ಬಸವಣ್ಣ ಜಗತ್ತಿನ ಮಹಾನ್ ಸಾಧಕ

30MDG1basava
ಮೂಡಿಗೆರೆ ತಾಲೂಕಿನ ಗೋಣಿಬೀಡು ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಬಸವಣ್ಣನವರ ಜನ್ಮದಿನ ಆಚರಿಸಲಾಯಿತು. ಡಾ. ಮೋಹನ್ ರಾಜಣ್ಣ, ಉಮಾ ಮೋಹನ್, ಸಿ.ಸಿ.ರಾಜಣ್ಣ, ಬಾಂಧವ್ಯ, ಡಿಂಪಲ್ ಇದ್ದರು.
Published on

ಮೂಡಿಗೆರೆ: ಬಸವಣ್ಣನೆಂದರೆ ಸಾಮಾನ್ಯ ವ್ಯಕ್ತಿಯಲ್ಲ ಬದಲಿಗೆ ಅವರೇ ಒಂದು ಸಂವಿಧಾನ. ಎಲ್ಲ ವರ್ಗದವರನ್ನೂ ಒಂದೇ ರೀತಿಯಲ್ಲಿ ಕಂಡ ಅವರ ನಡೆಯೆ ಒಂದು ಪ್ರಯೋಗ ಶಾಲೆ. ಸಮಾಜಕ್ಕೆ ಸಿದ್ಧಾಂತದ ಪಾಠ ಹೇಳಿಕೊಟ್ಟ ಬಸವಣ್ಣ ಜಗತ್ತಿನ ಅದ್ಭುತ ಸಾಧಕ ಎಂದು ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಡಾ. ಮೋಹನ್ ರಾಜಣ್ಣ ಹೇಳಿದರು.

ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಬುಧವಾರ ಗೋಣಿಬೀಡಿನಲ್ಲಿ ಏರ್ಪಡಿಸಿದ್ದ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದ ಪ್ರತಿಯೊಬ್ಬರೂ ಬಸವಣ್ಣನವರ ವಿಚಾರಧಾರೆ, ಚಿಂತನ ಮತ್ತು ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಬಸವಣ್ಣನವರು ಶಾಂತಿ, ಪ್ರೀತಿ, ಸೌಹಾರ್ದ, ಸಹಬಾಳ್ವೆ ಜೀವನ ನಡೆಸುವಂತೆ ಮಾರ್ಗದರ್ಶನ ನೀಡಿದ್ದಾರೆ. ಅವರ ಮಾರ್ಗದರ್ಶನ ಪಾಲಿಸಿದರೆ ಜಗತ್ತು ಪ್ರಶಾಂತವಾಗಿರುತ್ತದೆ ಎಂದು ತಿಳಿಸಿದರು.

ಪ್ರತಿಷ್ಠಾನದ ಅಧ್ಯಕ್ಷೆ ಉಮಾ ಮೋಹನ್ ಮಾತನಾಡಿ, ಬಸವಣ್ಣ ವಚನಗಳ ಮೂಲಕ ನೀಡಿರುವ ಸಮಾಜ ಸುಧಾರಣಾ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಟ್ರಸ್ಟಿಗಳಾದ ಸಿ.ಸಿ.ರಾಜಣ್ಣ ಬಾಂಧವ್ಯ, ಡಿಂಪಲ್, ಪ್ರಸನ್ನ, ಗಂಗಾಧರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net