ಪ್ರಧಾನಿ ಯೋಜನೆ ಹೆಸರಿನಲ್ಲಿ ಖಾತೆಗೆ ಕನ್ನ

cyber crime
Published on

ಬೆಂಗಳೂರು:
ಗುಟ್ಟಹಳ್ಳಿ ನಿವಾಸಿ ಲಾವಣ್ಯ ಅವರ ಮೊಬೈಲ್‌ಗೆ ಅ.8ರಂದು ಕರೆ ಮಾಡಿದ ಸೈಬರ್ ಕಳ್ಳರು ಪ್ರಧಾನ ಮಂತ್ರಿ ಯೋಜನೆಯಿಂದ 35 ಸಾವಿರ ರೂ.ನ್ನು ನಿಮ್ಮ ಖಾತೆಗೆ ಜಮೆ ಮಾಡಬೇಕಿದೆ ಎಂದು ನಂಬಿಸಿದ್ದರು.
ಅದಕ್ಕಾಗಿ ನಿಮ್ಮ ಬ್ಯಾಂಕ್ ಖಾತೆ ಮಾಹಿತಿ ಹಾಗೂ ಮೊಬೈಲ್‌ಗೆ ಬರುವ ಒಟಿಪಿ ನೀಡುವಂತೆ ಸೂಚಿಸಿದ್ದರು. ಇವರ ಮಾತನ್ನು ನಂಬಿದ ಲಾವಣ್ಯ ತಮ್ಮ ಬ್ಯಾಂಕ್ ಖಾತೆಯ ವಿವರ ಹಾಗೂ ಮೊಬೈಲ್‌ಗೆ ಬಂದ ಒಟಿಪಿಯನ್ನು ಸೈಬರ್ ಕಳ್ಳರಿಗೆ ತಿಳಿಸಿದ್ದರು. ಇದಾದ ಕೆಲ ಕ್ಷಣದಲ್ಲೇ ಸೈಬರ್ ಕಳ್ಳರು ಇವರ ಬ್ಯಾಂಕ್ ಖಾತೆಯಲ್ಲಿದ್ದ 8 ಸಾವಿರ ರೂ.ಗೆ ಕನ್ನ ಹಾಕಿದ್ದಾರೆ. ದಕ್ಷಿಣ ಸಿಇಎನ್ ಕ್ರೈಂ ಪೊಲೀಸರು ಪ್ರತ್ಯೇಕ ಮೂರು ಎ್ಐಆರ್ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net