

ಅರಸೀಕೆರೆ: ನಗರದ ಹೃದಯ ಭಾಗದಲ್ಲಿ ನಿರ್ಮಿಸಲಾಗಿರುವ 7 ಕೋಟಿ ರೂ. ವೆಚ್ಚದ ಪೊಲೀಸ್ ವಸತಿ ಸಮುಚ್ಚಯ ಕೊಠಡಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಆರಕ್ಷಕ ಇಲಾಖೆ ಸಿಬ್ಬಂದಿ ಹಿತಕಾಯಲು ಸರ್ಕಾರ ಬದ್ಧವಾಗಿದ್ದು ನೌಕರರು ಆತ್ಮಸ್ಥೈರ್ಯ ಕಳೆದುಕೊಳ್ಳದೆ ಕೆಲಸ ಮಾಡಬೇಕು ಎಂದು ಧೈರ್ಯ ತುಂಬಿದರು.
ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ಮಾತನಾಡಿ, ಜಿಲ್ಲೆಯ ಪ್ರಗತಿಗೆ ನನ್ನ ಸಹಕಾರ ನಿರಂತರವಾಗಿದೆ ಎಂದು ಭರವಸೆ ನೀಡಿದರು. ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿದರು.
ಎಸ್ಪಿ ಶ್ರೀ ನಿವಾಸಗೌಡ, ಜಿ.ಪಂ.ಸಿಇಒ ಬಿ.ಎ.ಪರಮೇಶ್, ತಹಸೀಲ್ದಾರ್ ಎಂ.ಜಿ. ಸಂತೋಷ್ ಕುಮಾರ್, ತಾಪಂ ಅಧ್ಯಕ್ಷೆ ರೂಪಾ ಗುರುಮೂರ್ತಿ, ಇಒ ನಟರಾಜ್ ಇದ್ದರು.