ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ

08 TKE 3 swamiji
ತರೀಕೆರೆಯಲ್ಲಿ ಏರ್ಪಡಿಸಿದ್ದ ಬಂಜಾರ ಪ್ರಮುಖರ ಸಭೆಯಲ್ಲಿ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಮಾತನಾಡಿದರು. ಎಚ್.ಎಲ್.ಮಂಜುನಾಥ, ವೈ.ಆರ್.ಯೋಗೇಂದ್ರಕುಮಾರ್‌ನಾಯ್ಕ, ಟಿ.ಚನ್ನಾನಾಯ್ಕ, ರಾಮಾನಾಯ್ಕ, ಸತ್ಯಪ್ಪ, ಟಿ.ವಿಜಯನಾಯ್ಕ ಇತರರಿದ್ದರು.
Published on

ತರೀಕೆರೆ: ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿ ಅವೈಜ್ಞಾನಿಕವಾಗಿದ್ದು ಒಳ ಮೀಸಲಾತಿಯಲ್ಲಿ ಬಂಜಾರ ಸಮಾಜಕ್ಕೆ ಅನ್ಯಾಯವಾಗಿದೆ. ನಮ್ಮ ಹಕ್ಕು ಮರು ಪಡೆಯಲು ಸೆ.10ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸಮುದಾಯದಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಚಿತ್ರದುರ್ಗ ಸೀಬಾರ ಬಂಜಾರ ಗುರುಪೀಠದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಹೇಳಿದರು.

ಪಟ್ಟಣದಲ್ಲಿ ತಾಲೂಕು ಬಂಜಾರ ಸಂಘದಿಂದ ಸೋಮವಾರ ಹಮ್ಮಿಕೊಂಡಿದ್ದ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ಈವರೆಗೆ ಸಮನ್ವತೆಯಿಂದ ಬದುಕುತ್ತಿದ್ದ ಸಹೋದರ ಸಮಾಜಗಳ ನಡುವೆ ಸರ್ಕಾರ ಒಳ ಮೀಸಲಾತಿ ಎಂಬ ಕಿಚ್ಚು ಹತ್ತಿಸಿ ಒಡಕು ಮೂಡಿಸಿದೆ. ಸಿಎಂ ಪಟ್ಟಭದ್ರ ಹಿತಾಸಕ್ತಿಗಳ ಒತ್ತಡಕ್ಕೆ ಮಣಿದು ಆತುರದ ನಿರ್ಧಾರ ತೆಗೆದುಕೊಂಡಿದ್ದಾರೆ. ಜನಗಣತಿ ದತ್ತಾಂಶದಲ್ಲಿ ಕಡಿಮೆ ಜನಸಂಖ್ಯೆ ನಮೂದಿಸಿ ತಾರತಮ್ಯ ಮಾಡಲಾಗಿದೆ ಎಂದು ಆಪಾದಿಸಿದರು.

ಒಳ ಮೀಸಲಾತಿಯಿಂದ ಉಂಟಾಗಿರುವ ಅನ್ಯಾಯದ ವಿರುದ್ಧ ಸಮಾಜ ಒಗ್ಗೂಡಿ ಹೋರಾಡುವ ಅನಿವಾರ್ಯತೆ ಎದುರಾಗಿದ್ದು ಇಂತಹ ಸನ್ನಿವೇಶದಲ್ಲಿ ಸಮುದಾಯದ ಪ್ರತಿಯೊಬ್ಬರು ಎಚ್ಚೆತ್ತು ಹೋರಾಟಕ್ಕೆ ಧುಮುಕಬೇಕಿದೆ ಎಂದು ಹೇಳಿದರು.

ಸಭೆಯಲ್ಲಿ ಪ್ರಮುಖರಾದ ಎಚ್.ಎಲ್.ಮಂಜುನಾಥ, ವೈ.ಆರ್.ಯೋಗೇಂದ್ರಕುಮಾರ್ ನಾಯ್ಕ, ಟಿ.ವಿಜಯನಾಯ್ಕ, ಟಿ.ಚನ್ನಾನಾಯ್ಕ, ರಾಮಾನಾಯ್ಕ, ಶಿವಮೂರ್ತಿನಾಯ್ಕ, ಚಂದ್ರಾನಾಯ್ಕ, ಸತ್ಯಪ್ಪ, ಕುಮಾರನಾಯ್ಕ, ಗೋವಿಂದನಾಯ್ಕ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net