ಪ್ರಶಸ್ತಿ ಮುಡಿಗೇರಿಸಿಕೊಂಡ ಸೊರಬ ವಕೀಲರ ತಂಡ

29sor2 cricket
ಉಳ್ಳೂರಿನ ಕಾನೂನು ಮಹಾವಿದ್ಯಾಲಯದ ಆವರಣದಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸೊರಬ ವಕೀಲರ ತಂಡ ಗೆಲುವು ಸಾಧಿಸಿ ಟ್ರೋಫಿ ಪಡೆಯಿತು. ಸಿ.ವೈ.ಅಶೋಕ್, ಪ್ರದೀಪ್, ಉಮೇಶ್ ಭಂಡಾರಿ, ಎಸ್.ಅರುಣ್, ಪರಶುರಾಮ್ ಇತರರಿದ್ದರು.
Published on

ಸೊರಬ: ಸಾಗರದ ಉಳ್ಳೂರಿನ ಶ್ರೀ ಸಿಗಂದೂರೇಶ್ವರಿ ಎಜುಕೇಷನ್ ಟ್ರಸ್ಟ್ ಮತ್ತು ಸಾಗರ ಗಂಗೋತ್ರಿ ಕಾನೂನು ಮಹಾವಿದ್ಯಾಲಯದ ಆಶ್ರಯದಲ್ಲಿ ಹಮ್ಮಿಕೊಂಡ ಸ್ನೇಹ ಸಮ್ಮಿಲನ ಲೈಟ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸೊರಬ ವಕೀಲರ ತಂಡವು ಜಯಸಾಧಿಸಿ ಎಸ್‌ಎಸ್‌ಇಟಿ ಟ್ರೋಫಿ ಮುಡಿಗೇರಿಸಿಕೊಂಡಿತು.

ಸಾಗರ ಮತ್ತು ಸೊರಬ ವಕೀಲರ ತಂಡದ ನಡುವೆ ನಡೆದ ಪಂದ್ಯಾವಳಿಯಲ್ಲಿ ಟಾಸ್ ಗೆದ್ದ ಸಾಗರ ವಕೀಲರ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಸೊರಬ ವಕೀಲರ ತಂಡ 6 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 107 ಬೃಹತ್ ಮೊತ್ತ ಕಲೆ ಹಾಕಿತು. ಉಮೇಶ್ ಭಂಡಾರಿ ಮತ್ತು ಪ್ರದೀಪ್ ಜೊತೆಯಾಟದಲ್ಲಿ 35 ಬಾಲ್‌ಗಳಲ್ಲಿ 102 ರನ್ ದಾಖಲಿಸಲಾಯಿತು. ಉಮೇಶ್ ಭಂಡಾರಿ (50), ಪ್ರದೀಪ್ (49) ರನ್ ಗಳಿಸಿದರು.

108 ರನ್ ಗುರಿ ಬೆನ್ನಟ್ಟಿದ ಸಾಗರ ವಕೀಲರ ತಂಡ 6 ಓವರ್‌ಗಳಲ್ಲಿ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 47 ರನ್ ಗಳಿಸಿತು. ಸೊರಬ ವಕೀಲರ ತಂಡದ ಪ್ರದೀಪ್ ಎರಡು ಓವರ್‌ಗಳಲ್ಲಿ 14 ರನ್ ನೀಡುವ ಮೂಲಕ ನಾಲ್ಕು ವಿಕೆಟ್ ಕಬಳಿಸಿದರು. ಉಮೇಶ್ ಭಂಡಾರಿ ಎರಡು ಓವರ್‌ಗಳಲ್ಲಿ 18 ರನ್ ನೀಡುವ ಮೂಲಕ ಎರಡು ವಿಕೆಟ್ ಗಳಿಸಿದರೆ, ಮಂಜುನಾಥ್ ಒಂದು ಓವರ್‌ಗೆ 3 ರನ್ ನೀಡಿ 2 ವಿಕೆಟ್ ಹಾಗೂ ಶರತ್ ಒಂದು ಓವರ್‌ನಲ್ಲಿ 5 ರನ್ ನೀಡಿ ಒಂದು ವಿಕೆಟ್ ಪಡೆದರು.

ಸೊರಬ ವಕೀಲರ ತಂಡದ ಪ್ರದೀಪ್ ಮ್ಯಾನ್ ಆ್ ದಿ ಮ್ಯಾಚ್, ಬೆಸ್ಟ್ ಬ್ಯಾಟರ್ ಆಗಿ ಮುಜಾಮಿಲ್, ಬೆಸ್ಟ್ ಫೀಲ್ಡರ್ ಸಿ.ವೈ.ಅಶೋಕ್, ಬೆಸ್ಟ್ ಬೌಲರ್ ಪ್ರದೀಪ್, ಸರಣಿ ಶ್ರೇಷ್ಠ ಪ್ರಶಸ್ತಿಗೆ ಉಮೇಶ್ ಭಂಡಾರಿ ಭಾಜನರಾದರು. ಸೊರಬ ವಕೀಲರ ತಂಡದ ನಾಯಕ ಸಿ.ವೈ.ಅಶೋಕ್, ಎಸ್.ಅರುಣ್, ಪರಶುರಾಮ್, ರಾಘವೇಂದ್ರ, ಆದರ್ಶ, ಶರತ್, ಆಶೀಕ್ ನಾಗಪ್ಪ, ವಿನಯ್, ಆರ್.ಟಿ.ಮಂಜುನಾಥ್, ಗುರುಮೂರ್ತಿ, ಆನಂದ್ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net