ಪ್ರವಾಸಿಗರಿಗೆ ಮೈಸೂರು ಪಾಕ್ ವಿತರಿಸುವ ಮೂಲಕ ವಿಶ್ವ ಪ್ರವಾಸೋದ್ಯಮ ದಿನಾಚರಣೆ

48
Published on

ಮೈಸೂರು: ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಕೃಷ್ಣರಾಜ ಯುವ ಬಳಗದಿಂದ ನಗರದ ಮೃಗಾಲಯದ ಮುಂಭಾಗ ಪ್ರವಾಸಿಗರಿಗೆ ಮೈಸೂರು ಪಾಕ್ ಹಾಗೂ ಗುಲಾಬಿ ಹೂ ನೀಡಿ ಶುಭ ಕೋರಲಾಯಿತು.
ನಮ್ಮ ಇತಿಹಾಸ, ಪರಂಪರೆಯನ್ನು ಅರಿಯಲು ಪ್ರವಾಸಿ ತಾಣಗಳನ್ನು ಪೂರ್ವಿಕರು ನಿರ್ಮಿಸಿದ್ದಾರೆ. ಇವುಗಳನ್ನು ನೋಡುವುದರಿಂದ ನಮ್ಮ ಸಂಸ್ಕೃತಿ, ಪರಂಪರೆ ತಿಳಿಯುವುದಲ್ಲದೆ, ಮನಸ್ಸಿಗೂ ಉಲ್ಲಾಸ ಉಂಟಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ ಶುಶ್ರೂತ್‌ಗೌಡ ಅಭಿಪ್ರಾಯಪಟ್ಟರು.
ಪ್ರವಾಸ ಮಾಡುವುದರಿಂದ ದೇಹ ಮತ್ತು ಮನಸ್ಸಿಗೆ ಚೈತನ್ಯ ಹೆಚ್ಚಿ ಜೀವನೋತ್ಸಾಹ ವೃದ್ಧಿಸುತ್ತದೆ. ಪ್ರವಾಸಿ ತಾಣಗಳಿಗೆ ಜನರ ಭೇಟಿ ಹೆಚ್ಚಾಗುತ್ತದೆ. ಬದುಕಿನ ಜಂಜಾಟಗಳ ನಡುವೆ ತುಸು ವಿರಾಮ ದೊರಕಲಿದೆ ಎಂದರು.
ದೇಶ ಸುತ್ತು ಕೋಶ ಓದು ಎಂಬ ಮಾತಿನಂತೆ ಪ್ರವಾಸ ಮಾಡುವುದರಿಂದ ಜ್ಞಾನ ವೃದ್ಧಿಯಾಗುತ್ತದೆ. ವಿಶಾಲವಾಗಿ ಯೋಚಿಸುವ ದೃಷ್ಟಿಕೋನ ಬೆಳೆಯುತ್ತದೆ ಎಂದು ಹೇಳಿದರು
ಕೆಪಿಸಿಸಿ ಸದಸ್ಯ ನಜರ್‌ಬಾದ್ ನಟರಾಜ್, ಕೆ.ಆರ್. ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಕೃಷ್ಣರಾಜ ಯುವ ಬಳಗದ ಅಧ್ಯಕ್ಷ ನವೀನ್ ಕೆಂಪಿ, ಸದಸ್ಯರಾದ ಜಿ. ರಾಘವೇಂದ್ರ, ಮಹದೇವ, ವರುಣ ಮಹದೇವು, ರವಿಚಂದ್ರ, ಲೋಕೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net