ಬಂಡೆ ಮೇಲೆ ಊಟ ಸವಿದ ಭಕ್ತರು

13ydg01
Published on

ಯಾದಗಿರಿ: ತಾಲೂಕಿನ ಕಾಳೆಬೆಳಗುಂದಿ ಗ್ರಾಮದಲ್ಲಿ ಮಂಗಳವಾರ ಸಂಜೆ ಶ್ರೀಬಂಡೆ ರಾಚೋಟೇಶ್ವರ ಜಾತ್ರಾ ಮಹೋತ್ಸವ ಅತ್ಯಂತ ಸಂಭ್ರಮದಿಂದ ಜರುಗಿತು.

ಪ್ರತಿವರ್ಷ ಶ್ರಾವಣ ಮಾಸದಲ್ಲಿ ನಡೆಯುವ ಈ ಜಾತ್ರೆಯ ನಿಮಿತ್ತ 4ನೇ ಸೋಮವಾರದಂದು ಪಲ್ಲಕ್ಕಿ ಹಾಗೂ ನಂದಿಕೋಲು ಸೇವೆಯೊಂದಿಗೆ ಗ್ರಾಮದಿಂದ ಪಾದಯಾತ್ರೆ ಮೂಲಕ ಭಕ್ತರು ಬಳಿಚಕ್ರ ಮಾರ್ಗವಾಗಿ ಲಿಂಗೇರಿ ಗ್ರಾಮ ತಲುತ್ತಾರೆ. ಅಲ್ಲಿನ ಭೀಮಾ ನದಿಯಲ್ಲಿ ದೇವರಿಗೆ ಗಂಗಾ ಸ್ನಾನವಾದ ಬಳಿಕ ಮರುದಿನ (ಸೆ.12) ಮಧ್ಯಾಹ್ನ ರಾಚೋಟೇಶ್ವರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ಸಾವಿರಾರು ಭಕ್ತರು ಸಾಕ್ಷಿಯಾಗಿದ್ದರು.

ಈ ಜಾತ್ರೆಯ ಮತ್ತೊಂದು ವಿಶೇಷ ಭಕ್ತರು ತಟ್ಟೆಯಲ್ಲಿ ಊಟ ಮಾಡದೆ, ದೇವಸ್ಥಾನದ ಮುಂದಿರುವ ಬಂಡೆಗಲ್ಲುಗಳ ಮೇಲೆ ಊಟ ನೀಡಿುಕೊಂಈ ಸಂಪ್ರದಾಯ ಅನೂಚಾನವಾಗಿ ನಡೆದುಕೊಂಡು ಬಂದಿದೆ. ಇದರಿಂದ ಭಗವಂತ ಪ್ರಸನ್ನನಾಗುತ್ತಾನೆ ಎಂಬ ನಂಬಿಕೆ ಭಕ್ತರದ್ದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net