‘ಪ್ರಮೀಳಾರ್ಜುನೀಯಂ’ ನಾಟಕ

Drama-games
Published on

ರಾಮಕೃಷ್ಣನಗರದ ನಟನ ರಂಗಮಂದಿರದಲ್ಲಿ ಆ.4ರಂದು ಸಂಜೆ 6.30ಕ್ಕೆ ‘ಪ್ರಮೀಳಾರ್ಜುನೀಯಂ’ ನಾಟಕ ಪ್ರದರ್ಶನ ಆಯೋಜಿಸಲಾಗಿದೆ. ಎಂ.ಎಲ್.ಶ್ರೀಕಂಠೇಶ ಗೌಡ ಅವರ ರಚನೆಯ ಸದರಿ ನಾಟಕವನ್ನು ನಟನ ರೆಪರ್ಟರಿ ತಂಡ ಪ್ರಸ್ತುತ ಪಡಿಸಲಿದೆ. ನಾಟಕಕ್ಕೆ ಸಂಗೀತ ದಿಗ್ವಿಜಯ ಹೆಗ್ಗೋಡು ಅವರದ್ದು. ನಟನದ ಪ್ರಾಂಶುಪಾಲ ಮೇಘ ಸಮೀರ ಅವರು ನಾಟಕವನ್ನು ವಿನ್ಯಾಸಗೊಳಿಸಿ ನಿರ್ದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net