ಪ್ರಜಾಪ್ರಭುತ್ವ ದಿನಾಚರಣೆ

pitike
ಆಲ್ದೂರು ಗ್ರಂಥಾಲಯದಲ್ಲಿ ಸಂವಿಧಾನದ ಪೀಠಿಕೆಯನ್ನು ಓದುವ ಮೂಲಕ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಆಚರಿಸಲಾಯಿತು. ನವರಾಜ್, ಕೆಂಚಯ್ಯ, ಪರಮೇಶ್ ಮತ್ತಿತರರಿದ್ದರು.
Published on

ಆಲ್ದೂರು: ಪಟ್ಟಣದ ಗ್ರಂಥಾಲಯದಲ್ಲಿ ಸಂವಿಧಾನದ ಪೀಠಿಕೆಯನ್ನು ಓದುವ ಮೂಲಕ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಆಚರಿಸಲಾಯಿತು.
ಅಂಬೇಡ್ಕರ್ ಹೋರಾಟ ವೇದಿಕೆ ಅಧ್ಯಕ್ಷ ನವರಾಜ್ ಮಾತನಾಡಿ, ಜನರಿಂದ, ಜನರಿಗಾಗಿ, ಜನರೇ ನಡೆಸುವ ಆಡಳಿತ ವ್ಯವಸ್ಥೆಗೆ ಪ್ರಜಾಪ್ರಭುತ್ವ ಎಂದು ಕರೆಯುತ್ತೇವೆ. ವಿಶ್ವ ಸಂಸ್ಥೆ 2007 ಸೆಪ್ಟೆಂಬರ್ 15ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸಬೇಕೆಂದು ಜಾರಿಗೆ ತಂದಿತು. ಅದರ ನೆನಪಿಗಾಗಿ ನಾವು ಈ ದಿನವನ್ನು ಆಚರಿಸುತ್ತಿದ್ದೇವೆ. ಈ ಜಗತ್ತಿನಲ್ಲಿ ಪ್ರಜಾಪ್ರಭುತ್ವ ಉನ್ನತವಾದ ವ್ಯವಸ್ಥೆಯಾಗಿದೆ ಎಂದರು.
ಅಂಬೇಡ್ಕರ್ ಬರೆದ ಸಂವಿಧಾನದಿಂದ ಭಾರತದ ಜನರೆಲ್ಲರೂ ಸಮಾನ ಹಕ್ಕುಗಳನ್ನು ಪಡೆಯಲು ಸಾಧ್ಯವಾಗಿದೆ ಎಂದು ಹೇಳಿದರು. ಆಲ್ದೂರು ಗ್ರಾಪಂ ಮಾಜಿ ಸದಸ್ಯ ಸುಂದರ್, ಪರಮೇಶ್, ರಮೇಶ್, ಯೋಗೇಶ್, ಜಗದೀಶ್, ಗ್ರಂಥಪಾಲಕ ಕೆಂಚಯ್ಯ, ಹರೀಶ್, ಮಹೇಶ್, ಮಂಜಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net