ಫೆ.15 ಕ್ಕೆ ವಿಮಾನ ನಿಲ್ದಾಣ ಕಾಮಗಾರಿಗೆ ಚಾಲನೆ: ಕೂಚಬಾಳ

20210212_095823
Published on

ವಿಜಯಪುರ: ಬಜೆಟ್ ಇರುವ ಕಾರಣ ಹಾಗೂ ಕಾರ್ಯಕ್ರಮದ ಒತ್ತಡದಿಂದ ಸಿಎಂ ವರ್ಚುವಲ್ ಸಭೆ ಮೂಲಕ ವಿಮಾನ ನಿಲ್ದಾಣ ಕಾಮಗಾರಿಗೆ ಚಾಲನೆ ನೀಡುವರೆಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ ತಿಳಿಸಿದರು.

ಜಿಲ್ಲೆಯ ಬಹುದಿನದ ಬೇಡಿಕೆಯಾದ ವಿಮಾನ ನಿಲ್ದಾಣ ಕಾಮಗಾರಿಗೆ ಫೆ.15 ರಂದು ಯಡಿಯೂರಪ್ಪ ಚಾಲನೆ ನೀಡುತ್ತಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ವಿಶೇಷವಾಗಿ ಅತೀ ಹೆಚ್ಚು ತೋಟಗಾರಿಕೆ ಬೆಳೆ ಹೊಂದಿದ ಜಿಲ್ಲೆಯ ರೈತರಿಗೆ ವಿಮಾನ ನಿಲ್ದಾಣದಿಂದ ಸಾಕಷ್ಟು ಅನುಕೂಲವಾಗಲಿದೆ. ಅಲ್ಲದೇ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗಲಿದೆ ಎಂದರು.

ಬಿಜೆಪಿ ಸಂಸದರು ಹಾಗೂ ಡಿಸಿಎಂ ಕಾರಜೋಳ ಅವರ ಪರಿಶ್ರಮದ ಫಲವಾಗಿ ವಿಮಾನ ನಿಲ್ದಾಣದ ಕನಸು ನನಸಾಗುತ್ತಿದೆ. ಮೊದಲ ಹಂತದ ಕಾಮಗಾರಿಗೆ 95 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಲಾಗಿದ್ದು 11 ತಿಂಗಳಲ್ಲಿ ಕಾಮಗಾರಿ ಮುಕ್ತಾಯಗೊಳ್ಳಲಿದೆ‌ ಎಂದರು.

ಸಾವಯವ ಹಾಗೂ ಬೀಜ ಪ್ರಮಾಣ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಮುಖಂಡರಾದ ಉಮೇಶ ಕಾರಜೋಳ, ವಿವೇಕಾನಂದ‌ ಡಬ್ಬಿ, ಶಿವರುದ್ರ ಬಾಗಲಕೋಟ, ವಿಜಯ‌ ಜೋಶಿ, ಬಸವರಾಜ ಬೈಚಬಾಳ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net