ಪೊಲೀಸರಿಂದ ಇಂದು ಮಾಸಿಕ ಜನಸಂಪರ್ಕ ದಿವಸ

cp
Published on

ಬೆಂಗಳೂರು : ರಾಜಧಾನಿಯ ನಾಗರಿಕರ ದುಃಖ ದುಮ್ಮಾನ ಕೇಳಲು ಶನಿವಾರ ಬೆಳಗ್ಗೆ 11 ರಿಂದ 1 ಗಂಟೆವರೆಗೆ ನಗರದ ಎಲ್ಲ ಪೊಲೀಸ್ ಠಾಣೆಗಳಲ್ಲಿ ಜನ ಸಂಪರ್ಕ ನಡೆಯಲಿದೆ.

ನಾಗರಿಕರ ಆಹವಾಲು ಸ್ವೀಕರಿಸುವ ಸಲುವಾಗಿ ಪ್ರತಿ ತಿಂಗಳು 4ನೇ ಶನಿವಾರ ಜನ ಸಂಪರ್ಕ ಸಭೆಯನ್ನು ನಡೆಸಲು ಆಯುಕ್ತ ಕಮಲ್ ಪಂತ್ ನಿರ್ಧರಿಸಿದ್ದಾರೆ. ಇದರ ಮೊದಲ ಸಭೆ ಶನಿವಾರ ನಡೆಯಲಿದ್ದು, ಖುದ್ದು ಆಯುಕ್ತರು 2 ಠಾಣೆಗಳಿಗೆ ಭೇಟಿ ನೀಡಿ ಸಾರ್ವಜನಿಕರ ದೂರು ಸ್ವೀಕರಿಸಲಿದ್ದಾರೆ. ಹೆಚ್ಚುವರಿ ಆಯುಕ್ತರು, ಜಂಟಿ ಆಯುಕ್ತರು ಹಾಗೂ ಡಿಸಿಪಿಗಳು ಕೂಡಾ ಪ್ರತ್ಯೇಕವಾಗಿ ಠಾಣೆಗಳಲ್ಲಿ ಜನರೊಂದಿಗೆ ಸಂವಾದ ನಡೆಸಲಿದ್ದಾರೆ.

ಅಧಿಕಾರಿಗಳು ಎಲ್ಲೆಲ್ಲಿ ಲಭ್ಯ?

ಅಧಿಕಾರಿ ಠಾಣೆಗಳು

ಆಯುಕ್ತ ಕಮಲ್ ಪಂತ್ - ಪುಲಿಕೇಶಿ ನಗರ, ಮಲ್ಲೇಶ್ವರ

ಹೆಚ್ಚುವರಿ ಆಯುಕ್ತ ಮುರುಗನ್ - ಪುಲಿಕೇಶಿ ನಗರ, ಬಾಣಸವಾಡಿ

ಹೆಚ್ಚುವರಿ ಆಯುಕ್ತ ಸೌಮೆಂದು ಮುಖರ್ಜಿ- ಹನುಮಂತನಗರ, ಬ್ಯಾಟರಾಯನಪುರ

ಜಂಟಿ ಆಯುಕ್ತ ಸಂದೀಪ್ ಪಾಟೀಲ್ - ಚಾಮರಾಜಪೇಟೆಯ ಸಿಸಿಬಿ ಕಚೇರಿ

ಡಿಸಿಪಿ ಎಂ.ಎನ್.ಅನುಚೇತ್ - ಅಶೋಕ ನಗರ

ಡಿಸಿಪಿ ಇಶಾ ಪಂತ್ - ಪುಲಿಕೇಶಿ ನಗರ, ಬಾಣಸವಾಡಿ

ಡಿಸಿಪಿ ಡಾ.ಸಂಜೀವ್ ಪಾಟೀಲ್ - ವಿಜಯನಗರ

ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ - ಆರ್.ಟಿ.ನಗರ

ಡಿಸಿಪಿ ಹರೀಶ್ ಪಾಂಡೆ - ಹನುಮಂತನಗರ

ಡಿಸಿಪಿ ಜೋಶಿ ಶ್ರೀನಾಥ್ ಮಹದೇವ್- ಕೋರಮಂಗಲ

ಡಿಸಿಪಿ ಸಿ.ಕೆ.ಬಾವಾ - ಯಲಹಂಕ

ಡಿಸಿಪಿ ಡಿ.ದೇವರಾಜ್ -ಕೆ.ಆರ್.ಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net