ಫೆ.1,2ರಂದು ಸಂಸ್ಕೃತ ಕಾವೇರಿ ಕಾರ್ಯಕ್ರಮ

dvg-hindu-ganapati.jpg
Published on

ಸಂಸ್ಕೃತ ಭಾರತೀ ಕರ್ನಾಟಕ ದಕ್ಷಿಣ ವಿಭಾಗದ ವತಿಯಿಂದ ಫೆಬ್ರವರಿ 1 ಮತ್ತು 2ರಂದು ನಗರದಲ್ಲಿ ಕರ್ನಾಟಕ ಪ್ರಾಂತ್ಯ ಸಮ್ಮೇಳನವಾದ ‘ಸಂಸ್ಕೃತ ಕಾವೇರಿ’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ , ಶಾಸಕ ಟಿ.ಎಸ್. ಶ್ರೀವತ್ಸ ತಿಳಿಸಿದರು.

ನಗರದ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಫೆ.1ರಂದು ಮೇಘಾಲಯದ ರಾಜ್ಯಪಾಲ ಸಿ.ಎಚ್.ವಿಜಯಶಂಕರ್ ಚಾಲನೆ ನೀಡುವರು. ರಾಮಕೃಷ್ಣಾಶ್ರಮದ ಅಧ್ಯಕ್ಷ ಮುಕ್ತಿದಾನಂದಜೀ ಮಹಾರಾಜ್ ಸಾನ್ನಿಧ್ಯ ವಹಿಸಲಿದ್ದು, ಸಂಸ್ಕೃತ ಭಾರತೀ ರಾಜ್ಯಾಧ್ಯಕ್ಷ ಪ.ನಾ.ಶಾಸ್ತ್ರಿ ಅಧ್ಯಕ್ಷತೆ ವಹಿಸುವರು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಮಾರೋಪ ಸಮಾರಂಭ ಫೆ.2ರ ಸಂಜೆ 5 ಗಂಟೆಗೆ ನಡೆಯಲಿದೆ. ಸಂಸ್ಕೃತ ಭಾರತಿ ಅಖಿಲ ಭಾರತ ಉಪಾಧ್ಯಕ್ಷ ದಿನೇಶ್ ಕಾತ್ ಸಮಾರೋಪ ಭಾಷಣ ಮಾಡುವರು. ಎರಡೂ ದಿನಗಳಲ್ಲಿ ರಾಜ್ಯ ಸಮ್ಮೇಳನ ಪ್ರದರ್ಶಿನಿ, ಶೋಭಾಯಾತ್ರೆ, ಸಾರ್ವಜನಿಕ ಸಭೆಗಳು ನಡೆಯಲಿವೆ. ಸಂಸ್ಕೃತ ಉಳಿಸಿ ಬೆಳೆಸಿಕೊಂಡು, ಮನೆ ಮನೆಗೂ ತಲುಪುವಂತೆ ಮಾಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಸುಮಾರು 900ಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳಲಿದ್ದಾರೆ. ಸಂಸ್ಕೃತ ಹೇಳಿಕೊಡುವ ಗುರುಗಳು, ವಿದ್ಯಾರ್ಥಿಗಳು ಮೊದಲಾದವರು ಪಾಲ್ಗೊಳ್ಳಲಿದ್ದಾರೆ ಎಂದರು. ಆಯೋಜಕರಾದ ಡಾ.ಬಿ.ಜಿ.ಭಾಗ್ಯಲಕ್ಷ್ಮೀ, ಅ.ಮ.ಭಾಸ್ಕರ್, ರುಕ್ಮಾಂಗದ, ಡಾ.ಪ್ರಕಾಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net