ಬಡತನ ನಿರ್ಮೂಲನೆ ಒಕ್ಕೂಟದ ಉದ್ದೇಶ

ಬನ್ನೂರಿನ ಸಮೀಪದ ಬೆನಕನಹಳ್ಳಿ ಮಹಿಳಾ ಕಳಂಜಿಯರ ಒಕ್ಕೂಟದ ವತಿಯಿಂದ ಸಮೂಹ ವಾರ್ಷಿಕ ಮಹಾಸಭೆಯಲ್ಲಿ ಒಕ್ಕೂಟದ ಸಂಯೋಜಕ ಮಂಜುನಾಥ್, ಮಂಟೇಲಿಂಗ, ಶುಕಾಂತ್, ಮಂಗಳಗೌರಿ, ಚಂದ್ರಮ್ಮ, ಇಂದ್ರಮ್ಮ, ನಿರ್ಮಲಾ, ಸುಧಾ, ನಾರಾಯಣ್, ಶಶಿಕಲಾ, ಮಾನಸಾ, ಶೀಲಾ, ಸೌಮ್ಯಾ, ರಂಜಿತಾ, ಕಾವ್ಯಾ ಇತರರಿದ್ದರು.
23 bannur 1
Published on

ಬನ್ನೂರು: ಸಮಾಜದಲ್ಲಿ ಬಡ ಕುಟುಂಬವನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಮೂಲಕ ಬಡತನ ನಿರ್ಮೂಲನೆ ಮಾಡುವುದೇ ಮಹಿಳಾ ಕಳಂಜಿಯರ ಒಕ್ಕೂಟದ ಉದ್ದೇಶ ಎಂದು ಒಕ್ಕೂಟದ ಸಂಯೋಜಕ ಮಂಜುನಾಥ್ ತಿಳಿಸಿದರು.


ಪಟ್ಟಣದ ಸಮೀಪದ ಬೆನಕನಹಳ್ಳಿ ಮಹಿಳಾ ಕಳಂಜಿಯರ ಒಕ್ಕೂಟದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಸಮೂಹ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.


ಕಳಂಜಿ ಸ್ವಸಹಾಯ ಸಂಘ ಹಲವಾರು ವರ್ಷಗಳಿಂದ ಗ್ರಾಮೀಣ ಭಾಗದ ಮಹಿಳೆಯರನ್ನು ಸಬಲರನ್ನಾಗಿ ಮಾಡಿದ್ದು, ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಆರ್ಥಿಕವಾಗಿ ಸಬಲರಾಗಿದ್ದಾರೆ ಎಂದು ತಿಳಿಸಿದರು.


ಸ್ಥಳೀಯ ಖಾಸಗಿ ಬ್ಯಾಂಕ್ ಮ್ಯಾನೇಜರ್ ಶುಕಾಂತ್ ಮಾತನಾಡಿ, ಮಹಿಳೆಯರಿಗೆ ಒಕ್ಕೂಟದ ವತಿಯಿಂದ ಹಲವಾರು ವಿವಿಧ ರೀತಿಯ ಸಾಲ ಸೌಲಭ್ಯ ನೀಡಲಾಗುತ್ತಿದ್ದು, ಅದರ ಸದುಪಯೋಗ ಪಡೆದುಕೊಳ್ಳುವ ಮೂಲಕ ಆರ್ಥಿಕವಾಗಿ ಸಬಲರಾಗುವಂತೆ ತಿಳಿಸಿದರು.
ನಂತರ ಗ್ರಾಮದ ಹಿರಿಯ ಮುಖಂಡರನ್ನು ಸನ್ಮಾನಿಸಲಾಯಿತು. ಒಕ್ಕೂಟದ ಸಂಯೋಜಕ ಮಂಜುನಾಥ್, ಪಂಚಾಯಿತಿ ಅಧ್ಯಕ್ಷ ಮಂಟೇಲಿಂಗ, ಮಂಗಳಗೌರಿ, ಚಂದ್ರಮ್ಮ, ಇಂದ್ರಮ್ಮ, ನಿರ್ಮಲಾ, ಸುಧಾ, ನಾರಾಯಣ್, ಶಶಿಕಲಾ, ಮಾನಸಾ, ಶೀಲಾ, ಸೌಮ್ಯಾ, ರಂಜಿತಾ, ಕಾವ್ಯಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net