ಪ್ರಯೋಜನಕಾರಿ ಯೋಜನೆ ನೀಡಿದೆ: ಎಲ್.ಆರ್.ಮಹದೇವಸ್ವಾಮಿ

LR MAHADEVASWAMY
Published on

ಶ್ರೀಸಾಮಾನ್ಯರಿಗೆ ಹಾಗೂ ಮಧ್ಯಮ ವರ್ಗದವರಿಗೆ ಕೈಗೆಟಕುವ ನಿಟ್ಟಿನಲ್ಲಿ ಬಜೆಟ್ ಇದೆ ಎಂದು ಬಿಜೆಪಿ ಗ್ರಾಮಾಂತರ ಘಟಕ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ತಿಳಿಸಿದ್ದಾರೆ.

ಆದಾಯ ತೆರಿಗೆ ವಿನಾಯಿತಿ, 2028ರ ವರೆಗೆ ಜನಜೀವನ ಮಿಷನ್ ಯೋಜನೆ ವಿಸ್ತರಣೆ, 5 ಐಐಟಿಗಳಲ್ಲಿ ಮೂಲ ಸೌಕರ್ಯ ಹೆಚ್ಚಳ,ಗ್ರಾಮೀಣ ಭಾಗದಲ್ಲಿ ಶೇ.100 ಕುಡಿಯುವ ನೀರು ಪೂರೈಕೆ ಗುರಿ, ನಗರಾಭಿವೃದ್ಧಿಗೆ 1 ಲಕ್ಷ ಕೋಟಿ ರೂ. ವಿಶೇಷ ಅನುದಾನ, ಬೀದಿ ಬದಿ ವ್ಯಾಪಾರಿಗಳಿಗೆ 30,000 ರೂ. ಸಾಲ ಸೌಲಭ್ಯ, ದೇಶದಲ್ಲಿ 50 ಪ್ರವಾಸಿ ತಾಣ ಅಭಿವೃದ್ಧಿ, ಹೊಸ ಆದಾಯ ತೆರಿಗೆ ಮಸೂದೆ ಮಂಡನೆ, ತಾಂತ್ರಿಕ ಸಂಶೋಧನೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್, ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲದ ಮಿತಿ 3 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ, ಸಣ್ಣ ಉದ್ಯಮಗಳಿಗೆ 20 ಕೋಟಿ ರೂ. ಗಳ ವರೆಗೆ ಸಾಲ ಸೌಲಭ್ಯ,ಅತೀ ಸಣ್ಣ ಉದ್ದಿಮೆಗಳಿಗೆ 20 ಸಾವಿರ ಕೋಟಿ ಅನುದಾನ, ದೇಶದ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಕ್ಯಾನ್ಸರ್ ಚಿಕಿತ್ಸಾ ವಿಭಾಗ ಆರಂಭ- ಹೀಗೆ ದೇಶದ ಜನತೆಗೆ ಪ್ರಯೋಜನಕಾರಿ ಅನೇಕ ಯೋಜನೆಗಳನ್ನು ಬಜೆಟ್ ನೀಡಿದೆ. ಮಧ್ಯಮ ವರ್ಗ ಹಾಗೂ ಬಡ ಜನತೆಗೆ ಸಾಕಷ್ಟು ಪ್ರಯೋಜನಕಾರಿಯಾಗಿದೆ. ದೇಶದ ಅಭಿವೃದ್ಧಿಗೆ ಪೂರಕವಾಗಿದೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net