ಪ್ರತಿಭಾ ಕಾರಂಜಿಗೆ ಗ್ರಾಮಸ್ಥರ ಪ್ರೋತ್ಸಾಹ

nrp prathibha
ಗುಬ್ಬಿಗಾ ಸರ್ಕಾರಿ ಶಾಲೆಯಲ್ಲಿ ಆಯೋಜಿಸಿದ್ದ ಮೂಡಬಾಗಿಲು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಬಿಇಒ ಕೆ.ಆರ್.ಪುಷ್ಪಾ ಮಾತನಾಡಿದರು. ನಾಗರತ್ನಾ, ಅಶೋಕ್, ಮಧುಕುಮಾರ್, ಪೂರ್ಣೇಶ್, ಡಿ.ರಮೇಶ್, ಚಂದ್ರಶೇಖರ್ ಇತರರಿದ್ದರು.
Published on

ಎನ್.ಆರ್.ಪುರ: ಸರ್ಕಾರ ಪ್ರತಿಭಾ ಕಾರಂಜಿ, ಕ್ರೀಡಾಕೂಟಕ್ಕೆ ಕಡಿಮೆ ಅನುದಾನ ನೀಡುತ್ತಿದ್ದರೂ ಆಯಾ ಗ್ರಾಮದವರು ಊರಿನ ಹಬ್ಬ, ಜಾತ್ರೆಯಂತೆ ಕಾರ್ಯಕ್ರಮ ನಡೆಸಿ ಸಂಭ್ರಮಿಸುತ್ತಿದ್ದಾರೆ. ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆಯಾಗಲಿದೆ ಎಂದು ಬಿಇಒ ಕೆ.ಆರ್.ಪುಷ್ಪಾ ಹೇಳಿದರು.

ಮಂಗಳವಾರ ಗುಬ್ಬಿಗಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂಡಬಾಗಿಲು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳು ದೊಡ್ಡವರಾಗಿ ಜೀವನದಲ್ಲಿ ಸಾಧನೆ ಮಾಡಿದ ನಂತರ ನಡೆದು ಬಂದ ಹಾದಿಯನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.

ಗುಬ್ಬಿಗಾ ಗ್ರಾಪಂ ಅಧ್ಯಕ್ಷೆ ನಾಗರತ್ನಾ ಮಾತನಾಡಿ, ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಗ್ರಾಮಸ್ಥರು, ಗ್ರಾಪಂನಿಂದಲೂ ಸಹಕಾರ ನೀಡಿದ್ದೇವೆ. ವಿಶೇಷವಾಗಿ ದಾನಿಗಳು ಸಹಕಾರ ನೀಡಿದ್ದಾರೆ ಎಂದರು.

ತಾಲೂಕು ಕಸಾಪ ಅಧ್ಯಕ್ಷ ಪೂರ್ಣೇಶ್ ಮಾತನಾಡಿ, ಗುಬ್ಬಿಗಾ ಸರ್ಕಾರಿ ಶಾಲೆ ಮಾದರಿಯಾಗಿದೆ. ಮುಖ್ಯಶಿಕ್ಷಕ ಅಶೋಕ್ ಶಾಲಾ ಆವರಣದಲ್ಲಿ ಅಡಕೆ, ಶುಂಠಿ, ಬಾಳೆ ಬೆಳೆದು ಸರ್ಕಾರಿ ಶಾಲೆಯಲ್ಲಿ ವಿಶೇಷವಾಗಿ ಸಾಧನೆ ಮಾಡಿದ್ದಾರೆ. ಈ ತಿಂಗಳ ಕೊನೆಯಲ್ಲಿ ಕಸಾಪದಿಂದ ಗುಬ್ಬಿಗಾ ಶಾಲೆಯಲ್ಲಿ ಕನ್ನಡ ಕಾರ್ಯಕ್ರಮ ನಡೆಸಲಿದ್ದೇವೆ ಎಂದು ತಿಳಿಸಿದರು.

ದಾನಿ ಡಿ.ರಮೇಶ್ ಮಾತನಾಡಿ, ಕನ್ನಡದ ಶಾಲೆಗಳು ಉಳಿಯಬೇಕಾಗಿದೆ ಎಂದರು. ದಾನಿಗಳಾದ ಗದ್ದೇಮನೆ ಅಣ್ಣೇಗೌಡ, ಕನ್ಯಾಕುಮಾರಿ ಕಂರ್ಟ್ ಮಾಲೀಕ ಡಿ.ರಮೇಶ್ ಇತರ ದಾನಿಗಳನ್ನು ಸನ್ಮಾನಿಸಲಾಯಿತು. ಗಾಯಕ ಶ್ರೀನಿವಾಸ್ ಮತ್ತು ಸಂಗಡಿಗರು ರೈತ ಗೀತ ಹಾಡಿದರು. 7 ಶಾಲೆಯ ಮಕ್ಕಳು ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಗುಬ್ಬಿಗಾ ಗ್ರಾಪಂ ಉಪಾಧ್ಯಕ್ಷ ಶಂಕರ್, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಧುಕುಮಾರ್, ಎಸ್‌ಡಿಎಂಸಿ ಅಧ್ಯಕ್ಷ ಚಂದ್ರಶೇಖರ್, ಉಪಾಧ್ಯಕ್ಷೆ ಸವಿತಾ, ದಾನಿಗಳಾದ ಜಯಣ್ಣ, ಜಯರಾಂ, ಅಶೋಕ್, ನಂಜುಂಡಪ್ಪ, ಗಿರೀಶನಾಯ್ಕ, ಸೇವ್ಯಾನಾಯಕ್, ಶ್ರೀನಿವಾಸ್, ಸೀಮಾ, ರಾಜನಾಯ್ಕ, ವಿಜಯಕುಮಾರ್, ತಿಮ್ಮೇಶ್, ಮಂಜಪ್ಪ, ಆರ್.ನಾಗರಾಜ್, ಓಂಕಾರಪ್ಪ, ದೇವರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net