ಬಲಿಷ್ಠ ಭಾರತ ನಿರ್ಮಾಣಕ್ಕಾಗಿ ವಿವೇಕಾನಂದರ ಆದರ್ಶಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು / ಸಾಯಿಮೌಳಿ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಸ್ವಾಮಿ ವಿವೇಕಾನಂದರ ತತ್ವ ಆದರ್ಶಗಳನ್ನು ಯುವ ಜನತೆ ಅಳವಡಿಸಿಕೊಳ್ಳುವ ಮೂಲಕ ಬಲಿಷ್ಠ ಭಾರತವನ್ನು ನಿರ್ಮಾಣ ಮಾಡೋಣ ಎಂದು ಬಿಜೆಪಿ ಯುವ ಮೋರ್ಚ್ ನಗರ ಅಧ್ಯಕ್ಷ ಬಿ.ಸಾಯಿಮೌಳಿ ತಿಳಿಸಿದರು.

ತಾಲ್ಲೂಕಿನ ಚೊಕ್ಕಹಳ್ಳಿಯ ಚಿನ್ಮಯ ಪಿಯು ಕಾಲೇಜಿನಲ್ಲಿ ಶನಿವಾರ ಸ್ವಾಮಿ ವಿವೇಕಾನಂದರ ೧೬೨ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಅಮೇರಿಕಾದ ಚಿಕಾಗೊದಲ್ಲಿ ಅವರ ಭಾಷಣದ ವೇಳೆ ಅವರ ವೇಶ ಭೂಷಣವನ್ನು ಕಂಡು ಕೇವಲವಾಗಿ ಕೀಳಾಗಿ ಮಾತಾಡಿದವರೇ ಅವರ ಭಾಷಣದ ನಂತರ ಅವರನ್ನು ಅಭಿನಂದಿಸಿದ್ದು ಇತಿಹಾಸ, ಅಂತಹ ಮಹಾನ್ ವ್ಯಕ್ತಿ ನಮಗೆಲ್ಲ ಆದರ್ಶವಾಗಬೇಕು ಎಂದರು.

ನಮ್ಮ ದೇಶದ ಬಗ್ಗೆ ಕೀಳಾಗಿ ಕಾಣುತ್ತಿದ್ದ ಪ್ರಪಂಚದಲ್ಲಿ ಅನೇಕ ರಾಷ್ಟçಗಳು ಇಂದು ನಮ್ಮ ದೇಶವನ್ನು ಎಲ್ಲಾ ರಂಗಗಳಲ್ಲೂ ಪ್ರಗತಿಯತ್ತ ಸಾಗುತ್ತಿರುವ ದೇಶ ಎಂದು ಹೊಗಳುತ್ತಿದ್ದು, ಪ್ರಪಂಚದ ಎಲ್ಲಾ ದೇಶಗಳಲ್ಲೂ ನಮ್ಮ ದೇಶದ ಯುವ ಜನರು ಕೆಲಸ ನಿರ್ವಹಿಸುತ್ತಿರುವುದಲ್ಲದೆ ಕೆಲವು ದೇಶಗಳಲ್ಲಿ ರಾಜಕೀಯವಾಗಿಯೂ ಮುಂದಿದ್ದಾರೆ. ಪ್ರಸ್ತುತ ಭಾರತದ ಪ್ರಧಾನಿ ನರೇಂದ್ರ ಮೋದಿ ಇಂದು ವಿಶ್ವದ ಅತ್ಯಂತ ಜನಪ್ರಿಯ ನಾಯಕರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದರು.

ಬಿಜೆಪಿ ಯುವ ಮೋರ್ಚಾ ತಾಲ್ಲೂಕು ಅಧ್ಯಕ್ಷ ಅಭಿನಾಯ್ಡು ಮಾತನಾಡಿ, ನಮ್ಮ ದೇಶದಲ್ಲಿ ಯುವ ಶಕ್ತಿ ಹೆಚ್ಚಾಗಿದ್ದು, ೧೫೬ ದೇಶಗಳಿಗೆ ಕರೋನ ಲಸಿಕೆ ನೀಡಿದ ಕೀರ್ತಿಯಿದೆ. ಯುದ್ದ ಸಾಮಗ್ರಿಗಳನ್ನು ತಯಾರಿಸಿ ರಫುö್ತ ಮಾಡುತ್ತಿರುವುದು, ನೂತನ ಶಿಕ್ಷಣ ನೀತಿ ಅಳವಡಿಕೆಯಲ್ಲಿ ಮುಂದುವರೆದಿರುವುದುಕ್ಕೆ ಕಾರಣವಾಗಿದೆ ಎಂದರು.

ನಮ್ಮ ಧರ್ಮ, ಭಾಷೆ, ಸಂಸ್ಕöÈತಿಗಳನ್ನು ಪ್ರೀತಿಸದ ದೇಶ ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ ಎಂಬ ವಿವೇಕಾನಂದರ ನುಡಿಗಳೇ ಪ್ರೇರಣೆಯಾಗಿದ್ದು, ವಿದ್ಯಾರ್ಥಿಗಳು ಯುವಜನರು ವಿವೇಕಾನಂದರ ಆದರ್ಶಗಳನ್ನು ಅಳವಡಿಸಿಕೊಳ್ಳುವಂತೆ ಕಿವಿ ಮಾತು ಹೇಳಿದರು.

ಶ್ರೀ ರಾಮಸೇನೆಯ ಜಿಲ್ಲಾ ಅಧ್ಯಕ್ಷರು ಚಿನ್ನಪ್ಪಿ ಹಾಗೂ ಶ್ರೀ ರಾಮ್ ಸೇನೆಯ ನಗರ ಅಧ್ಯಕ್ಷರು ಸುಪ್ರೀತ್ ಹಾಗೂ ಚಂದನ್, ಧನುಷ್,ನಾಗೇಂದ್ರ,ದರ್ಶನ್ ಮತ್ತಿತರರಿದ್ದರು.

ಚಿತ್ರ ೧೨ ಕೆ.ಎಲ್.ಆರ್. ೦೪ : ಕೋಲಾರ ತಾಲ್ಲೂಕಿನ ಚೊಕ್ಕಹಳ್ಳಿಯ ಚಿನ್ಮಯ ಪಿಯು ಕಾಲೇಜಿನಲ್ಲಿ ಶನಿವಾರ ಸ್ವಾಮಿ ವಿವೇಕಾನಂದರ ೧೬೨ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಬಿಜೆಪಿ ಯುವ ಮೋರ್ಚ್ ನಗರ ಅಧ್ಯಕ್ಷ ಬಿ.ಸಾಯಿ ಮೌಳಿ ಭಾಗವಹಿಸಿ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net