದ ಹಾರವನ್ನೂ ಪರಿಚಯಿಸಿದರು ಎಂದರು,
12ನೇ ಶತಮಾನದಲ್ಲಿಯೇ ಬದುಕಿನ ಕಟ್ಟುಪಡುಗಳ ಬಗ್ಗೆ ತಿಳಿಸಿದರಲ್ಲದೆ, ಜಾತಿ ಪದ್ಧತಿ ವಿರುದ್ಧವಾಗಿ ಪ್ರಬಲವಾಗಿ ಹೋರಾಟ ನಡೆಸಿದರು. ಸಮಾಜದಲ್ಲಿದ್ದ ಮೇಲು-ಕೀಳು ಎಂಬುದನ್ನು ಹೋಗಲಾಡಿಸಲು ಪ್ರಯತ್ನಿಸಿದರು. ಅವರ ತತ್ವ ಆದರ್ಶ ಎಲ್ಲರಿಗೂ ಮಾದರಿ ಎಂದರು.
ರೋಟರಿ ಶಾಲೆಯ ನಂಜುಂಡ, ರವಿ, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.