ಪ್ರಶಿಕ್ಷಣಾರ್ಥಿಗಳು ಸೇವಾಭಾವ ಬೆಳೆಸಿಕೊಳ್ಳಬೇಕು

15KDR1 police
ಸರ್ವೋತ್ತಮ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಹಾವೇರಿ ಜಿಲ್ಲೆಯ ಕೂರಗುಂದ ಗ್ರಾಮದ ಹುಚ್ಚಪ್ಪ ಕ. ಕೆಂಚಣ್ಣನವರ.
Published on

ಕಡೂರು: ಸಾರ್ವಜನಿಕ ಸೇವೆ ಬದುಕಿನಲ್ಲಿ ಪೊಲೀಸ್ ಪ್ರಶಿಕ್ಷಣಾರ್ಥಿಗಳು ದರ್ಪ ತೋರಿಸದೆ ವೃತ್ತಿಪರ ಜೀವನ ಬೆಳೆಸಿಕೊಂಡು ಸೇವಾ ಭಾವದಿಂದ ಕಾರ್ಯನಿರ್ವಹಿಸಬೇಕಿದೆ ಎಂದು ಪೊಲೀಸ್ ತರಬೇತಿ ಹೆಚ್ಚುವರಿ ಮಹಾನಿರ್ದೇಶಕ ಅಲೋಕ್‌ಕುಮಾರ್ ಸಲಹೆ ನೀಡಿದರು. ಗೆದ್ಲೆಹಳ್ಳಿ ಬಳಿಯ ಕಡೂರು ಪೊಲೀಸ್ ತರಬೇತಿ ಕೇಂದ್ರದ ಕವಾಯತು ಮೈದಾನದಲ್ಲಿ ಬುಧವಾರ ನಡೆದ 5ನೇ ತಂಡದ ಸಶಸ ಪೊಲೀಸ್ ಕಾನ್ಸ್‌ಟೇಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು. ನಾಡಿನ ರಕ್ಷಣೆ ಮತ್ತು ಸುರಕ್ಷತೆಗಾಗಿ ತೊಡಗಿಸಿಕೊಳ್ಳುವ ಪ್ರಶಿಕ್ಷಣಾರ್ಥಿಗಳಿಗೆ ಸರಿಯಾದ ತರಬೇತಿ ನೀಡಲಾಗಿದೆ. ವಿಚಾರ ಸಂಕಿರಣದಲ್ಲಿ ಸಿವಿಲ್ ಪೊಲೀಸ್, ಪಿಎಸ್‌ಐ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಪಠ್ಯದ ಪರಿಷ್ಕರಣೆಗಳು ನಡೆದರೂ ಪೊಲೀಸ್ ಪೇದೆಯ ತರಬೇತಿ ವಿಭಾಗದಲ್ಲಿ ಯಾವುದೇ ಚರ್ಚೆಗಳು ನಡೆದಿರಲಿಲ್ಲ. ರಾಜ್ಯದಲ್ಲಿ ಎರಡು ವರ್ಷದಿಂದಲೂ ಸಶಸ ಪಡೆಗೆ ಉತ್ತಮ ತರಬೇತಿ ನೀಡಲು ಎಲ್ಲ ರೀತಿಯ ಪರಿಷ್ಕೃತಗೊಂಡ ಪಠ್ಯಕ್ರಮದಂತೆ ಕಾಳಜಿ ವಹಿಸಲಾಗುತ್ತಿದೆ ಎಂದರು.

ಆಕರ್ಷಕ ಬ್ಯಾಂಡ್ ನುಡಿಸಿದ ತಂಡಕ್ಕೆ 2 ಸಾವಿರ ರೂಪಾಯಿ ಪುರಸ್ಕಾರ ನೀಡಿ ಎಡಿಜಿಪಿ ಅಲೋಕ್‌ಕುಮಾರ್ ಗೌರವಿಸಿದರು.

ಪಶ್ಚಿಮ ವಲಯದ ಪೊಲೀಸ್ ಮಹಾನಿರೀಕ್ಷಕ ಅಮಿತ್ ಸಿಂಗ್, ಐಮಂಗಲ ಪೊಲೀಸ್ ತರಬೇತಿ ಕೇಂದ್ರದ ಅಧೀಕ್ಷಕ ಎನ್.ಶ್ರೀನಿವಾಸ್, ಹಾಸನ ತರಬೇತಿ ಕೇಂದ್ರದ ಅಧೀಕ್ಷಕ ಎಂ.ಟಿ.ನಾಗರಾಜ್, ಡಿವೈಎಸ್ಪಿ ಮಲ್ಲಿಕಾರ್ಜುನ ಮುರುಳಾ, ಆರ್‌ಪಿಐ ವಿಠಲ್‌ಶಿಂಧೆ, ಇನ್ಸ್‌ಪೆಕ್ಟರ್‌ಗಳಾದ ಎ.ಮಂಜು, ಪುಷ್ಪಾ, ಪಿಎಸ್‌ಐ ಭವಾನಿ, ಹೇಮಂತ್‌ಕುಮಾರ್, ಸಿಪಿಐ ರಫೀಕ್, ಮಂಜುನಾಥ್, ನಿವೃತ್ತ ಇನ್ಸ್‌ಪೆಕ್ಟರ್ ಸತ್ಯನಾರಯಣ್, ವಿವಿಧ ಠಾಣೆಗಳ ಸಿಪಿಐ, ಪಿಎಸ್‌ಐ ಮತ್ತು ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net