ಬಂಜಾರ ಸಮುದಾಯ ಸಂಸ್ಕೃತಿಯೊಂದಿಗೆ ಸಾಗುತ್ತಿದೆ

ctd 6 muruga book new
Published on

ಚಿತ್ರದುರ್ಗ: ಬಂಜಾರ ಸಮುದಾಯವು ಯಾಂತ್ರಿಕ ಬದುಕಿನೊಂದಿಗೆ ಸಂಸ್ಕೃತಿಯ ಜತೆಗೂ ಸಾಗುವ ಸಮುದಾಯವಾಗಿರುವುದಾಗಿ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು. ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಸಾಹಿತಿ ಕೆ.ಮಂಜುನಾಥ್ ನಾಯಕ್ ಅವರ‘ಸಿಂಧು ಗೋರ್ ಬಂಜಾರ’ ಸಂಶೋಧನಾ ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿ,ಸಂಸ್ಕೃತಿ,ಪರಿಸರದ ಜತೆ ಈ ಸಮು ದಾಯ ಗುರುತಿಸಿಕೊಂಡಿದೆ.
ಭಾರತ ಹಲವು ಸಂಸ್ಕೃತಿಗಳ ದೇಶ. ಸಾವಿರಾರು ಸಮುದಾಯಗಳ ಉಗಮ ಸ್ಥಾನವೂ ಆಗಿದ್ದು,ಸಂಶೋಧಕರು ಒಂದು ರೀತಿಯಲ್ಲಿ ಅಜ್ಞಾತವಾಸಿಗಳಾಗಿದ್ದಾರೆ. ಕಷ್ಟದಿಂದ ಕೂಡಿರುವ ಸಂಶೋಧನೆ ಕೆಲಸವನ್ನು ಧೈರ್ಯದಿಂದ ಪೂರ್ಣಗೊಳಿಸಲು ಧೈರ್ಯ ಅಗತ್ಯವಿದೆ. ಈ ಕೃತಿ ಜನರ ಸಂಸ್ಕೃತಿಯ ಹಾದಿಗೆ ಒತ್ತು ನೀಡಿದೆ ಎಂದರು.
ಇತಿಹಾಸ ಸಂಶೋಧಕ ಪ್ರೊ.ಬಿ.ರಾಜಶೇಖರಪ್ಪ ಮಾತನಾಡಿ,ಮಂಜುನಾಥ್‌ನಾಯಕ್ ಕೃತಿ ಉತ್ತಮ ರೀತಿಯಲ್ಲಿ ಓದಿಸಿಕೊಂಡು ಹೋಗುತ್ತದೆ. ಈ ಸಮುದಾಯವನ್ನು ಚಿತ್ರಣದ ಮೂಲಕ ವಿಶೇಷವಾಗಿ ಕಟ್ಟಿಕೊಡುವಲ್ಲಿ ಸಫಲರಾಗಿದ್ದಾರೆ. ಸೇವಾಲಾಲ್,ಭೀಮಾ ನಾಯಕ್ ಸಮುದಾಯದ ಸಾಂಸ್ಕೃತಿಕ ವೀರರಾಗಿದ್ದಾರೆ. ಇವರ ದೇವರ ಆರಾಧನೆಯೂ ವಿಶಿಷ್ಟವಾಗಿದೆ ಎಂದರು. ಕೃತಿಕಾರ ಕೆ. ಮಂಜುನಾಥ್‌ನಾಯಕ್ ಮಾತನಾಡಿ ಸಂಶೋಧನಾ ಗ್ರಂಥ ಪ್ರಕಟಣೆಯ ಹಿಂದಿನ ತಮ್ಮ ಶ್ರಮವನ್ನು ವಿವರಿಸಿದರು.
ಚಳ್ಳಕೆರೆಯ ಮಕ್ಕಳ ತಜ್ಞ ಡಾ.ಚಂದ್ರನಾಯ್ಕ ಮಾತನಾಡಿದರು. ಕುರುಡಿಹಳ್ಳಿ ಶಿವಸಾಧು ಮಹಾರಾಜ್, ಬಂಜಾರ ಗುರುಪೀಠದ ನಂದಾಮಸಂದ್ ಸೇವಾಲಾಲ್ ಸ್ವಾಮೀಜಿ, ಬಂಜಾರ ಗುರುಪಿಠದ ಕಾರ್ಯಾಧ್ಯಕ್ಷ ಬಿ.ರಾಜಾನಾಯ್ಕ, ಇಂಗಳದಾಳ್ ಗ್ರಾಪಂ ಅಧ್ಯಕ್ಷ ಯು.ವೆಂಕಟೇಶ್‌ನಾಯ್ಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net