ಬಾಗಲಕೋಟೆ: ವಿದ್ಯುತ್ ಕಡಿತಗೊಳಿಸಿ ಪೆಟ್ರೋಲ್ ಪಂಪನಲ್ಲಿ ಇದ್ದ ೨೬೦,೦೦೦ ನಗದು ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ತಾಲೂಕಿನ ರಾಂಪೂರ ಗ್ರಾಮದ ವಿನಾಯಕ ಪೆಟ್ರೋಲ್ ಪಂಪನಲ್ಲಿ ಮೇ ೨೭ ಕಳ್ಳತನವಾಗಿತ್ತು, ಪಂಪನ ಮ್ಯಾನೇಜರ್ ಸುರೇಶ ಓಲೇಕಾರ ದೂರ ನೀಡಿದ್ದರು. ಪೊಲೀಸರ ವಿಚಾರಣೆ ಕೈಗೊಂಡ ವೇಳೆ ಪ್ರಕರಣ ಬಹಿರಂಗಗೊಂಡಿದ್ದು, ಈತನೇ ಇಸ್ಟಿಟ್ ಆಟದಲ್ಲಿ ಸೋತು ಸಾಲ ಮಾಡಿಕೊಂಡಿದ್ದನು. ಹೀಗಾಗಿ ರಾತ್ರಿ ವೇಳೆ ವಿದ್ಯುತ್ ಕಡಿತಗೊಳಿಸಿ ಪೆಟ್ರೋಲ್ ಪಂಪನ ಕಿಡಿಕಿಯಲ್ಲಿ ಒಳ ನುಸುಳಿ ಕಳತಳನ ಮಾಡಿರುವುದು ಬೆಳಕಿಗೆ ಬಂದಿದೆ.
ಎಸ್ಪಿ ಅಮರನಾಥ ರೆಡ್ಡಿ ಮಾರ್ಗ ದರ್ಶನದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಮಹಾಂತೇಶ ಜಿದ್ದಿ, ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ವಿನೋದ ಪೂಜಾರಿ, ಸಂತೋಷ ದಳವಾಯಿ ನೇತೃತ್ವದ ಪ್ರಕರಣ ಬೇಽಸಿದ್ದು, ಮ್ಯಾನೇಜರ್ ಸುರೇಶ ಓಲೇಕಾರ ಅವರನ್ನು ಬಂಧಿಸಿ ೨.೧೭೦೦೦ ರೂ. ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನೊಳಿದ ೪೦ ಸಾವಿರ ರೂ. ಸರಾಯಿ ಕುಡಿದು, ಇಸ್ಟಿಟ್ ಆಡಿ ಹಾಳು ಮಾಡಿರುವುದು ಕಂಡು ಬಂದಿದೆ. ಈ ಕುರಿತು ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published on:
Copied
Follow Us