ಬಸವಕಲ್ಯಾಣ ನಗರ ಯೋಜನಾ ಪ್ರಾಧಿಕಾರಕ್ಕೆ ರಾಜಕುಮಾರ ಸಾರಥ್ಯ

Capture2
Published on

ಬಸವಕಲ್ಯಾಣ: ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ರಾಜಕುಮಾರ ಬಿರಾದಾರ ಸಿರ್ಗಾಪುರ ಅವರನ್ನು ಸರ್ಕಾರ ನೇಮಿಸಿದೆ. ಇವರೊಂದಿಗೆ ಸದಸ್ಯರಾಗಿ ಬಸವರಾಜ ಮುಸ್ತಾಪುರೆ, ಜ್ಞಾನೇಶ್ವರ ಮುಳೆ ಹಾಗೂ ಕಮಲಾಕರ್ ಮೇಕಾಲೆ ಅವರನ್ನು ಸಹ ನೇಮಕ ಮಾಡಿ ನಗರಾಭಿವೃದ್ದಿ ಇಲಾಖೆ (ಅಭಿವೃದ್ಧಿ ಪ್ರಾಧಿಕಾರ ಮತ್ತು ನಯೋಸೆ) ಸರ್ಕಾರದ ಅಧಿನ ಕಾರ್ಯದರ್ಶಿ ಲತಾ ಕೆ. ಆದೇಶ ಹೊರಡಿಸಿದ್ದಾರೆ.

ಪ್ರಾಧಿಕಾರಕ್ಕೆ ಮೂರು ವರ್ಷಗಳಿಂದ ಅಧ್ಯಕ್ಷರು ಮತ್ತು ಸದಸ್ಯರ ನೇಮಕವಿಲ್ಲದೆ ಹಲವು ತಿಂಗಳಿಂದ ಸಭೆ ನಡೆಯದೆ ಸಮಸ್ಯೆಗಳು ಎದುರಾಗಿದ್ದವು. ಹೊಸ ವಿನ್ಯಾಸಗಳಿಗೆ ಅನುಮೋದನೆ ಸಿಗದೆ ಸಮಸ್ಯೆಗೆ ಕಾರಣವಾಗಿತ್ತು ಎನ್ನಲಾಗಿದೆ. ಶಾಸಕ ಶರಣು ಸಲಗರ ಪ್ರಯತ್ನದ ಫಲವಾಗಿ ಈ ನೇಮಕ ನಡೆದಿದೆ. ಬಿಜೆಪಿ ಹಿರಿಯ ಮುಖಂಡರಾಗಿರುವ ರಾಜಕುಮಾರ ಅವರು ಪಕ್ಷ ವಹಿಸಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತ ಬಂದವರು. ಪಕ್ಷದ ತಾಲೂಕು ಅಧ್ಯಕ್ಷರಾಗಿ, ರೈತ ಮೋಚರ್ಾ ಜಿಲ್ಲಾಧ್ಯಕ್ಷರಾಗಿದ್ದು, ಸದ್ಯ ಹಿರಿಯರ ಪ್ರಕೋಷ್ಠದ ಜಿಲ್ಲಾ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net