ಪೊಲೀಸ್ ಕೊಲೆ ಯತ್ನ ಮತ್ತೆ ಆರು ಮಂದಿ ಬಂಧನ ಮಾಯಾ ಗ್ಯಾಂಗ್ ಕೃತ್ಯ

Published on

ಮಂಗಳೂರು: ಪೊಲೀಸ್ ಹೆಡ್ ಕಾನ್ ಸ್ಟೇಬಲ್ ಗಣೇಶ್ ಕಾಮತ್ ಅವರಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಮತ್ತೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಅನೀಶ್ ಅಶ್ರಫ್,ಅಬ್ದುಲ್ ಖಾದರ್,ಶೇಖ್ ಮೊಹಮ್ಮದ್ ಹಾರಿಸ್,ಮೊಹಮ್ಮದ್ ಖಿಯಾಸ್,ರಾಹಿಲ್,ಮೊಹಮ್ಮದ್ ನವಾಜ್ ಬಂಧಿತರು. ಈ ಮೊದಲು ಇಬ್ಬರ ಬಂಧನವಾಗಿದೆ.

ಮಂಗಳೂರಿನಲ್ಲಿ ಕಳೆದ ವರ್ಷ ನಡೆದ ಗೋಲಿಬಾರ್ ಗೆ ಪ್ರತೀಕಾರವಾಗಿ ಪೊಲೀಸ್ ಮೇಲೆ ಚೂರಿಯಿಂದ ಇರಿಯಲಾಗಿದೆ. ಇದು ಮಾಯಾ ಗ್ಯಾಂಗ್ ಕೃತ್ಯ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net