ಬಸವಣ್ಣನ ತತ್ವಾದರ್ಶ ಅಳವಡಿಸಿಕೊಳ್ಳಿ

6sor1swamiji
ಸೊರಬ ತಾಲೂಕಿನ ನೇರಲಗಿ ಗ್ರಾಮದಲ್ಲಿ ಆಯೋಜಿಸಿದ್ದ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಜಡೆ ಸಂಸ್ಥಾನ ಮಠದ ಶ್ರೀ ಮಹಾಂತ ಸ್ವಾಮೀಜಿ, ಶ್ರೀ ಅಮರೇಶ್ವರ ಸ್ವಾಮೀಜಿ ಅವರನ್ನು ಗೌರವಿಸಲಾಯಿತು. ಗುರುಕುಮಾರ ಪಾಟೀಲ್, ವೀರೇಶ್ ಗೌಡ, ಮಹಾಂತೇಶ, ಮಂಜಣ್ಣ ಇತರರಿದ್ದರು.
Published on

ಸೊರಬ: ಬಸವಣ್ಣ ಅವರ ತತ್ವ, ಸಿದ್ಧಾಂತ ಹಾಗೂ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಡೆ ಸಂಸ್ಥಾನ ಮಠ ಹಾಗೂ ಸೊರಬ ಮುರುಘಾ ಮಠದ ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.

ನೇರಲಗಿ ಗ್ರಾಮದಲ್ಲಿ ಸೋಮವಾರ ಬಸವೇಶ್ವರ ಜಯಂತಿ ಕಾರ್ಯಕ್ರಮದ ಅಂಗವಾಗಿ ಶ್ರೀ ಬಸವೇಶ್ವರ ಜಯಂತಿ ಉತ್ಸವ ಸಮಿತಿ ಆಯೋಜಿಸಿದ್ದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ತಾಯಂದಿರು ಪ್ರತಿ ಮಾತಿಗೂ ಬಸವ, ಬಸವ ಎಂದು ಉಚ್ಚಾರ ಮಾಡುತ್ತಾರೆ. ಕಾರಣ ಆ ಹೆಸರಲ್ಲಿ ಕಷ್ಟ ಕಳೆಯುವ ಶಕ್ತಿಯಿದೆ. ಇಂತಹ ಕಾರ್ಯಕ್ರಮಗಳು ಸಮಾಜ ಸಂಘಟನೆಯಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತವೆ ಎಂದರು.

ಸೊರಬ ಕಾನುಕೇರಿ ಮಠದ ಶ್ರೀ ಘನಬಸವ ಅಮರೇಶ್ವರ ಶಿವಾಚಾರ್ಯ ಮಾತನಾಡಿ, ಸಮಾಜವನ್ನು ಹೇಗೆ ಕಟ್ಟಬೇಕು ಎಂದು ಬಸವಣ್ಣ ಬಯಸಿದ್ದರೋ ಅದು ಇಂದಿಗೂ ಆಗದಿರುವುದು ಬೇಸರದ ಸಂಗತಿ. ಸರ್ವರಿಗೂ ಸಮಪಾಲು, ಸಮಬಾಳು ಎಂಬುದು ಬಸವಣ್ಣ ಅವರ ಧ್ಯೇಯವಾಗಿತ್ತು. ಜಾತಿ, ವರ್ಗ, ವರ್ಣ ರಹಿತ ಸಮಾಜ ಅವರ ಚಿಂತನೆಯಾಗಿತ್ತು. ವ್ಯಕ್ತಿ ತನ್ನನ್ನು ತಾನು ಮೊದಲು ಶುದ್ಧೀಕರಿಸಿಕೊಳ್ಳಬೇಕು. ಮಹಾತ್ಮರ ಜಯಂತಿ ಕೇವಲ ಉತ್ಸವಗಳಾಗದೆ ಸಮಾಜ ಪರಿವರ್ತನೆಗೆ ಕಾರಣವಾಗಬೇಕು ಎಂದರು.

ಆನವಟ್ಟಿ ಪಿಎಸ್‌ಐ ರಾಜು ರೆಡ್ಡಿ, ತಾಲೂಕು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಗುರುಕುಮಾರ ಪಾಟೀಲ್, ಮಧ್ಯ ಕರ್ನಾಟಕ ಅಧ್ಯಕ್ಷ ವೀರೇಶ್ ಗೌಡ, ಶರಣ ಮಹಾಂತೇಶ, ಮಂಜಣ್ಣ, ಸಂದೀಪ್, ಮಲ್ಲಿಕಾರ್ಜುನ ಗುತ್ತೆರ್, ಮಧುರಾಯ ಶೇಟ್, ಸಿದ್ದಲಿಂಗೇಶ್, ವಿಜಯಕುಮಾರ್, ವೀರಭದ್ರಪ್ಪ, ಪ್ರವೀಣ ಕೊಟ್ರೇಶ್ ಮರದರ್, ಸುರೇಶ, ಭರಮಗೌಡ, ಸಂತೋಷ ಚಿಕ್ಕಲ್ಲೆರ್, ಮಂಜುನಾಥ ಬಸಲಿ ಹಲ್ಲೇರ್, ಯುವರಾಜ ಕೌಲೆರ್, ವಿನಯ್, ಬಸವರಾಜ್, ಪ್ರವೀಣ, ಮಂಜುನಾಥ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net