

ಎನ್.ಆರ್.ಪುರ: ಸನ್ಮಾನ, ಪ್ರಶಸ್ತಿಗಳು ನನ್ನ ಜವಾಬ್ದಾರಿ ಮತ್ತಷ್ಟು ಹೆಚ್ಚಿಸಲಿವೆ ಎಂದು ಅಮ್ಮ ಫೌಂಡೇಷನ್ ಅಧ್ಯಕ್ಷ ಸುಧಾಕರ ಶೆಟ್ಟಿ ಹೇಳಿದರು. ಸುಧಾಕರ ಶೆಟ್ಟಿ ಅವರಿಗೆ ವಿಜಯರತ್ನ ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ ಶನಿವಾರ ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಪಕ್ಷದ ಮುಖಂಡರು ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಸನ್ಮಾನ ಮಾಡಿದರೆ, ಪ್ರಶಸ್ತಿ ಬಂದರೆ ಅದು ಹೂವಿನ ಹಾಸಿಗೆಯಲ್ಲ. ಮುಂದೆ ಸಮಾಜ ಸೇವೆಯನ್ನು ಇನ್ನಷ್ಟು ಮಾಡಬೇಕು ಎಂಬುದರ ಸೂಚನೆ. ಮುಂದಿನ ದಿನಗಳಲ್ಲಿ ಶೃಂಗೇರಿ ಕ್ಷೇತ್ರದಲ್ಲಿ ನೊಂದವರಿಗೆ ಧ್ವನಿಯಾಗಿ ಕೆಲಸ ಮಾಡುತ್ತೇನೆ ಎಂದರು. ತಾಲೂಕು ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್, ಕಣಿವೆ ವಿನಯ್, ಕೆ.ಶಿವದಾಸ್, ಬಿ.ಟಿ.ರವಿ, ವರ್ಗೀಸ್, ವಿಜಯನ್, ಸುಬಾನ್, ಸುಬೋದ್, ಮಡಬೂರು ಸತೀಶ್, ಸುಪ್ರೀತ್, ತಿಮ್ಮಯ್ಯ, ಮೇಘರ್ಷ, ಉಪೇಂದ್ರ, ಮರುಳಪ್ಪ, ಹೂವಣ್ಣ, ಚಿನ್ನೇಗೌಡ, ಶಾರದಾ ಮತ್ತಿತರರಿದ್ದರು.