ಫುಡ್ ಡೆಲಿವರಿ ಬಾಯ್ ಸೇರಿದಂತೆ ಇಬ್ಬರು ಸವಾರರು ಮೃತ

Crime Logo
Published on

ನಗರದ ಬನ್ನಿಮಂಟಪದ ನೆಲ್ಸನ್ ಮಂಡೇಲಾ ರಸ್ತೆಯಲ್ಲಿ ಭಾನುವಾರ ಬೆಳಗಿನ ಜಾವ ವೇಗದಿಂದ ಬಂದ ಬೈಕ್ ಸವಾರ ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಫುಡ್ ಡೆಲಿವರಿ ಬಾಯ್ ಸೇರಿದಂತೆ ಇಬ್ಬರು ಸವಾರರು ಮೃತಪಟ್ಟಿದ್ದಾರೆ. ಹಾಗೆಯೇ ಸ್ಕೂಟರ್‌ಗೆ ಡಿಕ್ಕಿ ಹೊಡೆದ ರಭಸಕ್ಕೆ ದುಬಾರಿ ಬೆಲೆಯ ಬೈಕ್ ಸಂಪೂರ್ಣ ಛಿದ್ರಗೊಂಡು ಸಂಪೂರ್ಣ ಸುಟ್ಟು ಕರಕಲಾಗಿದೆ.

ಚಾಮರಾಜನಗರದ ಕೆ.ಪಿ. ಮೊಹಲ್ಲಾದ ನಿವಾಸಿ, ದುಬಾರಿ ಬೈಕ್ ಸವಾರ ಸೈಯ್ಯದ್ ಶರೆನ್(30), ಫುಡ್ ಡೆಲಿವರಿ ಬಾಯ್ ಮೈಸೂರು ತಾಲೂಕಿನ ಶೆಟ್ಟಿನಾಯಕನಹಳ್ಳಿ ನಿವಾಸಿ ಎಂ.ಎಸ್. ಕಾರ್ತಿಕ್(42)ಮೃತರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net