ಬಂಗಾರಪೇಟೆ ಪೋಲಿಸರು ಕಾರ್ಯಾಚರಣೆ / ಐವರು ಆರೋಪಿಗಳ ಬಂಧನ / ೧ ಕೋಟಿ ೪೦ ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ನಗರದು ವಶ

Published on

ವಿಜಯವಾಣಿ ಸುದ್ದಿಜಾಲ ಕೋಲಾರ
ಬಂಗಾರಪೇಟೆ ಪೊಲೀಸರು ಕಳವು ಪ್ರಕರಣಕ್ಕೆ ಸಂಬAಧಿಸಿದAತೆ ಐದು ಮಂದಿ ಆರೋಪಿಗಳನ್ನು ಬಂಧಿಸಿ, ಅವರಿಂದ ೧ ಕೋಟಿ ಮೌಲ್ಯದ ೧ ಕೆಜಿ ೪೦೮ ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿರುತ್ತಾರೆ.

ಕೆಜಿಎಫ್‌ನ ನಿವಾಸಿ ಯು.ಗೌತಮ್‌ಚಂದ್ ಎಂಬ ಚಿನ್ನದ ವ್ಯಾಪಾರಿಯು ಫೆ. ೨೫ ರಂದು ಬಂಗಾರಪೇಟೆ ಪಟ್ಟಣದ ಜ್ಯೂವೆಲ್ಲರಿ ಅಂಗಡಿಗಳಿಗೆ ಚಿನ್ನಾಭರಣಗಳನ್ನು ಸರಬರಾಜು ಮಾಡಲು ಬಂದು, ವ್ಯಾಪಾರ ವಹಿವಾಟು ಮುಗಿಸಿ ಅಂದು ಮದ್ಯಾಹ್ನ ಕೆಜಿಎಫ್‌ಗೆ ವಾಪಸ್ಸಾಗುವಾಗ ಬಂಗಾರಪೇಟೆ ಪಟ್ಟಣದ ಬಸ್‌ನಿಲ್ದಾಣದ ಸಮೀಪ ಯಾರೋ ಇಬ್ಬರು ಅಪರಿಚಿತ ಕಳ್ಳರು ದ್ವಿಚಕ್ರ ವಾಹನದಲ್ಲಿ ಬಂದು ಕೆಜಿಎಫ್‌ನ ಯು.ಗೌತಮ್‌ಚಂದ್ ಎಂಬ ಚಿನ್ನದ ವ್ಯಾಪಾರಿಯ ಗಮನವನ್ನು ಬೇರೆಡೆಗೆ ಸೆಳೆದು ಅವರ ಬಳಿ ಇದ್ದ ಚಿನ್ನಾಭರಣ ಹಾಗೂ ನಗದು ಇದ್ದಂತಹ ಬ್ಯಾಗ್‌ನ್ನು ಕಳವು ಮಾಡಿಕೊಂಡು ಪರಾರಿಯಾಗಿರುತ್ತಾರೆ.

ಈ ಸಂಬAಧ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಚಿನ್ನದ ಆಭರಣಗಳು ಮತ್ತು ನಗದು ಹಣ ಸೇರಿ ೧ ಕೋಟಿ ೪೦ ಲಕ್ಷ ಮೌಲ್ಯದ್ದು ಕಳವು ಆಗಿದ್ದರ ಕುರಿತು ಪ್ರಕರಣ ದಾಖಲಿಸಲಾಗಿತ್ತು.

ಬಂಗಾರಪೇಟೆ ಅಪರಾಧ ವಿಭಾಗದ ಪೊಲೀಸರು ಪೊಲೀಸ್‌ವರಿಷ್ಠಾಧಿಕಾರಿ ಕೆ.ಎಂ.ಶಾAತರಾಜು, ಡಿವೈಎಸ್ಪಿ ಎಸ್.ಪಾಂಡುರAಗ ಅವರುಗಳ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಎಂ.ನAಜಪ್ಪ ಮತ್ತು ಸಿಬ್ಬಂದಿಗಳು ಆಂದ್ರಪ್ರದೇಶ ಮತ್ತು ಒರಿಸ್ಸಾ ರಾಜ್ಯಗಳಲ್ಲಿ ಆರೋಪಿಗಳ ಮತ್ತು ಮಾಲಿನ ಪತ್ತೆಗಾಗಿ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದರು.

ಆರೋಪಿಗಳಾದ ಆಂದ್ರಪ್ರದೇಶ ರಾಜ್ಯದ ಕೆ.ಡಿ.ಪೇಟೆಯ ನಿವಾಸಿ ಎಂ.ಘAಟ ಶ್ರೀಕಾಂತ್, ಚಿನ್ನಯ್ಯಪಾಳ್ಯಂ ಗ್ರಾಮದ ಮೇಕಲ ಹರಿಕಿರಣ್, ಪಾಂಡು, ಮೇಕಲ ಲಾವ, ಒರಿಸ್ಸಾ ರಾಜ್ಯದ ಗಂಜA ಜಿಲ್ಲೆ ನಾರಾಯಣಪುರದ ಜಿ.ಅರೇಶ್‌ದಾಸ್ ಮತ್ತು ಜಿ.ಲಕ್ಷಿö್ಮÃದಾಸ್‌ರವರುಗಳನ್ನು ಬಂಧಿಸಿ, ಅವರುಗಳಿಂದ ಒಟ್ಟು ೧ ಕೋಟಿ ೬ ಲಕ್ಷದ ಮೌಲ್ಯದ ೧ ಕೆಜಿ ೪೦೮ ಗ್ರಾಂ ತೂಕದ ಬಂಗಾರದ ಆಭರಣಗಳನ್ನು, ಕೃತ್ಯಕ್ಕೆ ಬಳಸಿದ ೨ ದ್ವಿಚಕ್ರವಾಹನಗಳು ಮತ್ತು ೪ ಮೊಬೈಲ್ ಪೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಐವರು ಆರೋಪಿಗಳನ್ನು ಗುರುವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಆರೋಪಿಗಳನ್ನು ಬಂಧಿಸಿ, ಕಳವು ಮಾಲು ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಬಂಗಾರಪೇಟೆ ಪಿಐ ನಂಜಪ್ಪ, ರಾಬರ್ಟ್ಸನ್‌ಪೇಟೆ ಸಿಪಿಐ ರಾಮಕೃಷ್ಣಯ್ಯ, ಸೈಬರ್ ಕ್ರೆöÊಂ ಪಿಐ ಲಕ್ಷಿö್ಮÃನಾರಾಯಣ, ಆಂಡ್ರಸನ್‌ಪೇಟೆ ಪಿಎಸ್‌ಐ ಚೇತನ್‌ಕುಮಾರ್, ಅಪರಾಧ ವಿಶೇಷ ಪತ್ತೆ ದಳದ ಸಿಬ್ಬಂದಿಗಳಾದ ಚಂದ್ರಕುಮಾರ್, ಪ್ರಭಾಕರ್, ಅನಿಲ್‌ಕುಮಾರ್, ಚಲಪತಿ, ಮಂಜುನಾಥರೆಡ್ಡಿ, ರಾಮಕೃಷ್ಣಾರೆಡ್ಡಿ, ಮುನಾವರ್‌ಪಾಷ, ವಿಜಯಲಕ್ಷಿö್ಮÃ, ಎಂ.ಆರ್.ಲಲಿತಾ, ಆರ್.ಮಂಜುಳಾ, ಮುರಳಿ, ಸೋಮಪ್ಪ ಮುಗಳಿ, ಸುಮನ್,ನವೀನ್, ಕೆ.ಓ.ಮಂಜುಳಾ ಅವರುಗಳು ಯಶಸ್ವಿಯಾಗಿದ್ದು, ಪೊಲೀಸರ ಕಾರ್ಯವೈಖರಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಕೆ.ಎಂ.ಶಾAತರಾಜು, ಡಿವೈಎಸ್ಪಿ ಎಸ್.ಪಾಂಡುರAಗ ಅವರುಗಳು ಶ್ಲಾಘಿಸಿದ್ದಾರೆ.

ಚಿತ್ರ ೨೫ ಕೆ.ಎಲ್.ಆರ್. ೦೨ : ಬಂಗಾರಪೇಟೆ ಪೋಲಿಸರು ಆರೋಪಿಗಳಿಂದ ವಶಪಡಿಸಿಕೊಂಡಿರುವ ಚಿನ್ನಾಭರಣಗಳು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net