ಬದುಕು ಕಟ್ಟಿಕೊಳ್ಳುವಲ್ಲಿ ಶಿಕ್ಷಣದ ಪಾತ್ರ ಹಿರಿದು

16BTP01
16ಬಿಟಿಪಿ01 ಬೆಟ್ಟದಪುರ ಸಮೀಪದ ಹಾರನಹಳ್ಳಿ ಗ್ರಾಮದಲ್ಲಿ ಆದಿ ಜಾಂಬವ ಮಾದಿಗ ಕ್ಷೇಮಾಭಿವೃದ್ಧಿ ಸಮಿತಿವತಿಯಿಂದ ಹಾರನಹಳ್ಳಿ ಗ್ರಾಮ ಶಾಖೆ ಉದ್ಘಾಟನಾ ಸಮಾರಂಭ ನಡೆಯಿತು. ಡಾ.ಮಾಧು ಪ್ರಸಾದ್, ನಾರಾಯಣ, ಶ್ರೀ ಗುರು ಹರಳಯ್ಯನವರ, ಸೀಗೂರು ವಿಜಯಕುಮಾರ್, ದೇವರಾಜ್, ರೇಣುಕಾ ಸತೀಶ್, ಗೋವಿಂದೇಗೌಡ ಇದ್ದರು.
Published on

ಬೆಟ್ಟದಪುರ: ಯಾವುದೇ ಒಬ್ಬ ವ್ಯಕ್ತಿ ಬದುಕು ಕಟ್ಟಿಕೊಳ್ಳುವ ಪ್ರಕ್ರಿಯೆಯಲ್ಲಿ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ. ಶಿಕ್ಷಣ ಪ್ರತಿಯೊಬ್ಬರಿಗೆ ದೊರೆಯಬೇಕು ಎಂಬುದೇ ಡಾ.ಬಿ.ಆರ್. ಅಂಬೇಡ್ಕರ್ ಅವರ ಮಹತ್ತರ ಕನಸು ಎಂದು ಸಾಹಿತಿ ಡಾ.ಮಾಧು ಪ್ರಸಾದ್ ತಿಳಿಸಿದರು.


ಬೆಟ್ಟದಪುರ ಸಮೀಪದ ಹಾರನಹಳ್ಳಿ ಗ್ರಾಮದಲ್ಲಿ ಆದಿಜಾಂಬವ ಮಾದಿಗ ಕ್ಷೇಮಾಭಿವೃದ್ಧಿ ಸಮಿತಿ ವತಿಯಿಂದ ಆಯೋಜಿಸಿದ್ದ ಹಾರನಹಳ್ಳಿ ಗ್ರಾಮ ಶಾಖೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸಮಯಾವಕಾಶ ಸಿಕ್ಕಾಗ ಓದುವುದಕ್ಕೆ ಗ್ರಂಥಾಲಯಗಳ ಅವಶ್ಯಕತೆ ತುಂಬಾ ಇದೆ. ಆದ್ದರಿಂದ ಗ್ರಾಮೀಣ ಭಾಗದಲ್ಲಿ ಗ್ರಂಥಾಲಯಗಳನ್ನು ತೆರೆಯುವುದಕ್ಕೆ ಮತ್ತಷ್ಟು ಒತ್ತು ನೀಡಬೇಕು. ಗ್ರಂಥಾಲಯಗಳಲ್ಲಿ ಪುಸ್ತಕಗಳನ್ನು ಓದುವುದರಿಂದ ಮಹನೀಯರ ಬಗ್ಗೆ ತಿಳಿದು ಅವರನ್ನು ಅನುಸರಿಸಿ ಸಾಧನೆಯ ಹಾದಿ ಹಿಡಯಬಹುದು ಎಂದರು.


ನಿವೃತ್ತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾರಾಯಣ ಮಾತನಾಡಿ, ‘ಮನುಷ್ಯ ಜಾತಿ ತಾನೊಂದೇ ವಲಂ’ ಎಂದು ಹತ್ತನೇ ಶತಮಾನದಲ್ಲಿ ಮಹಾಕವಿ ಪಂಪ ಹೇಳಿದ ಮಾತನ್ನು ಸಾಕಾರಗೊಳಿಸಿ ಸಮಾನತೆಯ ಸಮಾಜ ನಿರ್ಮಿಸುವಲ್ಲಿ ಭಾರತದ ಸಂವಿಧಾನವು ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಿದೆ. ಸಮಸಮಾಜ ಹಾಗೂ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಹೊತ್ತ ಭಾರತ ಸಂವಿಧಾನವನ್ನು ಇಂದು ಜಗತ್ತಿನ ಇತ್ಕ ದೇಶಗಳೂ ಅನುಕರಿಸುತ್ತಿವೆ ಹಾಗೂ ಅನುಸರಿಸುತ್ತಿವೆ ಎಂದರು.


ಶ್ರೀ ಗುರು ಹರಳಯ್ಯನವರ ಮಠದ ಶ್ರೀ ರುದ್ರಪ್ಪ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಆದಿ ಜಾಂಬವ ಸಂಘದ ಜಿಲ್ಲಾ ಉಪಾಧ್ಯಕ್ಷ ಸೀಗೂರು ವಿಜಯಕುಮಾರ್, ಸಂಘದ ಅಧ್ಯಕ್ಷ ದೇವರಾಜ್, ಗ್ರಾಮ ಪಂಚಾಯಿತಿ ಸದಸ್ಯರಾದ ರೇಣುಕಾ ಸತೀಶ್, ಅನಿಲ್ ಕುಮಾರ್, ಕಮಲಮ್ಮ, ಮುಖಂಡರಾದ ಗೋವಿಂದೇಗೌಡ, ಬಿಲ್ ಕಲೆಕ್ಟರ್ ರಮಣಯ್ಯ, ಚಪ್ಪರದಹಳ್ಳಿ ಆದಿಜಾಂಬವ ಸಂಘದ ಉಪಾಧ್ಯಕ್ಷ ಸಿ.ಜಿ. ರವಿ, ತಾಲೂಕಿನ ಆದಿ ಜಾಂಬವ ಸಂಘದ ಪದಾಧಿಕಾರಿಗಳು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net