ಪ್ರತೀಕಾರಕ್ಕೆ ಲೇಡಿಸ್ ಬಾರ್ ಮಾಲೀಕನ ಹತ್ಯೆ

Crime
Published on

ಬೆಂಗಳೂರು: ಉಡುಪಿ ಹಿರಿಯಡ್ಕ ಸಮೀಪ ನಡೆದಿದ್ದ ರೌಡಿ ಕಿಶೋರ್ ಶೆಟ್ಟಿ ಕೊಲೆ ಪ್ರತೀಕಾರಕ್ಕೆ ಲೇಡಿಸ್ ಬಾರ್ ಮಾಲೀಕ ಮನೀಶ್ ಶೆಟ್ಟಿ ಹತ್ಯೆ ಮಾಡಿರುವುದು ಕೇಂದ್ರ ವಿಭಾಗ ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ಅ.15ರಂದು ಬ್ರಿಗೇಡ್ ರಸ್ತೆಯಲ್ಲಿನ ಮಾಜಿ ಭೂಗತ ಪಾತಕಿ ರವಿಪೂಜಾರಿ, ಲೇಡ್ ಬಾರ್ ಮಾಲೀಕ ಮನೀಶ್ ಶೆಟ್ಟಿಯನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಇದರ ತನಿಖೆ ಕೈಗೊಂಡ ಕೇಂದ್ರ ವಿಭಾಗ ಪೊಲೀಸರು, ಆರೋಪಿಗಳಾದ ಶಶಿಕಿರಣ್, ನಿತ್ಯ, ಗಣೇಶ್ ಮತ್ತು ಅಕ್ಷಯ್ ಎಂಬುವರನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ 2 ತಿಂಗಳ ಹಿಂದೆ ಉಡುಪಿ ಹಿರಿಯಡ್ಕ ಸಮೀಪ ನಡೆದಿದ್ದ ಭೂಗತ ಪಾತಕಿ ವಿಕ್ಕಿ ಶೆಟ್ಟಿ ಸಹಚರ ಮತ್ತು ರೌಡಿ ಕಿಶೋರ್ ಶೆಟ್ಟಿ ಹತ್ಯೆಗೆ ಪ್ರತೀಕಾರವಾಗಿ ಮನೀಶ್ ಶೆಟ್ಟಿಯನ್ನು ಕೊಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

ಕಿಶೋರ್ ಶೆಟ್ಟಿ ಹತ್ಯೆ ಕೇಸಿನಲ್ಲಿ ಮನೀಶನನ್ನು ಆರೋಪಿಯನ್ನಾಗಿ ಮಾಡಿಲ್ಲ. ಆದರೆ, ಕಿಶೋರ್ ಶೆಟ್ಟಿ ಹತ್ಯೆಗೆ ಈತ ಹಣಕಾಸಿನ ನೆರವು ನೀಡಿದ್ದ ಕಾರಣಕ್ಕೆ ಆರೋಪಿಗಳು ಕೃತ್ಯ ಎಸಗಿರುವುದು ಒಪ್ಪಿಕೊಂಡಿದ್ದಾರೆ. ಇದಲ್ಲದೆ, ಈ ಕೊಲೆ ಹಿಂದೆ ಭೂಗತ ಪಾತಕಿ ವಿಕ್ಕಿ ಶೆಟ್ಟಿ ಕೈವಾಡ ಇರುವುದು ಸಹ ಗೊತ್ತಾಗಿದೆ. ಸಾಕ್ಷ್ಯಗಳನ್ನು ಕಲೆ ಹಾಕಲಾಗುತ್ತದೆ. ಈ ಕೇಸಿನಲ್ಲಿ ಮತ್ತಷ್ಟು ಮಂದಿ ಕೈವಾಡ ಇರುವುದು ಗೊತ್ತಾಗಿದ್ದು, ಬಂಧನಕ್ಕೆ ಬಲೆಬೀಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net